ಬೆಂಗಳೂರು: ನಿವಾರ್ ಸ್ಲೈಕೋನ್ ಎಫೆಕ್ಟ್ ನಡುವೆಯೂ ಇಂಡಸ್ಟ್ರಿಯಲ್ ಡಿಸ್ಪ್ಯೂಟ್ ಆಕ್ಟ್ ವಿರುದ್ಧ ಎಐಟಿಯುಸಿ ಕಾರ್ಮಿಕರು ಛತ್ರಿ ಹಿಡಿದುಕೊಂಡು ಧರಣಿಯ ಭಾಗಿಯಾಗಿದ್ದಾರೆ.
ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ನವರೆಗೆ ಕಾರ್ಮಿಕರು ಮತ್ತು ಆಟೋ ಚಾಲಕರು ಮೆರವಣಿಗೆಯಲ್ಲಿ ಭಾಗಿಯಾದರು. ಪ್ರತಿಭಟನೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗಿದ್ದು, ಕಾರ್ಮಿಕ ನೀತಿ ಕಾಯ್ದೆ ವಿರೋಧಿಸಿ ರ‍್ಯಾಲಿ ನಡೆಸಲಾಯಿತು. ಮಾಲೀಕರ ಪರವಾದ ನೀತಿ ಕಾರ್ಮಿಕರಿಗೆ ಬೇಡ, ಕಾರ್ಮಿಕರಿಗೆ ಇನ್ನ್ಮುಂದೆ ನ್ಯಾಯ ಕೇಳಲು ಆಗಲ್ಲ, ಖಾಯಂ ಉದ್ಯೋಗ ಸಹ ಈ ಕಾಯ್ದೆಯಿಂದ ಕೇಳಲು ಆಗಲ್ಲ, ಇದು ಸಾಂಕೇತಿಕ ಹೋರಾಟ ಮಾತ್ರ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಧರಣಿ ನಡೆಸಿದ್ದಾರೆ.
ಇನ್ನು ಪ್ರತಿಭಟನೆಯಲ್ಲಿ ಆಟೋಗಳು, ಇಂಡಸ್ಟ್ರಿಯಲ್ ನೌಕರರು, ಕೇಂದ್ರ ಸಂಘಟನೆ ಎಐಟಿಯುಸಿ, ಸಿಐಟಿಯುಸಿ, ಸ್ವಾತಂತ್ರ್ಯ ಫೆಡರೇಷನ್ಗಳು ಸಂಘಟನೆಗಳು ಭಾಗಿಯಾಗಿದ್ದವು.
ಕರ್ನಾಟಕ ಇಂಡಸ್ಟ್ರೀಸ್ ವರ್ಕರ್ಸ್ ಫೆಡರೇಷನ್ನ, ಉಪಾಧ್ಯಕ್ಷ, ಗಂಗಬೈರಯ್ಯ ನೇತೃತ್ವದಲ್ಲಿ ನಡೆಯುತ್ತಿರುವ ರ‍್ಯಾಲಿ ನಡೆಯುತ್ತಿದೆ. ಒಂದೆಡೆ ಆಟೋ ಚಾಲಕರ ಪ್ರತಿಭಟನೆಯಾದರೆ ಮತ್ತೊಂದೆಡೆ ಎಐಟಿಯುಸಿ ಕಾರ್ಮಿಕರಿಂದ ಹೋರಾಟ ನಡೆಯುತ್ತಿದೆ.