ETV Bharat / city

ಅಂಗನವಾಡಿಗಳಲ್ಲೇ ಎಲ್​ಕೆಜಿ, ಯುಕೆಜಿ ಆರಂಭಕ್ಕೆ ಆಗ್ರಹಿಸಿ ಪ್ರತಿಭಟನೆಗೆ ಕರೆ - ಅಂಗನವಾಡಿಗಳಲ್ಲಿ ಎಲ್​ಕೆಜಿ ಯುಕೆಜಿ ಆರಂಭಿಸಲು ಪ್ರತಿಭಟನೆ

ಎಲ್​ಕೆಜಿ, ಯುಕೆಜಿ ಕೇಂದ್ರ ತೆರೆಯುವ ಬದಲು ಅಂಗನವಾಡಿ ಕೇಂದ್ರಗಳಲ್ಲೇ ಆರಂಭಿಸಬೇಕೆಂದು ಆಗ್ರಹಿಸಿ ಎಐಟಿಯುಸಿ, ರಾಜ್ಯ ಅಂಗನವಾಡಿ ಕಾರ್ಯಕರ್ತರ ಸಂಘಟನೆ ಸೆ. 21 ರಂದು ಪ್ರತಿಭಟನೆ ಮಾಡಲು ನಿರ್ಧರಿಸಿದೆ.

AITUC protest call for to start LKG UKG in Anganawadi
ಅಂಗನವಾಡಿ ಪ್ರತಿಭಟನೆಗೆ ಕರೆ
author img

By

Published : Sep 18, 2020, 9:39 PM IST

ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಪ್ರತ್ಯೇಕವಾಗಿ ಎಲ್​ಕೆಜಿ, ಯುಕೆಜಿ ಕೇಂದ್ರ ತೆರೆಯುವ ಬದಲು ಅಂಗನವಾಡಿ ಕೇಂದ್ರಗಳಲ್ಲೇ ಆರಂಭಿಸಬೇಕೆಂದು ಆಗ್ರಹಿಸಿ ಎಐಟಿಯುಸಿ, ರಾಜ್ಯ ಅಂಗನವಾಡಿ ಕಾರ್ಯಕರ್ತರ ಸಂಘಟನೆ ಸೆ. 21 ರಂದು ಮೈಸೂರು ಬ್ಯಾಂಕ್ ಸರ್ಕಲ್​​ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಅಂಗನವಾಡಿಗಳಲ್ಲೇ ಎಲ್​ಕೆಜಿ, ಯುಕೆಜಿ ಆರಂಭಕ್ಕೆ ಆಗ್ರಹಿಸಿ ಪ್ರತಿಭಟನೆಗೆ ಕರೆ

ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ಅಭಿನಂದನಾ ಕಾರ್ಯದರ್ಶಿ ಜಯಮ್ಮ ಮಾತನಾಡಿ, 3-6 ವರ್ಷದ ಮಕ್ಕಳು ಅಂಗನವಾಡಿಯಿಂದಲೇ ಸರ್ಕಾರಿ ಶಾಲೆಗಳ ಎಲ್​ಕೆಜಿ, ಯುಕೆಜಿಗೆ ಹೋಗುತ್ತಾರೆ. ಇದರಿಂದ ಅಂಗನವಾಡಿಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಲಿದೆ. 2016 ರಿಂದಲೇ ಅಂಗನವಾಡಿ ಕೇಂದ್ರಗಳನ್ನು ಬಲಪಡಿಸಬೇಕು ಎಂಬ ಕಾನೂನಿದೆ. ಆದರೂ ರಾಜ್ಯ ಸರ್ಕಾರ ತಪ್ಪು ನಡೆ ಇಡುತ್ತಿದೆ ಎಂದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕೊಟ್ಟು, ಮಕ್ಕಳಿಗೆ ಮೂಲಸೌಕರ್ಯ ಕೊಡುವಂತೆ 2019 ರಿಂದಲೇ ಹೋರಾಟ ಮಾಡಿದರೂ, ಈ ಬಗ್ಗೆ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಅಂಗನವಾಡಿಗಳ ಅಳಿವು ಉಳಿವಿನ ಪ್ರಶ್ನೆ ಇದಾಗಿದ್ದು, ರಾಜ್ಯಾದ್ಯಂತ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಜಯಮ್ಮ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.