ETV Bharat / city

ಮ್ಯಾನೇಜ್ಮೆಂಟ್‌ಗೆ ಮನಸಿಲ್ಲ, ಶಿಕ್ಷಣ ಇಲಾಖೆಗೆ ಅಧಿಕಾರವಿಲ್ಲ; ದೊಡ್ಡಬಳ್ಳಾಪುರದ ಅನುದಾನಿತ ಶಾಲೆ ಸಮಸ್ಯೆ ಕೇಳೋರೇ ಇಲ್ಲ!

ಊರಿನ ನೆನಪಿಗಾಗಿ 35 ವರ್ಷಗಳ ಹಿಂದೆ ಶ್ರೀರಂಗನಾಥ ಪ್ರೌಢಶಾಲೆ ಕಟ್ಟಿಸಲಾಗಿತ್ತು. ಆದರೆ, ಇಂದು ಶಾಲಾ ಮಾಲೀಕರಿಗೆ ಶಾಲೆಯ ನೆನಪೇ ಇಲ್ಲ, ಮಕ್ಕಳಿಗೆ ಕನಿಷ್ಠ ಮೂಲ ಸೌಕರ್ಯ ಕಲ್ಪಿಸುವ ಸೌಜನ್ಯ ಸಹ ಆಡಳಿತ ಮಂಡಳಿಯವರಿಗೆ ಇಲ್ಲದಂತಾಗಿದೆ. ದೊಡ್ಡಬಳ್ಳಾಪುರ ತಾಲೂಕಿನ ಮಲ್ಲೋಹಳ್ಳಿಯ ಶ್ರೀರಂಗನಾಥ ಪ್ರೌಢಶಾಲೆ ಸಮಸ್ಯೆಗಳಿಗೆ ಮುಕ್ತಿ ಯಾವಾಗ ಅನ್ನೋದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ.

Aided school children and teachers facing problems in Doddaballapur taluk, bangalore rural
ಮ್ಯಾನೇಜ್ಮೆಂಟ್‌ಗೆ ಮನಸಿಲ್ಲ, ಶಿಕ್ಷಣ ಇಲಾಖೆಗೆ ಅಧಿಕಾರವಿಲ್ಲ; ದೊಡ್ಡಬಳ್ಳಾಪುರದ ಅನುದಾನಿತ ಶಾಲೆ ಸಮಸ್ಯೆ ಕೇಳೋರೇ ಇಲ್ಲ!
author img

By

Published : Oct 5, 2021, 6:17 PM IST

Updated : Oct 5, 2021, 10:43 PM IST

ದೊಡ್ಡಬಳ್ಳಾಪುರ(ಬೆಂ.ಗ್ರಾಮಾಂತರ ಜಿಲ್ಲೆ): ತಾಲೂಕಿನ ಮಲ್ಲೋಹಳ್ಳಿಯ ಶ್ರೀರಂಗನಾಥ ಪ್ರೌಢಶಾಲೆಯನ್ನು 35 ವರ್ಷಗಳ ಹಿಂದೆ ಕಲ್ಲಿನ ಕಟ್ಟಡದಲ್ಲಿ ಆರಂಭಿಸಲಾಗಿತ್ತು. ಗ್ರಾಮದ ರಾಜಗೋಪಾಲ್ ಎಂಬುವರು ತಮ್ಮ ಊರಿನ ನೆನಪಿಗಾಗಿ ಶಾಲೆಯನ್ನ ಕಟ್ಟಿಸಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಶಾಲೆಯಲ್ಲಿ ಸೌಲಭ್ಯಗಳಿಲ್ಲದೆ ಶಾಲೆ ಸೊರಗಿ ಹೋಗಿದೆ.

ಮ್ಯಾನೇಜ್ಮೆಂಟ್‌ಗೆ ಮನಸಿಲ್ಲ, ಶಿಕ್ಷಣ ಇಲಾಖೆಗೆ ಅಧಿಕಾರವಿಲ್ಲ; ದೊಡ್ಡಬಳ್ಳಾಪುರದ ಅನುದಾನಿತ ಶಾಲೆ ಸಮಸ್ಯೆ ಕೇಳೋರೇ ಇಲ್ಲ!

ಸುತ್ತಮುತ್ತಲಿನ ಐದಾರು ಗ್ರಾಮಗಳ ವಿದ್ಯಾರ್ಥಿಗಳಿಗೆ ಶ್ರೀರಂಗನಾಥ ಪ್ರೌಢಶಾಲೆ ಹತ್ತಿರ ಇದ್ದು ವಿದ್ಯಾಭ್ಯಾಸಕ್ಕೆ ಅನುಕೂಲವಾಗಿತ್ತು. ಗ್ರಾಮೀಣ ಭಾಗದಲ್ಲಿನ ಅನುದಾನಿತ ಖಾಸಗಿ ಶಾಲೆಯಾಗಿದ್ದರು ಸಾಕಷ್ಟು ವಿದ್ಯಾರ್ಥಿಗಳು ಶಾಲೆಗೆ ಬರುತ್ತಿದ್ದರು, ಈಗಲೂ 8, 9 ಹಾಗೂ 10ನೇ ತರಗತಿಯಲ್ಲಿ 20 ವಿದ್ಯಾರ್ಥಿನಿಯರು ಸೇರಿ 84 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಪ್ರಾರಂಭದಲ್ಲಿ ಶಾಲಾ ಆಡಳಿತ ಮಂಡಳಿಗೆ ಇದ್ದ ಉತ್ಸಾಹ ಬತ್ತಿ ಹೋಗಿದೆ. ಇವರು ಇತ್ತ ತಿರುಗಿ ನೋಡಿಲ್ಲ. ಶಾಲೆಯ ಅಭಿವೃದ್ಧಿ ಕುರಿತು ಒಂದು ದಿನ ಕೂಡ ಸಭೆ ನಡೆಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.

ಶಾಲಾ ಅವರಣದಲ್ಲಿ ಹೆಣ್ಣು ಮಕ್ಕಳಿಗೆ ಶೌಚಾಲಯ ಇದ್ದರು ಬಳಸುವ ಸ್ಥಿತಿಯಲ್ಲಿ ಇಲ್ಲ, ಗಂಡು ಮಕ್ಕಳು ಶೌಚಾಲಯಕ್ಕಾಗಿ ಹೊಲಗದ್ದೆಗಳಿಗೆ ಹೋಗಬೇಕು. ಹೊಲದ ಮಾಲೀಕರಿಗೆ ಕಂಡರೇ ಬೈಸ್ಕೊಂಡ್ ಬರ್ಬೇಕು. ಶಾಲಾ ಅವರಣದಲ್ಲಿನ ಬೋರ್​​ವೆಲ್ ಕೆಟ್ಟು ಎಷ್ಟೋ ದಿನಗಳಾಗಿದ್ದು, ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ಬಳಸುವ ನೀರನ್ನು ವಿದ್ಯಾರ್ಥಿಗಳು ಊರಿನಿಂದ ಹೊತ್ಕೊಂಡು ತರಬೇಕಾದ ಸ್ಥಿತಿ ಇದೆ. ಮಳೆ ಬಂದಾಗ ಕೊಠಡಿ ಸೋರುತ್ತೆ, ಗೋಡೆಗಳು ಬಿರುಕು ಬಿಟ್ಟಿದ್ದು, ಬೀಳುವ ಸ್ಥಿತಿಯಲ್ಲಿದ್ದು ವಿದ್ಯಾರ್ಥಿಗಳು ಭಯದಲ್ಲಿ ಪಾಠ ಕೇಳಬೇಕು ಪರಿಸ್ಥಿತಿ ನಿರ್ಮಾಣವಾಗಿದೆ.

ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಿಲ್ಲ

ಶಾಲೆಗೆ ಮೂಲ ಸೌಕರ್ಯ ಕಲ್ಪಿಸುವಂತೆ ಶಾಲೆಯ ಶಿಕ್ಷಕರು ಹಲವು ಬಾರಿ ಮನವಿ ಮಾಡಿದರೂ ಶಾಲಾ ಆಡಳಿತ ಮಂಡಳಿ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ, ಸದ್ಯ ಶಾಲೆಯಲ್ಲಿ ಕನ್ನಡ, ಇಂಗ್ಲಿಷ್, ಸಮಾಜ ಮತ್ತು ವಿಜ್ಞಾನ ಶಿಕ್ಷಕರಿದ್ದು ಗಣಿತ ಮತ್ತು ಹಿಂದಿ ಶಿಕ್ಷಕರ ಹುದ್ದೆ ಖಾಲಿ ಇದೆ, ಗಣಿತ ಮತ್ತು ಹಿಂದಿ ವಿಷಯಗಳಿಗೆ ಅತಿಥಿ ಶಿಕ್ಷಕರು ಪಾಠ ಮಾಡುತ್ತಿದ್ದು, ಅವರಿಗೆ ಗೌರವ ಭತ್ಯೆಯನ್ನ ನಾಲ್ವರು ಶಿಕ್ಷಕರು ತಮ್ಮ ಸಂಬಳದಲ್ಲಿ ಕೊಡುತ್ತಿರುವುದು ಇಲ್ಲಿನ ಸಮಸ್ಯೆಗಳಿಗೆ ಹಿಡಿದ ಕೈಗನ್ನಡಿಯಂತಿದೆ.

ಮುಖ್ಯೋಪಾಧ್ಯಾಯರ ಹುದ್ದೆ ಭರ್ತಿಯಾಗಿಲ್ಲ

ಶ್ರೀರಂಗನಾಥ ಪ್ರೌಢ ಶಾಲೆಗೆ 2019 ರಲ್ಲಿ ಮುಖ್ಯೋಪಾಧ್ಯಾಯರಾಗಿದ್ದ ನರಸಿಂಹಮೂರ್ತಿ ನಿವೃತ್ತರಾದ ನಂತರ ಶಾಲೆಗೆ ಮುಖ್ಯೋಪಾಧ್ಯಾಯರ ಹುದ್ದೆ ಭರ್ತಿಯಾಗಿಲ್ಲ, ಸದ್ಯ ಪ್ರಬಾರಿ ಮುಖ್ಯೋಪಾಧ್ಯಾಯರಾಗಿ ವೆಂಕಟೇಶ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಜೇಷ್ಠತೆಯ ಆಧಾರದಲ್ಲಿ ತಮಗೆ ಮುಖ್ಯೋಪಾಧ್ಯಾಯರ ಸ್ಥಾನವನ್ನು ಕೊಡದ ಆಡಳಿತ ಮಂಡಳಿ ಸರ್ಕಾರದಿಂದ ಸಿಗಬೇಕಿದ್ದ ಸೌಲಭ್ಯ ಕಿತ್ತುಕೊಂಡಿದ್ದಾರೆಂದು ವೆಂಕಟೇಶ್‌ ತಮ್ಮ ನೋವು ತೊಡಿಕೊಂಡಿದ್ದಾರೆ.

ಶಾಲೆಯ ಜಾಗದ ಬಗ್ಗೆ ಆಡಳಿತ ಮಂಡಳಿ ಮತ್ತು ಗ್ರಾಮದ ಕೆಲವು ವ್ಯಕ್ತಿಗಳೊಂದಿಗೆ ವಿವಾದ ಇರುವುದರಿಂದ ಶಾಲಾ ಆಡಳಿತ ಮಂಡಳಿ ಮೂಲ ಸಮಸ್ಯೆಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನವಹಿಸಿ ಶಾಲೆಯ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕಿದೆ.

Last Updated : Oct 5, 2021, 10:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.