ETV Bharat / city

ಕೃಷಿ ಅಧಿಕಾರಿಗಳು ರೈತ ಸ್ನೇಹಿಗಳಾಗಬೇಕು: ಕೃಷಿ ಸಚಿವ ಬಿ.ಸಿ.ಪಾಟೀಲ್ - ಜಿಕೆವಿಕೆ ಕ್ಯಾಂಪಸ್​ನ ಕುವೆಂಪು ಸಭಾಂಗಣ

ಈ ಬಾರಿ ಶೇ. 101ರಷ್ಟು ಬಿತ್ತನೆ ಆಗಿರುವುದು ಕೃಷಿ ಇಲಾಖೆಯ ಸಾಧನೆಯಾಗಿದೆ. ಪ್ರಧಾನಿಯವರು ಆಹಾರ ಉತ್ಪಾದನೆ ಹಾಗೂ ಕೃಷಿಗೆ ಹೆಚ್ಚು ಒತ್ತು ನೀಡಿ, ಅನುದಾನ ನೀಡುತ್ತಿದ್ದಾರೆ. ಅಧಿಕಾರಿಗಳು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗಳ ಮಾಹಿತಿ ನೀಡಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದರು.

Agriculture Officers Should Be Farmer Friendly: Agriculture Minister BC Patel
ಕೃಷಿ ಅಧಿಕಾರಿಗಳು ರೈತ ಸ್ನೇಹಿಗಳಾಗಬೇಕು: ಕೃಷಿ ಸಚಿವ ಬಿ.ಸಿ.ಪಾಟೀಲ್
author img

By

Published : Sep 10, 2020, 4:34 PM IST

ಬೆಂಗಳೂರು: ಕೃಷಿ ಅಧಿಕಾರಿಗಳು ರೈತರ ಸ್ನೇಹಿಗಳಾಗುವುದರ ಜೊತೆಗೆ ರೈತರಿಗೆ ಸ್ಥಳೀಯವಾಗಿ ಸಿಗುವಂತಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಸೂಚಿಸಿದರು.

ಕೃಷಿ ಅಧಿಕಾರಿಗಳು ರೈತ ಸ್ನೇಹಿಗಳಾಗಬೇಕು: ಕೃಷಿ ಸಚಿವ ಬಿ.ಸಿ.ಪಾಟೀಲ್

ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್​ನ ಕುವೆಂಪು ಸಭಾಂಗಣದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಕೃಷಿ ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು. ಅಕೃಷಿ ಅಧಿಕಾರಿಗಳು ರೈತರ ಸ್ನೇಹಿಗಳಾಗುವುದರ ಜೊತೆಗೆ ರೈತರಿಗೆ ಅಧಿಕಾರಿಗಳು ಸ್ಥಳೀಯವಾಗಿ ಸಿಗುವಂತಾಗಬೇಕು. ಕೃಷಿ ಇಲಾಖೆಯ ಅಭಿವೃದ್ಧಿ ಹಾಗೂ ರೈತರಿಗೆ ಅನುಕೂಲವಾಗುವ ರೀತಿ ಕೃಷಿ ಅಧಿಕಾರಿಗಳು ಯೋಜನೆಗಳನ್ನು ರೂಪಿಸಬೇಕು. ಅಧಿಕಾರಿಗಳು ರೈತರ ಅಭಿವೃದ್ಧಿಗಾಗಿ ನೀಡುವ ಸಲಹೆಗಳನ್ನು ಸ್ವೀಕರಿಸಲಾಗುವುದು.

ಈ ಬಾರಿ ಶೇ. 101ರಷ್ಟು ಬಿತ್ತನೆ ಆಗಿರುವುದು ಇಲಾಖೆಯ ಸಾಧನೆಯಾಗಿದೆ. ಪ್ರಧಾನಿಯವರು ಆಹಾರ ಉತ್ಪಾದನೆ ಹಾಗೂ ಕೃಷಿಗೆ ಹೆಚ್ಚು ಒತ್ತು ನೀಡಿ, ಅನುದಾನ ನೀಡುತ್ತಿದ್ದಾರೆ. ನಮ್ಮ ಇಲಾಖೆಯ ಕೆಲಸ ನಾವೇ ಮಾಡಬೇಕು. ಅಧಿಕಾರಿಗಳು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿಗಳ ಮಾಹಿತಿ ನೀಡಬೇಕು ಎಂದರು.

ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್ ಕುಮಾರ್ ಮಾತನಾಡಿ, ರಾಜ್ಯದಲ್ಲಿ ನಿಜಕ್ಕೂ ರಸಗೊಬ್ಬರದ ಕೊರತೆಯಿಲ್ಲ. ಹಂಚಿಕೆಯಲ್ಲಿ ಎಲ್ಲೋ ಒಂದೆರಡು ಕಡೆ ಸಮಸ್ಯೆ ಆಗಿರಬಹುದು. ವಾಸ್ತವವಾಗಿ ಗೊಬ್ಬರದ ಕೊರತೆಯಿಲ್ಲ. ಕಾಳಸಂತೆ ಮಾರಾಟ ಸುಳ್ಳು. ತಪ್ಪು ಮಾಹಿತಿ ನೀಡುವವರ ವಿರುದ್ಧ ಎಚ್ಚರಿಕೆ ವಹಿಸಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.