ETV Bharat / city

ಜೈಲಿನಲ್ಲಿ ಮೊದಲ ದಿನ‌ ಕಳೆದ ರಾಗಿಣಿ: ರಾತ್ರಿಯಿಡೀ ನಿದ್ದೆ ಮಾಡದ ತುಪ್ಪದ ಬೆಡಗಿ - ನಟಿ ರಾಗಿಣಿ ಡ್ರಗ್ಸ್ ಕೇಸ್

ಜೈಲಿನ ಮಹಿಳಾ ಕ್ವಾರಂಟೈನ್ ಸೆಲ್​ನಲ್ಲಿ ಇರುವ ರಾಗಿಣಿ ರಾತ್ರಿಯಿಡಿ ಮೌನವಾಗಿ ಕುಳಿತಿದ್ದರು. ರಾತ್ರಿಯಿಡೀ ನಿದ್ದೆ ಮಾಡಿಲ್ಲ‌ ಎಂದು ತಿಳಿದುಬಂದಿದೆ.

ನಟಿ ರಾಗಿಣಿ
ನಟಿ ರಾಗಿಣಿ
author img

By

Published : Sep 15, 2020, 8:10 AM IST

Updated : Sep 15, 2020, 8:31 AM IST

ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ‌ ನಟಿ‌ ರಾಗಿಣಿ ರಾತ್ರಿಯಿಡೀಡಿ‌ ಮೌನಕ್ಕೆ ಜಾರಿದ್ದರು ಎಂದು ತಿಳಿದುಬಂದಿದೆ.

ಡ್ರಗ್ಸ್ ಕೇಸ್​​ನಲ್ಲಿ ರಾಗಿಣಿ, ಪ್ರಶಾಂತ್ ರಂಕಾ, ಲೂಮ್ ಪೆಪ್ಪರ್, ನಿಯಾಜ್, ರಾಹುಲ್ ಈಗಾಗಲೇ ಜೈಲಿನಲ್ಲಿದ್ದಾರೆ. ಸೋಮವಾರ ನಡೆದ ವೈದ್ಯಕೀಯ ಪರೀಕ್ಷೆ ವೇಳೆ ಕೊರೊನಾ ನೆಗೆಟಿವ್ ಬಂದರೂ ಮುಂಜಾಗ್ರತ ಕ್ರಮವಾಗಿ ನಟಿ ರಾಗಿಣಿ ಹಾಗೂ‌ ಇನ್ನುಳಿದ ಆರೋಪಿಗಳನ್ನು ಪ್ರತ್ಯೇಕ ಸೆಲ್​ನಲ್ಲಿ ಇರಿಸಲಾಗಿದೆ.

ಜೈಲಿನ ಮಹಿಳಾ ಕ್ವಾರಂಟೈನ್ ಸೆಲ್​ನಲ್ಲಿ ಇರುವ ರಾಗಿಣಿ ರಾತ್ರಿಯಿಡೀ ಮೌನವಾಗಿದ್ದರು ಮತ್ತು ನಿದ್ದೆ ಮಾಡಿಲ್ಲ‌ ಎಂದು ತಿಳಿದುಬಂದಿದೆ. ಜೈಲಾಧಿಕಾರಿಗಳು ಆರೋಪಿಗಳಿಗೆ ವಿಚಾರಣಾಧೀನ ಕೈದಿ ನಂಬರ್ ನೀಡಿದ್ದಾರೆ.

ನಟಿ ರಾಗಿಣಿ ದ್ವಿವೇದಿ ವಿಚಾರಣಾಧೀನ ಕೈದಿ ಸಂಖ್ಯೆ - 6604/20, ನಾಲ್ಕನೇ ಆರೋಪಿ ಪ್ರಶಾಂತ್ ಕೈದಿ ಸಂಖ್ಯೆ 6605/20, ಏಳನೇ ಆರೋಪಿ ಲೂಮ್ ಪೆಪ್ಪರ್ ಸಾಂಬಾ ಕೈದಿ ಸಂಖ್ಯೆ 6606/20, ಹನ್ನೊಂದನೇ ಆರೋಪಿ ರಾಹುಲ್ ಕೈದಿ ಸಂಖ್ಯೆ 6607/20, ಹದಿಮೂರನೇ ಆರೋಪಿ ನಿಯಾಝ್​ಗೆ ಕೈದಿ ಸಂಖ್ಯೆ 6608/20 ನೀಡಲಾಗಿದೆ.

ಡ್ರಗ್ಸ್ ದಂಧೆ‌ ಆರೋಪ ಪ್ರಕರಣದಲ್ಲಿ ನಟಿ‌ ಸಂಜನಾ, ವಿರೇನ್‌ ಖನ್ನಾ ಹಾಗೂ ರವಿಶಂಕರ್ ಸೆ. 16ರವರೆಗೆ ಪೊಲೀಸ್ ಕಸ್ಟಡಿಯಲ್ಲಿದ್ದು ಇಂದಿನಿಂದ ತ್ರೀವ ವಿಚಾರಣೆ ನಡೆಸಲಿದ್ದಾರೆ.

Last Updated : Sep 15, 2020, 8:31 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.