ಬೆಂಗಳೂರು: ಕೊರೊನಾ ಲಾಕ್ಡೌನ್ ನಂತರ ಸಿನಿಮಾರಂಗದ ಚಟುವಟಿಕೆಗಳು ಗರಿಗೆದರಿವೆ. ಬಿಡುಗಡೆಗೆ ಸಿದ್ದವಾಗಿರುವ ತಮ್ಮ ನೂತನ ಸಿನಿಮಾ '100' ವೀಕ್ಷಣೆಗೆ ಆಗಮಿಸುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ನಟ ರಮೇಶ್ ಅರವಿಂದ್ (Actor Ramesh Aravind) ಆಹ್ವಾನ ನೀಡಿದ್ದಾರೆ.
ಗೃಹ ಸಚಿವರ ಗೃಹ ಕಚೇರಿಗೆ ಭೇಟಿ ನೀಡಿದ ರಮೇಶ್ ಅರವಿಂದ್ ಸಚಿವರನ್ನು ಭೇಟಿಯಾಗಿ ನೂತನವಾಗಿ ಬಿಡುಗಡೆಗೆ ಸಿದ್ಧವಿರುವ ಸಿನಿಮಾ ಬಗ್ಗೆ ವಿವರಣೆ ನೀಡಿದರು. ಈ ವೇಳೆ, ಸೈಬರ್ ಕ್ರೈಂ ಆಧಾರಿತ ಕಥಾ ಹಂದರವುಳ್ಳ ಚಿತ್ರ ವೀಕ್ಷಣೆಗೆ ಬರುವಂತೆ ಮನವಿ ಮಾಡಿದರು.
ಸಿನಿಮಾ ನಿರ್ಮಾಪಕ ರಮೇಶ್ ರೆಡ್ಡಿ ಹಾಗು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ನವೆಂಬರ್ 19ರಂದು '100' ಚಿತ್ರ ರಾಜ್ಯಾದ್ಯಂತ ಬಿಡುಗಡೆ: ರಮೇಶ ಅರವಿಂದ್