ETV Bharat / city

ಸಿದ್ದಾರ್ಥ್ ನಿಧನಕ್ಕೆ ಕಂಬನಿ ಮಿಡಿದ ಪವರ್​ ಸ್ಟಾರ್​ - Mangalore

ಮಾಜಿ ಮುಖ್ಯಮಂತ್ರಿ ಎಸ್​​.ಎಂ. ಕೃಷ್ಣ ಅವರ ಅಳಿಯ, ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಜೊತೆಗಿನ ಫೋಟೋವೊಂದನ್ನು ನಟ ಪುನೀತ್ ರಾಜ್​ಕುಮಾರ್ ತಮ್ಮ ಟ್ವಿಟ್ಟರ್​​​ನಲ್ಲಿ ಷೇರ್ ಮಾಡಿಕೊಳ್ಳುವ ಮೂಲಕ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಸಿದ್ದಾರ್ಥ್, ಪುನೀತ್ ರಾಜ್​​ಕುಮಾರ್
author img

By

Published : Jul 31, 2019, 12:36 PM IST

ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ. ಸಿದ್ದಾರ್ಥ್ ನಿಧನಕ್ಕೆ ನಟ ಪುನೀತ್ ರಾಜ್​ಕುಮಾರ್ ಶೋಕ ವ್ಯಕ್ತಪಡಿಸಿದ್ದಾರೆ. ತಾವು ಸಿದ್ದಾರ್ಥ್ ಜೊತೆಗಿರುವ ಫೋಟೋವೊಂದನ್ನು ತಮ್ಮ ಟ್ವಿಟ್ಟರ್​​​ನಲ್ಲಿ ಷೇರ್ ಮಾಡಿಕೊಂಡಿರುವ ಪುನೀತ್ ಸಿದ್ದಾರ್ಥ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

  • Deeply saddened by the sudden demise of #VGSiddhartha.A great dynamic entrepreneur of our time, he did show us how a humble coffee can create numerous job opportunities for many, his journey as an entrepreneur and his work towards charity shall always be remembered. RIP pic.twitter.com/AoTcjxiSwn

    — Puneeth Rajkumar (@PuneethRajkumar) July 31, 2019 " class="align-text-top noRightClick twitterSection" data=" ">

'ಸಿದ್ದಾರ್ಥ್ ಅವರ ಹಠಾತ್ ನಿಧನದ ಸುದ್ದಿ ತಿಳಿದು ಬಹಳ ದು:ಖವಾಗಿದೆ. ಕಾಫಿ ಮೂಲಕ ಎಷ್ಟೋ ಜನರಿಗೆ ಉದ್ಯೋಗ ನೀಡಬಹುದು ಎಂದು ತೋರಿಸಿಕೊಟ್ಟ ಉದ್ಯಮಿ ಅವರು. ಸಿದ್ದಾರ್ಥ್ ಅವರ ಕಾರ್ಯ ವೈಖರಿ ಹಾಗೂ ಅವರ ಸಾಮಾಜಿಕ ಸೇವೆ ಎಂದಿಗೂ ಎಲ್ಲರ ಮನಸ್ಸಿನಲ್ಲಿ ನೆನಪಿನಲ್ಲಿ ಉಳಿಯುವಂಥದ್ದು, ಅವರ ಆತ್ಮಕ್ಕೆ ಶಾಂತಿ ದೊರೆಯಲಿ' ಎಂದು ಪುನೀತ್ ರಾಜ್​ಕುಮಾರ್ ಟ್ವೀಟ್ ಮಾಡಿದ್ದಾರೆ.

ಜುಲೈ 29 ಸಂಜೆ ಸಿದ್ದಾರ್ಥ್ ಕಾಣೆಯಾಗಿದ್ದರು. ಅವರು ಯಾವುದೇ ದುಡುಕಿನ ನಿರ್ಧಾರ ತೆಗೆದುಕೊಳ್ಳದೆ ಸುರಕ್ಷಿತವಾಗಿ ವಾಪಸ್ಸಾಗಲಿ ಎಂಬುದು ಎಲ್ಲರ ಹಾರೈಕೆಯಾಗಿತ್ತು. ಆದರೆ ಇಂದು ಬೆಳಗ್ಗೆ ಮಂಗಳೂರಿನ ಹೊಯ್ಗೆ ಬಜಾರ್ ಬಳಿ ನೇತ್ರಾವತಿ ಹಿನ್ನೀರಿನಲ್ಲಿ ಸಿದ್ದಾರ್ಥ್​ ಮೃತದೇಹ ಪತ್ತೆಯಾಗಿದ್ದು ಎಲ್ಲರ ಶೋಕಕ್ಕೆ ಕಾರಣವಾಗಿದೆ.

Intro:Body:

puneet siddarth

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.