ETV Bharat / city

ನಾಳೆ ಪುನೀತ್​ ಅನ್ನ ಸಂತರ್ಪಣೆಗೆ 25 ಸಾವಿರ ಅಭಿಮಾನಿಗಳ ಆಗಮನ ನಿರೀಕ್ಷೆ.. ಭದ್ರತೆಗೆ 1 ಸಾವಿರ‌ ಪೊಲೀಸರ ನಿಯೋಜನೆ

ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳಿಗೆ ತ್ರಿಪುರ ವಾಹಿನಿಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಇದೆ. ಮಂಗಳವಾರ ಬೆಳಗ್ಗೆ 11-30 ರಿಂದ ಅನ್ನಸಂತರ್ಪಣೆ ಪ್ರಾರಂಭವಾಗಲಿದೆ‌. 5 ಸಾವಿರ ಜನ ಒಟ್ಟಿಗೆ ಕುಳಿತು ಊಟ ಮಾಡಬಹುದಾಗಿದೆ.

actor-puneeth-memory-annadanam-by-family
ನಾಳೆ ಪುನೀತ್​ ಅನ್ನ ಸಂತರ್ಪಣೆಗೆ 25 ಸಾವಿರ ಅಭಿಮಾನಿಗಳ ಆಗಮನ ನಿರೀಕ್ಷೆ
author img

By

Published : Nov 8, 2021, 1:23 PM IST

Updated : Nov 8, 2021, 2:25 PM IST

ಬೆಂಗಳೂರು: ನಟ ಪುನೀತ್​ ರಾಜ್​ಕುಮಾರ್​ ಅಗಲಿಕೆ ಹಿನ್ನೆಲೆ ಅರಮನೆ ಮೈದಾನದ ಮೈದಾನದಲ್ಲಿ ಮಂಗಳವಾರ ಅನ್ನಸಂತರ್ಪಣೆ ನಡೆಯಲಿದೆ. 25 ಸಾವಿರಕ್ಕೂ ಅಧಿಕ ಅಭಿಮಾನಿಗಳು ಆಗಮಿಸುವ ಸಾಧ್ಯತೆ ಇದ್ದು, 1 ಸಾವಿರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ.

ಯುವರತ್ನ ಪುನೀತ್ ರಾಜ್​ಕುಮಾರ್ ಕಣ್ಮರೆಯಾಗಿ 11 ದಿನಗಳು ಕಳೆದಿದ್ದು, ಕುಟುಂಬಸ್ಥರು ಅಪ್ಪುವಿನ‌ ಸಮಾಧಿಗೆ‌ ಪೂಜೆ‌ ನೆರವೇರಿಸಿದ್ದಾರೆ. ಮತ್ತೊಂದೆಡೆ ಆಭಿಮಾನಿಗಳಿಗಾಗಿ ಅನ್ನ ಸಂತರ್ಪಣೆ ನಾಳೆ ಅರಮನೆ ಮೈದಾನದಲ್ಲಿ ನಡೆಯಲಿದೆ. ಹೆಚ್ಚಿನ ಪ್ರಮಾಣದಲ್ಲಿ ಅಭಿಮಾನಿಗಳು ಆಗಮಿಸಲಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಮಾಡಿಕೊಡಲು ಡಾ.ರಾಜ್ ಕುಟುಂಬಸ್ಥರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದರು.

ಹೀಗಾಗಿ ಸುಮಾರು 1000 ಸಾವಿರ ಪೊಲೀಸರು ಬಂದೋಬಸ್ತ್ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ‌. ಅರಮನೆ ಮೈದಾನದ ಸುತ್ತಮುತ್ತ 1 ಸಾವಿರಕ್ಕೂ ಹೆಚ್ಚು ಪೊಲೀಸರು ನಿಗಾ ವಹಿಸಲಿದ್ದಾರೆ.

ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಬರುವ ಅಭಿಮಾನಿಗಳಿಗೆ ತ್ರಿಪುರ ವಾಹಿನಿಯಲ್ಲಿ ವಾಹನ ಪಾರ್ಕಿಂಗ್ ಮಾಡುವ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 11-30 ರಿಂದ ಅನ್ನಸಂತರ್ಪಣೆ ಪ್ರಾರಂಭವಾಗಲಿದೆ‌.

5 ಸಾವಿರ ಜನ ಒಟ್ಟಿಗೆ ಕುಳಿತು ಊಟ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. 100 ಜನ ಅಡುಗೆ ಭಟ್ಟರು 700 ಜನ ಸರ್ವರ್​ಗಳನ್ನು ನಿಯೋಜಿಸಲಾಗಿದೆ‌.‌ ಬಾಳೆದೆಲೆಯಲ್ಲಿ ಊಟ ಬಡಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

Last Updated : Nov 8, 2021, 2:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.