ETV Bharat / city

ಬೆಳ್ಳಂಬೆಳಗ್ಗೆ ತ್ವರಿತವಾಗಿ ಪ್ರಮುಖ ರಸ್ತೆಗಳಲ್ಲಿ ಸಾಗಿದ ಅಪ್ಪು ಪಾರ್ಥಿವ ಶರೀರ - puneet rajkumar death

ಪುನೀತ್‍ ರಾಜ್‍ಕುಮಾರ್ ಪಾರ್ಥಿವ ಶರೀರ ಕಂಠೀರವ ಕ್ರೀಡಾಂಗಣದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಶರವೇಗದಲ್ಲಿ ಹಾದು ಸ್ಟುಡಿಯೋ ತಲುಪಿತು.

actor puneet rajkumar last rites
ಪ್ರಮುಖ ರಸ್ತೆಗಳಲ್ಲಿ ಸಾಗಿದ ಅಪ್ಪು ಪಾರ್ಥಿವ ಶರೀರದ ಮೆರವಣಿಗೆ
author img

By

Published : Oct 31, 2021, 7:27 AM IST

ಬೆಂಗಳೂರು: ಬೆಳ್ಳಂ ಬೆಳಗ್ಗೆ ಸುಮಾರು 5 ಗಂಟೆಗೆ ನಟ ಪುನೀತ್‍ ರಾಜ್‍ಕುಮಾರ್ ಪಾರ್ಥಿವ ಶರೀರ ಕಂಠೀರವ ಕ್ರೀಡಾಂಗಣದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಶರವೇಗದಲ್ಲಿ ಹಾದು ಸ್ಟುಡಿಯೋ ತಲುಪಿತು.

ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆಗಳಿದ್ದಿದ್ದರಿಂದ, ಸಂಚಾರ ಪೊಲೀಸರು ಸಾರ್ವಜನಿಕರ ಸಂಚಾರ ಮಾರ್ಗ ಬದಲಾವಣೆ ಮಾಡಿದ್ದರು. ಅಭಿಮಾನಿಗಳು ಕೊನೆಯದಾಗಿ ಅಂತಿಮ ದರ್ಶನ ಪಡೆಯಲೆಂದು ಕಂಠೀರವ ಕ್ರೀಡಾಂಗಣದತ್ತ ಧಾವಿಸಿದ್ದರೂ ಪೊಲೀಸರು ಯಾರನ್ನೂ ಒಳ ಬಿಡಲಿಲ್ಲ. ಕಂಠೀರವ ಸ್ಟುಡಿಯೋವರೆಗೆ (13 ಕಿ.ಮೀ. ದೂರ) ಅಪ್ಪು ಪಾರ್ಥಿವ ಶರೀರ ಮೆರವಣಿಗೆ ಅತಿ ವೇಗದಲ್ಲಿ ಸಾಗಿತು. ಕ್ರೀಡಾಂಗಣದಿಂದ ಸ್ಟುಡಿಯೋಗೆ ಸುಮಾರು 30 ರಿಂದ 40 ನಿಮಿಷದಲ್ಲಿ ತಲುಪಿತು.

ಪಾರ್ಥಿವ ಶರೀರ ತೆಗೆದುಕೊಂಡು ಹೋದ ಮಾರ್ಗ:

ಕಂಠೀರವ ಕ್ರೀಡಾಂಗಣ ಹಿಂಭಾಗದ ದ್ವಾರದಲ್ಲಿ ಮೆರವಣಿಗೆ ಪ್ರಾರಂಭಿಸಿ, ಆರ್​ಆರ್​ಎಂಆರ್ ರಸ್ತೆ, ಹಡ್ಸನ್ ವೃತ್ತ, ಪೊಲೀಸ್ ಕಾರ್ನರ್, ಕೆ.ಜಿ. ರಸ್ತೆ, ಮೈಸೂರು ಬ್ಯಾಂಕ್ ವೃತ್ತ, ಪೋಸ್ಟ್ ಆಫೀಸ್ ರಸ್ತೆ, ಕೆ.ಆರ್. ವೃತ್ತದಲ್ಲಿ ಎಡಕ್ಕೆ ತಿರುಗಿ ಶೇಷಾದ್ರಿ ರಸ್ತೆ, ಮಹಾರಾಣಿ ಮೇಲು ಸೇತುವೆ, ಸಿಐಡಿ ಜಂಕ್ಷನ್, ಚಾಲುಕ್ಯ ವೃತ್ತ, ಹಳೇ ಹೈಗ್ರೌಂಡ್ಸ್ ಜಂಕ್ಷನ್‍ನಲ್ಲಿ ಎಡಕ್ಕೆ ತಿರುವು ಪಡೆದು ಟಿ. ಚೌಡಯ್ಯ ರಸ್ತೆ, ವಿಂಡ್ಸರ್ ಮ್ಯಾನರ್ ಜಂಕ್ಷನ್, ಬಿಡಿಎ ಮುಖ್ಯ ಕಚೇರಿ, ಪಿ.ಜಿ. ಹಳ್ಳಿ ಕ್ರಾಸ್, ಕಾವೇರಿ ಜಂಕ್ಷನ್ ಬಳಿಕ, ಬಾಷ್ಯಂ ವೃತ್ತ, ಸ್ಯಾಂಕಿ ರಸ್ತೆ, ಮಲ್ಲೇಶ್ವರಂ 18ನೇ ಕ್ರಾಸ್‍, ಮಾರಮ್ಮ ವೃತ್ತ, ಬಿಎಚ್‍ಇಎಲ್ ಸರ್ವಿಸ್​​ ರಸ್ತೆ, ಬಿಎಚ್‍ಇಎಲ್ ವೃತ್ತ, ಯಶವಂತಪುರ ವೃತ್ತ, ಮೆಟ್ರೊ ಷಾಪ್, ಮಾರಪ್ಪನ ಪಾಳ್ಯ, ಗೋವರ್ಧನ ಥಿಯೇಟರ್ ಜಂಕ್ಷನ್, ಆರ್.ಎಂ.ಸಿ ಯಾರ್ಡ್ ಪೊಲೀಸ್ ಠಾಣೆ, ಎಂಇಐ ಬಸ್ ನಿಲ್ದಾಣ, ಗೊರಗುಂಟೆಪಾಳ್ಯ ಜಂಕ್ಷನ್, ಎಇಎಂಟಿಐ ಜಂಕ್ಷನ್, ಲಾರಿ ಅಸೋಸಿಯೇಷನ್ ಕಚೇರಿ, ಎಫ್‍ಟಿಐ ವೃತ್ತ ಮಾರ್ಗವಾಗಿ ಸಾಗಿ ಕಂಠೀರವ ಸ್ಟುಡಿಯೋ ತಲುಪಿತು.

ಪೊಲೀಸರ ನಿಯೋಜನೆ:

ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್‍ಸೂದ್, ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನೇತೃತ್ವದಲ್ಲಿ ಮೆರವಣಿಗೆ ನೆಡೆಯಿತು. ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು,19 ಮಂದಿ ಡಿಸಿಪಿಗಳು ಹಾಗೂ ಎಸಿಪಿಗಳು, 8,000 ಸಾವಿರ ಮಂದಿ ಕಾನೂನು ಸುವ್ಯವಸ್ಥೆ ಸಿಬ್ಬಂದಿ, 35 ಸಿಎಆರ್ ತುಕಡಿಗಳು ಹಾಗೂ 90 ಕೆ.ಎಸ್‍.ಆರ್.ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸ್ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಾಹನ ಸಂಚಾರ ಮಾರ್ಗ ಬದಲಾವಣೆ:

ಪುನೀತ್ ರಾಜ್​ಕುಮಾರ್ ಪಾರ್ಥಿವ ಶರೀರ ಮೆರವಣಿಗೆ ಸಾಗಿದ್ದರಿಂದ ಸಂಚಾರ ಪೊಲೀಸರು ನಗರದ ಕೆಲವು ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿ ಪರ್ಯಾಯ ಮಾರ್ಗ ಕೈಗೊಂಡಿದ್ದಾರೆ. ಮೈಸೂರು ರಸ್ತೆಯಿಂದ ತುಮಕೂರು ರಸ್ತೆ ಕಡೆಗೆ ಹೋಗುವ ವಾಹನಗಳು, ನೈಸ್ ರಸ್ತೆ, ನಾಯಂಡಹಳ್ಳಿ, ನಾಗರಬಾವಿ ಹಾಗೂ ಸುಮನಹಳ್ಳಿ ಜಂಕ್ಷನ್ ಮಾರ್ಗವಾಗಿ ತೆರಳುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ.

10.30ರವರೆಗೆ ಸಂಚಾರ ಬದಲಾವಣೆ:

ತುಮಕೂರು ರಸ್ತೆಯಿಂದ ಬೆಂಗಳೂರು ನಗರಕ್ಕೆ ಮೇಲುಸೇತುವೆ ಮೇಲೆ ಹೋಗುವ ವಾಹನಗಳು, ತುಮಕೂರು ರಸ್ತೆಯಿಂದ ಮೈಸೂರು ರಸ್ತೆ ಕಡೆಗೆ ಸಿಎಂಟಿಐ ಜಂಕ್ಷನ್​ನಲ್ಲಿ ಚಲಿಸಲು ವ್ಯವಸ್ಥೆ ಮಾಡಿಕೊಡಲಾಗಿತ್ತು. ಜಾಲಹಳ್ಳಿ ಕ್ರಾಸ್ ಕಡೆಯಿಂದ ರಾಜ್​​ಕುಮಾರ್ ಸಮಾಧಿ ಕಡೆಗೆ ಹೋಗುವ ವಾಹನಗಳು, ಟಿವಿಎಸ್ ಕ್ರಾಸ್ ಮತ್ತು ಸೋನಾಲ್ ಗಾರ್ಮೆಂಟ್ಸ್ ಮಾರ್ಗವಾಗಿ ತೆರಳಬಹುದಾಗಿದೆ. ಮಹಾಲಕ್ಷ್ಮಿ ಬಡಾವಣೆ ಕಡೆಯಿಂದ ರಾಜ್​ಕುಮಾರ್ ಸಮಾಧಿ ಕಡೆಗೆ ಹೋಗುವ ವಾಹನಗಳು, ಕೃಷ್ಣಾನಂದ ನಗರ ಜಂಕ್ಷನ್ ಬಳಿ ಮಾರ್ಗವಾಗಿ ಚಲಿಸುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ. ಈ ಸಂಚಾರ ಬದಲಾವಣೆಗಳು 10.30ರವರೆಗೆ ಇರಲಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: 'ಯುವರತ್ನ'ನ ಅಂತಿಮಯಾತ್ರೆ: ತೆರೆದ ಗಾಜಿನ ವಾಹನದಲ್ಲಿ ಪುನೀತ್​​ ಕೊನೆ ಪಯಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.