ಬೆಂಗಳೂರು: ನಟ ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ಸಾಲ ಪ್ರಕರಣದ ತನಿಖೆ ನಡೆಸುವಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ. ಜೊತೆಗೆ ಮೈಸೂರಿನ ಸಂದೇಶ ಹೊಟೇಲ್ನಲ್ಲಿ ನಟ ದರ್ಶನ್ ಕಡೆಯವರು ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ನಟ ದರ್ಶನ್, ಇಂದ್ರಜಿತ್ ಲಂಕೇಶ್ ಅವರು ತುಂಬಾ ದೊಡ್ಡ ಇನ್ವೆಸ್ಟಿಗೇಟರ್ ಅಂತ ಕಿಡಿಕಾರಿದ್ದಾರೆ. ನಾನು ಸಂದೇಶ್ ಸಾವಿರ ಸಲ ಗಲಾಟೆ ಮಾಡಿಕೊಂಡಿದ್ದೇವೆ. ಇಂದ್ರಜಿತ್ ಲಂಕೇಶ್ ತಮ್ಮ ಯುಟ್ಯೂಬ್ ಚಾನಲ್ಗೆ ಸಂದರ್ಶನ ಕೇಳಿದ್ದರು. ಆಗ ಸ್ವತಃ ಇಂದ್ರಜಿತ್ ಲಂಕೇಶ್, ಇರಲಿ ಬಿಡಿ ಸರ್. ನೀವು ಯಾವುದೋ ಟೆನ್ಶನ್ನಲ್ಲಿರುತ್ತೀರಾ, ಆಗ ಬಂದು ನಿಮಗೆ ಹಿಂಸೆ ಮಾಡಿರುತ್ತಾರೆ. ಅದಕ್ಕೆ ನೀವು ರಿಯಾಕ್ಟ್ ಮಾಡಿರುತ್ತೀರಾ ಎಂದಿದ್ದರು. ಯಾವುದೇ ಊಹಾಪೋಹಗಳನ್ನ ನಂಬಬೇಡಿ ಎಂದು ಹೇಳಿದರು.
25 ಕೋಟಿ ರೂ. ಪ್ರಕರಣವನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದಿದ್ದಾರೆ. ಆದರೆ, ನಾವು ಯಾವುದೇ ಕಾರಣಕ್ಕೂ ಈ ಪ್ರಕರಣವನ್ನು ಮುಚ್ಚುವುದಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅವರಿಗೂ ತನಿಖೆ ನಡೆಸಲು ಸಮಯ ಬೇಕು ಎಂದು ದರ್ಶನ್ ತಿಳಿಸಿದರು.
ಜೂನ್ 1ರಂದು ಅರುಣಾಕುಮಾರಿ ನಮ್ಮ ತೋಟಕ್ಕೆ ಬಂದಿದ್ದು ನಿಜ. ಈ ಪ್ರಕರಣದಲ್ಲಿ ಜಾತಿಯನ್ನೆಲ್ಲಾ ತರ್ತಿದ್ದಾರೆ. ಇಂದ್ರಜಿತ್ ಅವರಿಗೆ ದೊಡ್ಡ ದೊಡ್ಡ ಕಾಂಟ್ಯಾಕ್ಟ್ ಇದೆ. ಈ ಪ್ರಕರಣದಲ್ಲಿ ಇನ್ನು ದೊಡ್ಡ xyz ಬರ್ತಿದ್ದಾರೆ, ಬರಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ನಟ ದರ್ಶನ್ ಕಡೆಯವರು ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದಾರೆ: ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ