ಬೆಂಗಳೂರು: ರಾಜ್ಯದಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆ ಆಗ್ತಿದೆ. ಸದ್ಯ ಕಳೆದೊಂದು ವಾರದಿಂದ ನಿತ್ಯ 7 ಸಾವಿರದೊಳಗೆ ಹೊಸ ಪ್ರಕರಣಗಳು ಪತ್ತೆಯಾಗ್ತಿವೆ. ಈಗಾಗಲೇ ಪಾಸಿಟಿವಿಟಿ ರೇಟ್ ಶೇ. 5ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಅನ್ಲಾಕ್ ಸಡಿಲಿಕೆ ಮಾಡಲಾಗಿದೆ.
ಇದೇ ಜೂನ್ 21ರಂದು ಸರ್ಕಾರ ವಿಧಿಸಿರುವ ಲಾಕ್ಡೌನ್ ಅವಧಿ ಮುಕ್ತಾಯವಾಗಲಿದೆ. ಇದರ ಬೆನ್ನೆಲ್ಲೇ ಸರ್ಕಾರ ಯಾವೆಲ್ಲ ಚಟುವಟಿಕೆಗಳಿಗೆ ರಿಲೀಫ್ ಕೊಡಬಹುದು ಎಂಬ ಚರ್ಚೆ ಶುರುವಾಗಿದೆ. ರಾಜ್ಯಾದ್ಯಂತ ಪಾಸಿಟಿವಿಟಿ ದರ ಶೇ. 4.05ರಷ್ಟು ಇದ್ದರೂ ಜಿಲ್ಲಾವಾರು ಪಾಸಿಟಿವಿಟಿ ದರ ಕಡಿಮೆ ಆಗಿಲ್ಲ. ಹಲವು ಜಿಲ್ಲೆಗಳಲ್ಲಿ ಪಾಸಿಟಿವಿ ರೇಟ್ ಶೇ. 10ರ ಮೇಲೆ ಇದೆ. ಹಾಗೇ ರಾಜ್ಯಾದ್ಯಂತ ಪಾಸಿಟಿವ್ ರೇಟ್ ಕಡಿಮೆ ಆದರೂ ಇನ್ನೂ 1,37,050 ಸಕ್ರಿಯ ಪ್ರಕರಣಗಳು ಇವೆ. ಹೀಗಾಗಿ, ಕೊರೊನಾ ಕಡಿಮೆ ಆಯ್ತು ಅಂತ ನಿಟ್ಟುಸಿರು ಬಿಡುವಂತಿಲ್ಲ.
ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಹೊಸ ಪ್ರಕರಣಗಳ ಶೇಕಡಾವಾರು ಕಡಿಮೆ ಆಗಿದ್ದರೂ ಸಹ ಸಕ್ರಿಯ ಪ್ರಕರಣದಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಹಾಸನ, ತುಮಕೂರು ಈ 5 ಜಿಲ್ಲೆಗಳಲ್ಲಿ ಸಕ್ರಿಯ ಕೇಸ್ಗಳು ಹೆಚ್ಚಾಗಿವೆ. ಉಳಿದಂತೆ 14 ಜಿಲ್ಲೆಗಳಲ್ಲಿ 4 ಸಾವಿರದೊಳಗೆ ಇದ್ದರೆ, ಬಾಕಿ 11 ಜಿಲ್ಲೆಗಳಲ್ಲಿ ಮೂರಂಕಿ ಸಕ್ರಿಯ ಪ್ರಕರಣಗಳು ಇವೆ. ಹೀಗಾಗಿ ಹೊಸ ಪ್ರಕರಣಗಳು ಕಡಿಮೆ ಆಗಿವೆಯೇ ಹೊರತು, ಸಕ್ರಿಯ ಪ್ರಕರಣಗಳು ಹೆಚ್ಚಾಗಿವೆ. ಈ ಕಾರಣಕ್ಕೆ ಜನರು ಮೈ ಮರೆತು ಸಹಜ ಸ್ಥಿತಿಗೆ ಮರಳುವುದು ಕಷ್ಟ.
ಯಾವ್ಯಾವ ಜಿಲ್ಲೆಗಳಲ್ಲಿ ಹೇಗಿದೆ ಆ್ಯಕ್ಟೀವ್ ಕೇಸ್ :
ಟಾಪ್ - 5 ಜಿಲ್ಲೆಗಳು -ಸಕ್ರಿಯ ಪ್ರಕರಣ
1) ಬೆಂಗಳೂರು- 73,844
2) ಮೈಸೂರು- 8346
3) ದಕ್ಷಿಣ ಕನ್ನಡ- 6931
4) ಹಾಸನ - 5733
5) ತುಮಕೂರು- 4091
ಮಧ್ಯಮ ಆ್ಯಕ್ಟೀವ್ ಕೇಸ್
6) ಧಾರವಾಡ-1115
7) ಕೋಲಾರ - 1208
8) ಕೊಡಗು-1451
9) ಚಿಕ್ಕಬಳ್ಳಾಪುರ- 1607
10) ಉತ್ತಕ ಕನ್ನಡ- 1740
11) ಚಿತ್ರದುರ್ಗ- 1877
12) ಬಳ್ಳಾರಿ- 2219
13) ಉಡುಪಿ- 2261
14) ದಾವಣಗೆರೆ- 2584
15) ಚಿಕ್ಕಮಗಳೂರು- 2926
16) ಮಂಡ್ಯ- 2989
17)ಬೆಳಗಾವಿ- 3306
18)ಬೆಂ. ಗ್ರಾಮಾಂತರ- 3381
19)ಶಿವಮೊಗ್ಗ- 3595
ಕಡಿಮೆ ಆ್ಯಕ್ಟೀವ್ ಕೇಸ್
20) ಬೀದರ್- 65
21) ಯಾದಗಿರಿ- 193
22) ಕಲಬುರಗಿ- 210
23) ರಾಮನಗರ- 348
24) ಗದಗ- 448
25) ರಾಯಚೂರು- 454
26) ಹಾವೇರಿ- 458
27) ವಿಜಯಪುರ- 844
28) ಚಾಮರಾಜನಗರ- 918
29) ಬಾಗಲಕೋಟೆ- 923
30) ಕೊಪ್ಪಳ- 985
ಸದ್ಯ ಜೂನ್ ಅಂತ್ಯದವರೆಗೆ ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್ ಹಾಕುವಂತೆ ತಜ್ಞರು ಸಲಹೆ ನೀಡಿದ್ದಾರೆ. ಅಗತ್ಯ ಸೇವೆ ಹೊರತುಪಡಿಸಿ ಜನರು ಗುಂಪುಗೂಡುವ ಜಾಗಕ್ಕೆ ಬ್ರೇಕ್ ಹಾಕಬೇಕಿದೆ. ಇಲ್ಲಾಂದ್ರೆ ಮೂರನೇ ಅಲೆಯು ಬಹುಬೇಗ ಸಮೀಪಿಸುವ ಸಾಧ್ಯತೆ ಹೆಚ್ಚಿದೆ.