ETV Bharat / city

ಬೆಂಗಳೂರು: ಕೆಲಸಕ್ಕೆಂದು ತೆರಳಿದ್ದ ಯುವತಿ ಮೇಲೆ ಭಗ್ನ ಪ್ರೇಮಿಯಿಂದ ಆ್ಯಸಿಡ್ ದಾಳಿ...!

ಬೆಂಗಳೂರಿನಲ್ಲಿ ದುರಂತ ಘಟನೆಯೊಂದು ಬೆಳಕಿಗೆ ಬಂದಿದೆ. ಕೆಲಸಕ್ಕೆಂದು ತೆರಳಿದ್ದ ಯುವತಿ ಮೇಲೆ ಭಗ್ನ​ ಪ್ರೇಮಿಯೊಬ್ಬ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.

author img

By

Published : Apr 28, 2022, 12:32 PM IST

Updated : Apr 28, 2022, 1:41 PM IST

Acid attack on woman in Bengaluru, Acid attack in Bengaluru, Bengaluru crime news, Bengaluru news, ಬೆಂಗಳೂರಿನಲ್ಲಿ ಮಹಿಳೆ ಮೇಲೆ ಆ್ಯಸಿಡ್ ದಾಳಿ, ಬೆಂಗಳೂರಿನಲ್ಲಿ ಆ್ಯಸಿಡ್ ದಾಳಿ, ಬೆಂಗಳೂರು ಅಪರಾಧ ಸುದ್ದಿ, ಬೆಂಗಳೂರು ಸುದ್ದಿ,
ಕೆಲಸಕ್ಕೆಂದು ತೆರಳಿದ್ದ ಯುವತಿ ಮೇಲೆ ಭಗ್ನ ಪ್ರೇಮಿಯಿಂದ ಆ್ಯಸಿಡ್ ದಾಳಿ

ಬೆಂಗಳೂರು: ಭಗ್ನ ಪ್ರೇಮಿಯಿಂದ 23 ವರ್ಷದ ಯವತಿ ಮೇಲೆ ಆ್ಯಸಿಡ್ ದಾಳಿ ನಡೆದಿದೆ. ಪ್ರೀತಿಗೆ ನಿರಾಕರಿಸಿದ್ದಕ್ಕೆ ಭಗ್ನಪ್ರೇಮಿಯೇ ಆ್ಯಸಿಡ್​ ದಾಳಿ ನಡೆಸಿದ್ದಾನೆ. ಸುಂಕದ ಕಟ್ಟೆಯ ಮುತ್ತೂಟ್ ಫೈನಾನ್ಸ್‌ನಲ್ಲಿ ಕೆಲಸ ಮಾಡುಲು ತೆರಳುತ್ತಿದ್ದ ವೇಳೆ ಭಗ್ನ ಪ್ರೇಮಿ ನಾಗೇಶ್​ ಯುವತಿ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ಈ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪಶ್ಚಿಮ ವಿಭಾಗದ ಡಿಸಿಪಿ ಸ‌ಂಜೀವಪಾಟೀಲ್ ಹೇಳಿಕೆ

ಏನಿದು ಘಟನೆ: 23 ವರ್ಷದ ಯುವತಿ ಸುಂಕದ ಕಟ್ಟೆಯ ಮುತ್ತೂಟ್ ಫೈನಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಳೆ. ನಾಗೇಶ್​ ಎಂಬಾತ ಈ ಯುವತಿಯ ಹಿಂದೆ ಬಿದ್ದು ನನ್ನನ್ನು ಪ್ರೀತಿಸು ಎಂದು ಪೀಡಿಸುತ್ತಿದ್ದನು. ಆದ್ರೆ ನಾಗೇಶ್​ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಾಳೆ. ಇದೇ ವಿಚಾರಕ್ಕೆ ಯುವತಿ ಹಾಗೂ ನಾಗೇಶ್ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ.

ಓದಿ: ನೀರೆಂದು ಭಾವಿಸಿ ಆ್ಯಸಿಡ್​ ಕುಡಿದ ವಿದ್ಯಾರ್ಥಿ : ಆಂತರಿಕ ಅಂಗಾಂಗಗಳಿಗೆ ಹಾನಿ

ಪ್ರೀತಿ ನಿರಾಕರಿಸಿದ್ದಾಳೆ ಎಂಬ ಕೋಪ ನಾಗೇಶ್​ಗೆ ಕಾಡಿದೆ. ಹೀಗಾಗಿ ನಾಗೇಶ್​ ಆಕೆಯ ಮೇಲೆ ಆ್ಯಸಿಡ್​ ದಾಳಿ ನಡೆಸಲು ಹೊಂಚು ಹಾಕಿ ಕುಳಿತಿದ್ದನು. ಇಂದು ಬೆಳಗ್ಗೆ ಯುವತಿ ಕೆಲಸಕ್ಕೆಂದು ಮನೆಯಿಂದ ಹೊರ ಬಂದಿದ್ದಾಳೆ. ಯುವತಿಗಾಗಿ ಕಾದು ಕುಳಿತಿದ್ದ ಆರೋಪಿ ನಾಗೇಶ್​ ಆಕೆ ಸುಂಕದಕಟ್ಟೆಯ ಮುತ್ತೂಟ್ ಫಿನ್ ಕಾರ್ಪ್ ಬಳಿ ಬಂದಿದ್ದಾಳೆ. ಈ ವೇಳೆ ಮತ್ತೆ ಪ್ರೀತಿಸುವಂತೆ ಒತ್ತಡ ಹೇರಿದ್ದ. ಯುವತಿ ಆತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಇದೇ ವಿಷಯಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಯುವತಿ ಮೇಲೆ ಕೋಪಗೊಂಡ ನಾಗೇಶ್​ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ.

ಆ್ಯಸಿಡ್​ ನೋವವನ್ನು ತಾಳಲಾರದೇ ಯುವತಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಕೂಡಲೇ ಸ್ಥಳೀಯರು ಸಂತ್ರಸ್ತ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾಹಿತಿಯನ್ನು ಪೊಲೀಸರಿಗೆ ರವಾನಿಸಿದ್ದರು. ಯುವತಿಗೆ ಕತ್ತು, ಎದೆ ಮತ್ತು ಕಾಲು ಸೇರಿದಂತೆ ಇನ್ನಿತರ ಭಾಗಗಳಲ್ಲಿ ಆ್ಯಸಿಡ್​ ಗಾಯಗಳಾಗಿವೆ. ವೈದ್ಯರು ಯುವತಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಬಿದ್ದಲ್ಲಿ ಯುವತಿಯನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು. ಆ್ಯಸಿಡ್​ ಬಗ್ಗೆ ದೂರು ದಾಖಲಿಸಿಕೊಂಡಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿಗಾಗಿ ಶೋಧ ನಡೆಸಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸ‌ಂಜೀವಪಾಟೀಲ್ ತಿಳಿಸಿದ್ದಾರೆ.

ಓದಿ: ವರದಕ್ಷಿಣೆ ನೀಡಲಿಲ್ಲವೆಂದು ವಿವಾಹಿತೆಗೆ ಆ್ಯಸಿಡ್​ ಕುಡಿಸಿ ಕೊಂದ ಗಂಡನ ಕುಟುಂಬ!

Last Updated : Apr 28, 2022, 1:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.