ಬೆಂಗಳೂರು: ರಾಜರಾಜೇಶ್ವರಿ ನಗರ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಲಂಚ ಪಡೆಯಲಾಗುತ್ತಿದೆ ಎಂಬ ದೂರಿನ ಹಿನ್ನೆಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ಮಾಡಿ ಪರಿಶೀಲನೆ ನಡೆಸಿದೆ.
ಆರ್.ಆರ್.ನಗರದಲ್ಲಿರುವ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಏಜೆಂಟರು, ದಲ್ಲಾಳಿಗಳು ಜನರಿಂದ ಲಂಚ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಎಸಿಬಿಗೆ ದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆ ಇಂದು ಸಂಜೆ ಕಚೇರಿ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಲಾಯಿತು.
ಸದ್ಯ ಇದುವರೆಗೂ ಕಚೇರಿಯಲ್ಲಿ ಅಕ್ರಮ ಹಣ ಕಂಡುಬಂದಿಲ್ಲ. ದಾಳಿ ಮುಂದುವರೆಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರ ಕೋರಮಂಗಲ ಆರ್ಟಿಒ ಕಚೇರಿ ಮೇಲೆ ನಡೆಸಿದ ಎಸಿಬಿ ದಾಳಿಯಲ್ಲಿ 5.96 ಲಕ್ಷ ರೂ. ಕಂಡು ಬಂದಿತ್ತು. ಏಜೆಂಟರು ಸೇರಿದಂತೆ ಐವರನ್ನು ಬಂಧಿಸಲಾಗಿತ್ತು.