ಬೆಂಗಳೂರು : ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಿಬಿಎಂಪಿ ಮೇಲೆ ಇಂದು ಎಸಿಬಿ ಅಧಿಕಾರಿಗಳ 8 ತಂಡಗಳು ಏಕಕಾಲಕ್ಕೇ ದಾಳಿ ಮಾಡಿ, ಕಡತಗಳ ಪರಿಲಶೀಲನೆ ನಡೆಸಿವೆ.
ಬಿಬಿಎಂಪಿಯ ಕೇಂದ್ರ ಕಚೇರಿ, ನಗರ ಯೋಜನಾ ಕೇಂದ್ರ ಕಚೇರಿ ಸೇರಿ ಎಲ್ಲಾ 8 ವಲಯಗಳ ಮೇಲೂ ಎಸಿಬಿ ದಾಳಿ ಮಾಡಿದೆ. ತೀವ್ರ ಶೋಧ ಕಾರ್ಯ ನಡೆಸಿ ಮಾಹಿತಿ ಕಲೆ ಹಾಕುತ್ತಿವೆ.
ಈ ಮೊದಲು ಬಿಡಿಎ ಮೇಲೆ ಎಸಿಬಿ ದಾಳಿ ಮಾಡಿತ್ತು. ಇದೀಗ ಬಿಬಿಎಂಪಿ ಮೇಲೂ ರೇಡ್ ಮಾಡಿ ಎಸಿಬಿ ಶಾಕ್ ನೀಡಿದೆ.
(ಇದನ್ನೂ ಓದಿ: ಉಕ್ರೇನ್ನಲ್ಲಿ ಸಿಲುಕಿರುವ ಕನ್ನಡಿಗರ ಮಾಹಿತಿ ಸಂಗ್ರಹಕ್ಕಾಗಿ ವೆಬ್ ಪೋರ್ಟಲ್ ಕಾರ್ಯಾರಂಭ)