ಬೆಂಗಳೂರು: ಭ್ರಷ್ಟ ಅಧಿಕಾರಿಗಳ ನಿದ್ದೆ ಕೆಡಿಸಿದ್ದ ಎಸಿಬಿ ನಿನ್ನೆ(ಬುಧವಾರ) 15 ಸರ್ಕಾರಿ ಅಧಿಕಾರಿಗಳು ಹಾಗೂ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿತ್ತು. ದಾಳಿ ವೇಳೆ ಅಪಾರ ಪ್ರಮಾಣದ ಹಣ, ಚಿನ್ನಾಭರಣ ಪತ್ತೆಯಾಗಿದ್ದು, ಜಪ್ತಿ ಮಾಡಿರುವ ಹಣ, ಚಿನ್ನಾಭರಣ, ಆಸ್ತಿ ಪತ್ರಗಳಿಗೂ ಅಧಿಕಾರಿಗಳು ಸಂಪಾದಿಸಿರುವ ಆಸ್ತಿಗೂ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸ ಇರುವುದು ಪತ್ತೆಯಾಗಿದೆ.
ಶೇ. 406.17ಕ್ಕೂ ಅಧಿಕ ಅಕ್ರಮ ಆಸ್ತಿ
1. ಕಲಬುರಗಿಯ ಜೇವರ್ಗಿ ಲೋಕೋಪಯೋಗಿ ಇಲಾಖೆಯ ಉಪ ವಿಭಾಗದ ಕಿರಿಯ ಇಂಜಿನಿಯರ್ ಶಾಂತಗೌಡ ಬಿರಾದರ್ ಅವರ ಬಳಿ ಹೆಚ್ಚು ಅಕ್ರಮ ಆಸ್ತಿ ಪತ್ತೆಯಾಗಿದೆ. ತನಿಖೆಯಲ್ಲಿ ಸುಮಾರು 4,15,12,491 ರೂ. ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ ಹಣ ಜಪ್ತಿ ಮಾಡಲಾಗಿದೆ. ಇವರ ಎಲ್ಲಾ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 406.17 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿದೆ.
2. ಟಿ.ಎಸ್. ರುದ್ರೇಶಪ್ಪ, ಜಂಟಿ ನಿರ್ದೇಶಕರು, ಕೃಷಿ ಇಲಾಖೆ, ಗದಗ
ಸುಮಾರು 6,65,03,782 ರೂ.ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ ಹಣ ತಾಳೆ ಹಾಕಿ ನೋಡಿದಾಗ ಸುಮಾರು ಶೇ. 400ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಪತ್ತೆಯಾಗಿದೆ.
3. ಶ್ರೀನಿವಾಸ್.ಕೆ, ಕಾರ್ಯಪಾಲಕ ಅಭಿಯಂತರರು, ಹೆಚ್‌ಎಲ್‌ಸಿ-3, ಕೆ.ಆರ್.ಪೇಟೆ ಉಪ ವಿಭಾಗ, ಮಂಡ್ಯ
ಈವರೆಗಿನ ತನಿಖೆಯಲ್ಲಿ ಸುಮಾರು 3,10,20,826 ರೂ. ಮೌಲ್ಯದ ಚಿನ್ನಾಭರಣ, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ ಹಣ ಜಪ್ತಿ ಮಾಡಲಾಗಿದೆ. ಸದ್ಯದ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ.179.37ಕ್ಕೂ ಹೆಚ್ಚಿನ ಅಕ್ರಮ ಆಸ್ತಿ ಇರುವುದು ಪತ್ತೆಯಾಗಿದೆ.
4. ಕೆ.ಎಸ್.ಅಂಗೇಗೌಡ, ಕಾರ್ಯಪಾಲಕ ಅಭಿಯಂತರರು, ಸ್ಯಾರ್ಟ್ ಸಿಟಿ, ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು
ಇವರ ಬಳಿ 2,03,94,135 ರೂ. ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿವೆ. ಅಧಿಕಾರಿಯ ಸಂಪಾದನೆಗೆ ಹೋಲಿಸಿದಾಗ ಸುಮಾರು ಶೇ.146.33 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿದೆ.
5. ಎಲ್.ಸಿ. ನಾಗರಾಜ್, ಆಡಳಿತಾಧಿಕಾರಿ, ಸಕಾಲ ಮಿಷನ್, 6ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು ನಗರ
ತನಿಖೆಯಲ್ಲಿ ಇವರ ಬಳಿ 10,82,07,660 ರೂ.ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿವೆ. ಸದರಿ ಮೊತ್ತವನ್ನು ಆಪಾದಿತರ ಎಲ್ಲಾ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ.198 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿದೆ. ಈ ಬಗ್ಗೆ ಆಪಾದಿತರ ವಿವರಣೆಯನ್ನು ಪಡೆದು ತನಿಖೆಯನ್ನು ಮಾಡಬೇಕಾಗಿದೆ.
ಡಿ-ಗ್ರೂಪ್ ನೌಕರ ಬಳಿ 563.85 ರಷ್ಟು ಅಕ್ರಮ ಆಸ್ತಿ?
6. ಜಿ.ವಿ.ಗಿರಿ, ಗ್ರೂಪ್-ಡಿ ನೌಕರ, ಜಿಟಿಎಂಪಿ ಬಾಲಕ ಮತ್ತು ಬಾಲಕಿಯರ ಹೈಸ್ಕೂಲ್, ಮಾರಪ್ಪನಪಾಳ್ಯ, ಯಶವಂತಪುರ, ಬೆಂಗಳೂರು ನಗರ,
ಈವರೆಗಿನ ತನಿಖೆಯಲ್ಲಿ ಸುಮಾರು 6,24,03,000 ರೂ.ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿರುತ್ತದೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 563.85 ರಷ್ಟು ಅಕ್ರಮ ಆಸ್ತಿ ಇರುವುದು ಗೊತ್ತಾಗಿದೆ.
7. ಎಸ್. ಎಸ್. ರಾಜಶೇಖರ್, ಪಿಸಿಯೋಥೆರಪಿಸ್ಟ್, ಸರ್ಕಾರಿ ಆಸ್ಪತ್ರೆ, ಯಲಹಂಕ, ಬೆಂಗಳೂರು ನಗರ
ಸರ್ಕಾರಿ ಪಿಸಿಯೋಥೆರಪಿಸ್ಟ್ ರಾಜಶೇಖರ್ ಬಳಿ 1,40,64,000 ರೂ. ಮೌಲ್ಯದ ಚಿನ್ನಾಭರಣ, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಪತ್ತೆಯಾಗಿವೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 77ಕ್ಕೂ ಅಧಿಕ ಅಕ್ರಮ ಆಸ್ತಿ ಸಂಪಾದಿಸಿರುವುದು ಕಂಡುಬಂದಿದೆ.
8. ಮಾಯಣ್ಣ, ಪ್ರಥಮ ದರ್ಜೆ ಸಹಾಯಕ, ಬಿಬಿಎಂಪಿ ಕೇಂದ್ರ ಕಚೇರಿ, ಎನ್.ಆರ್. ವೃತ್ತ, ಬೆಂಗಳೂರು ನಗರ
ಬಿಬಿಎಂಪಿ ಕೇಂದ್ರ ಕಚೇರಿಯ ಎಫ್‌ಡಿಎ ಮಾಯಣ್ಣ ಅವರ ಬಳಿ 4,92,35,000 ರೂ. ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ ಹಣ ಜಪ್ತಿ ಮಾಡಲಾಗಿದೆ. ಆದಾಯಕ್ಕೆ ಹೋಲಿಸಿದಾಗ ಶೇ.38ಕ್ಕೂ ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿದೆ.
9. ಕೆ.ಎಸ್. ಶಿವಾನಂದ್, ಸಬ್ ರಿಜಿಸ್ಟ್ರಾರ್ (ನಿವೃತ್ತ), ಬಳ್ಳಾರಿ ಜಿಲ್ಲೆ
ಈವರೆಗಿನ ತನಿಖೆಯಲ್ಲಿ ಇವರಿಂದ ಸುಮಾರು 1,37,40,835 ರೂ. ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ ಇರಿಸಿದ್ದ ಹಣ ಮುಟ್ಟುಗೋಲು ಹಾಕಿ ಪರಿಶೀಲಿಸಿದಾಗ ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ.198ರಷ್ಟು ಅಕ್ರಮ ಆಸ್ತಿ ಇರುವುದು ಕಂಡುಬಂದಿದೆ.
10, ಸದಾಶಿವ ರಾಯಪ್ಪ ಮರಲಿಂಗಣ್ಣನವರ್, ಹಿರಿಯ ಮೋಟಾರು ನಿರೀಕ್ಷಕ, ಗೋಕಾಕ್, ಬೆಳಗಾವಿ
ಈವರೆಗಿನ ತನಿಖೆಯಲ್ಲಿ ಸುಮಾರು 3,05,05,574 ರೂ. ಮೌಲ್ಯದ ಚಿನ್ನಾಭರಣ, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಖಾತೆ ಜಪ್ತಿ ಮಾಡಿಕೊಂಡು ಪರಿಶೀಲಿಸಿದಾಗ ಸುಮಾರು ಶೇ.190.81ರಷ್ಟು ಅಕ್ರಮ ಆಸ್ತಿ ಇರುವುದು ಕಂಡುಬಂದಿದ್ದು, ಈ ಬಗ್ಗೆ ಆಪಾದಿತರ ವಿವರಣೆ ಪಡೆದು ತನಿಖೆಯನ್ನು ಮುಂದುವರೆಸಲಾಗಿದೆ.
11.ಅಡವಿ ಸಿದ್ಧೇಶ್ವರ ಕಾರೆಪ್ಪ ಮಸ್ತಿ, ಅಭಿವೃದ್ಧಿ ಅಧಿಕಾರಿ, ಸಹಕಾರ ಇಲಾಖೆ, ರಾಯಬಾಗ್ ತಾಲ್ಲೂಕು, ಬೆಳಗಾವಿ
ಇವರ ಬಳಿ ಸುಮಾರು 1,74,74,410 ರೂ. ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸೇರಿ ಶೇ.191.91 ಕ್ಕೂ ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿದೆ.
12. ನಾಥಾಜಿ ಪೀರಾಜ ಪಾಟೀಲ, ಲೈನ್ ಮೆಕಾನಿಕ್ ಗ್ರೇಡ್-2, ಹಸ್ಲಾಂ, ಬೆಳಗಾವಿ ಜಿಲ್ಲೆ
ಸುಮಾರು 2,20,69,587 ರೂ.ಗಳ ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ ಹಣ ಮುಟ್ಟುಗೋಲು ಹಾಕಿಕೊಂಡು ಇತ್ಯಾದಿಗಳು ಸಿಕ್ಕಿದೆ. ಸುಮಾರು ಶೇ.141.30 ರಷ್ಟು ಅಕ್ರಮ ಆಸ್ತಿ ಇರುವುದು ಕಂಡುಬಂದಿದೆ.
13. ಲಕ್ಷ್ಮೀನರಸಿಂಹಯ್ಯ, ರಾಜಸ್ವ ನಿರೀಕ್ಷಕರು, ಕಸಬಾ-2 ದೊಡ್ಡಬಳ್ಳಾಪುರ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಈವರೆಗಿನ ತನಿಖೆಯಲ್ಲಿ ಸುಮಾರು 1,83,50.067 ರೂ. ಮೌಲ್ಯದ ಚಿನ್ನದ ಒಡವೆ, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಸಿಕ್ಕಿವೆ, ಆಪಾದಿತ ಗಳಿಸಿದ ಆದಾಯಕ್ಕೆ ಹೋಲಿಸಿದಾಗ ಶೇ.141.30 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿದೆ.
ನಿವೃತ್ತಿ ಅಧಿಕಾರಿ ಬಳಿ ಶೇ. 879.53 ರಷ್ಟು ಅಕ್ರಮ ಆಸ್ತಿ!
14. ವಾಸುದೇವ್, ಆರ್. ಎನ್, ಮಾಜಿ ಪ್ರಾಜೆಕ್ಟ್ ಡೈರೆಕ್ಟರ್ (ಯೋಜನಾ ನಿರ್ದೇಶಕರು), ನಿರ್ಮಿತಿ ಕೇಂದ್ರ, ಬೆಂಗಳೂರು ಗ್ರಾಮಾಂತರ ಜಿಲ್ಲೆ
ಇವರಿಗೆ ಸಂಬಂಧಿಸಿದಂತೆ ಈವರೆಗಿನ ತನಿಖೆಯಲ್ಲಿ ಸುಮಾರು 18,20,63,868 ರೂ. ಮೌಲ್ಯದ ಚಿನ್ನಾಭರಣ, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಪತ್ತೆಯಾಗಿವೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ. 879.53 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿದೆ.
15. ಚಿ.ಕೃಷ್ಣಾರೆಡ್ಡಿ, ಪ್ರಧಾನ ವ್ಯವಸ್ಥಾಪಕರು, ನಂದಿನಿ ಹಾಲು ಉತ್ಪನ್ನಗಳು, ಬೆಂಗಳೂರು,
ಇವರ ಬಳಿ ಸುಮಾರು 4,82,03,049 ರೂ.ಮೌಲ್ಯದ ಚಿನ್ನದ ಒಡವೆಗಳು, ನಗದು, ವಾಹನಗಳು, ನಿವೇಶನ, ಕಟ್ಟಡ, ಗೃಹೋಪಯೋಗಿ ವಸ್ತುಗಳು, ಭೂಮಿ, ಬ್ಯಾಂಕ್ ಠೇವಣಿ, ಇತ್ಯಾದಿಗಳು ಪತ್ತೆಯಾಗಿವೆ. ಸದರಿ ಮೊತ್ತವನ್ನು ಆಪಾದಿತರ ಬಲ್ಲ ಮೂಲಗಳ ಆದಾಯಕ್ಕೆ ಹೋಲಿಸಿದಾಗ ಸುಮಾರು ಶೇ.305 ರಷ್ಟು ಹೆಚ್ಚಿನ ಅಕ್ರಮ ಆಸ್ತಿ ಇರುವುದು ಕಂಡುಬಂದಿದೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: ರೆವಿನ್ಯೂ ಇನ್ಸ್ಪೆಕ್ಟರ್ ಮೇಲೆ ಎಸಿಬಿ ದಾಳಿ, 2 ಕೋಟಿ 25 ಲಕ್ಷ ಅಕ್ರಮ ಆಸ್ತಿ ಪತ್ತೆ