ETV Bharat / city

ರಾಜ್ಯದ ಮೂರೂ ರಾಜಕೀಯ ಪಕ್ಷಗಳ 'ಕ್ಲೀನ್ ಇಮೇಜ್' ನಾಯಕರಿಗೆ ಆಮ್ ಆದ್ಮಿ ಗಾಳ?

author img

By

Published : Apr 21, 2022, 8:28 PM IST

ದೆಹಲಿ, ಪಂಜಾಬ್​, ಹರಿಯಾಣದಲ್ಲಿ ಕಮಾಲ್​ ಮಾಡಿರುವ ಆಪ್​ ರಾಜ್ಯದಲ್ಲೂ ನಿಧಾನವಾಗಿ ಬೇರೂರಲು ಈಗಿನಿಂದಲೇ ಸಿದ್ಧತೆ ನಡೆಸುತ್ತಿದೆ. ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​ ಪಕ್ಷಗಳ ಕ್ಲೀನ್​ ಇಮೇಜ್​ ನಾಯಕರನ್ನು ಸೆಳೆಯಲು ತಂತ್ರ ರೂಪಿಸುತ್ತಿದೆ.

aap-planning
ಆಮ್ ಆದ್ಮಿ ಗಾಳ

ಬೆಂಗಳೂರು: ರಾಜ್ಯದ ಮೂರೂ ರಾಜಕೀಯ ಪಕ್ಷಗಳಲ್ಲಿ ಕ್ಲೀನ್ ಇಮೇಜ್ ಇರುವವರಿಗೆ ಆಮ್ ಆದ್ಮಿ ಪಕ್ಷದ ನೇತಾರ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗಾಳ ಹಾಕಿದ್ದಾರೆ. ರೈತ ಸಂಘಟನೆ ಇದೀಗ ದೊಡ್ಡ ಮಟ್ಟದಲ್ಲಿ ಆಮ್ ಆದ್ಮಿ ಪಕ್ಷದ ಮುಖವಾಣಿಯಾಗಿ ನಿಲ್ಲಲು ತೀರ್ಮಾನಿಸಿದೆ.

ದೆಹಲಿ, ಪಂಜಾಬ್, ಗುಜರಾತ್, ಹರಿಯಾಣ ರಾಜ್ಯಗಳ ನಂತರ ದಕ್ಷಿಣ ಭಾರತದತ್ತ ಕಣ್ಣು ಹಾಯಿಸಿರುವ ಅರವಿಂದ ಕೇಜ್ರಿವಾಲ್, ಕರ್ನಾಟಕಕ್ಕೆ ಕಾಲಿಟ್ಟಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 50 ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಬಯಸಿದ್ದಾರೆ. ಹಾಗಾಗಿ, ಕ್ಲೀನ್ ಇಮೇಜ್ ಇರುವ ನಾಯಕರ ತಲಾಶ್ ಮಾಡುತ್ತಿದ್ದಾರೆ.

ಈ ಉದ್ದೇಶದೊಂದಿಗೆ ಜೆಡಿಎಸ್‍ನಿಂದ ಶಾಸಕ ಎ.ಟಿ.ರಾಮಸ್ವಾಮಿ, ಮಾಜಿ ಶಾಸಕ ವೈ.ಎಸ್.ವಿ.ದತ್ತಾ, ಕಾಂಗ್ರೆಸ್ ಪಕ್ಷದಿಂದ ಹಿರಿಯ ನಾಯಕ ಎಸ್.ಆರ್.ಪಾಟೀಲ್, ಸಂಯುಕ್ತ ಜನತಾದಳದ ಡಾ.ಎಂ.ಪಿ. ನಾಡಗೌಡ ಸೇರಿದಂತೆ ಹಲವು ಮಂದಿ ನಾಯಕರನ್ನು ಈಗಾಗಲೇ ಕೇಜ್ರಿವಾಲ್ ಸಂಪರ್ಕಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಧಿಕಾರಿಗಳೇ ಬಂಡವಾಳ: ಇದೇ ರೀತಿ ಹಲವು ಐ.ಎ.ಎಸ್ ಹಾಗೂ ಐ.ಪಿ.ಎಸ್ ಅಧಿಕಾರಿಗಳು ಸರ್ಕಾರದ ಮುಂದೆ ಸ್ವಯಂನಿವೃತ್ತಿಗೆ ಅರ್ಜಿ ಸಲ್ಲಿಸಿದ್ದು, ಅಮ್ ಆದ್ಮಿ ಪಕ್ಷ ಸೇರಲು ಕಾತರರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಭ್ರಷ್ಟಾಚಾರದ ವಿರುದ್ಧ ಇಡೀ ದೇಶದ ಗಮನ ಸೆಳೆಯುವ ಹೋರಾಟ ಸಂಘಟಿಸಿದ ನಂತರ ಅಮ್ ಆದ್ಮಿ ಪಕ್ಷ ದೆಹಲಿಯ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಸಫಲವಾಗಿತ್ತು. ಮತ್ತು ಎರಡನೇ ಬಾರಿಯೂ ಅಧಿಕಾರ ಹಿಡಿಯುವಲ್ಲಿ ಯಶ ಕಂಡಿದೆ.

ಈ ಮಧ್ಯೆ ಇತ್ತೀಚೆಗೆ ನಡೆದ ಪಂಜಾಬ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಗೆಲುವಿನ ಕನಸು ಕಾಣುತ್ತಿದ್ದ ಬಿಜೆಪಿಯನ್ನು ಮಣಿಸಿದ ಅಮ್ ಆದ್ಮಿ ಪಕ್ಷ ಜಯಭೇರಿ ಬಾರಿಸಿ ಸ್ವಯಂಬಲದ ಮೇಲೆ ಅಧಿಕಾರ ಹಿಡಿದಿದೆ. ಇದೇ ರೀತಿ ನರೇಂದ್ರ ಮೋದಿ ಅವರ ಶಕ್ತಿ ಕೇಂದ್ರವಾದ ಗುಜರಾತ್ ರಾಜ್ಯದಲ್ಲೂ ಅಮ್ ಆದ್ಮಿ ಪಕ್ಷ ಬೇರು ಬಿಡುತ್ತಿದ್ದು, ಹರಿಯಾಣದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ದೊಡ್ಡ ಶಕ್ತಿಯಾಗಿ ಹೊರಹೊಮ್ಮುವ ನಿರೀಕ್ಷೆಯಲ್ಲಿದೆ.

ಐವತ್ತು ಹೆಚ್ಚಾದರೆ ನೂರು: ಗೋವಾ ರಾಜ್ಯದಲ್ಲೂ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಗೆದ್ದುಕೊಂಡಿದ್ದು, ಅದೇ ಉತ್ಸಾಹದಲ್ಲಿ ಇದೀಗ ಕರ್ನಾಟಕಕ್ಕೆ ಎಂಟ್ರಿ ಕೊಟ್ಟಿದೆ. 2023 ರ ಚುನಾವಣೆಯಲ್ಲಿ ದೊಡ್ಡ ಮಟ್ಟದ ಯಶಸ್ಸಿನ ಕನಸು ಬೇಡ. ಬದಲಿಗೆ 2028 ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ಸಂಘಟಿಸಿ ಎಂದು ತಮ್ಮ ಸಂಪರ್ಕಕ್ಕೆ ಬಂದ ರಾಜ್ಯದ ನಾಯಕರಿಗೆ ಅರವಿಂದ ಕೇಜ್ರಿವಾಲ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ಮುಂದಿನ ಚುನಾವಣೆಯಲ್ಲಿ ಕ್ಲೀನ್ ಇಮೇಜ್ ಇರುವ 50 ಮಂದಿ ಅಮ್ ಆದ್ಮಿ ಪಕ್ಷದ ವತಿಯಿಂದ ಕಣಕ್ಕಿಳಿದರೂ ಸಾಕು, ಒಂದು ವೇಳೆ ಇನ್ನಷ್ಟು ಮಂದಿ ಅಭ್ಯರ್ಥಿಗಳು ಸಿಕ್ಕರೆ ನೂರು ಕ್ಷೇತ್ರಗಳಲ್ಲಿ ಸ್ಪರ್ಧಿಸೋಣ ಎಂದು ಕೇಜ್ರಿವಾಲ್ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.

10% ವೋಟು ಸಾಕು: ಕನಿಷ್ಠ ಐದು ಸಾವಿರದಿಂದ ಹತ್ತು ಸಾವಿರದಷ್ಟು ಮತಗಳನ್ನು ಪಡೆಯಲು ನಮ್ಮ ಅಭ್ಯರ್ಥಿಗಳು ಯಶಸ್ವಿಯಾದರೆ ಸಾಕು, ನಾವು 2028 ರ ಚುನಾವಣೆಯಲ್ಲಿ ಯಾರೂ ನಿರ್ಲಕ್ಷಿಸಲಾಗದ ಶಕ್ತಿಯಾಗಿ ಬೆಳೆಯಬಹುದು ಎಂಬುದು ಕೇಜ್ರಿವಾಲ್ ಅವರ ಲೆಕ್ಕಾಚಾರ. ಒಂದು ಕ್ಷೇತ್ರದಲ್ಲಿ ನಾವು ಐದರಿಂದ ಹತ್ತು ಸಾವಿರ ಮತಗಳನ್ನು ಗಳಿಸಲು ಶಕ್ತರಾದರೆ ಸಹಜವಾಗಿಯೇ ನಮ್ಮ ಶಕ್ತಿಯ ಬಗ್ಗೆ ಎದುರಾಳಿಗಳು ಆತಂಕ ಪಡುವಂತಾಗುತ್ತದೆ.

2028 ರ ವೇಳೆಗೆ ಇದೇ ಅಂಶ ನಮ್ಮ ಪಕ್ಷದ ಶಕ್ತಿ ಹಿಗ್ಗಲು ಪೂರಕ ವಾತಾವರಣವನ್ನು ಸೃಷ್ಟಿಸುತ್ತದೆ. ಆ ಮೂಲಕ ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು ಉಳಿದ ಶಕ್ತಿಗಳು ಪರಸ್ಪರ ಕೈಗೂಡಿಸಬಹುದು. ಹೀಗಾಗಿ ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದಲ್ಲಿ ಪಕ್ಷವನ್ನು ಸಂಘಟಿಸಲು ನನಗೆ ತಮ್ಮ ಸಹಕಾರ ಬೇಕು ಎಂದು ತಮ್ಮ ಸಂಪರ್ಕಕ್ಕೆ ಬಂದ ನಾಯಕರಿಗೆ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ ಎನ್ನಲಾಗಿದೆ.

ನಾಲ್ಕನೇ ಶಕ್ತಿಯಾಗುತ್ತಾ ಆಪ್​?: ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಭ್ರಷ್ಟಾಚಾರದ ಆರೋಪ ಹೊತ್ತು ನರಳುತ್ತಿವೆ. ಇಂತಹ ಸಂದರ್ಭದಲ್ಲಿ ಮತದಾರರಿಗೆ ನಾಲ್ಕನೇ ಶಕ್ತಿಯ ಅಗತ್ಯ ಕಂಡು ಬಂದಿದೆ. ಆದರೆ, ಅಂತಹ ಶಕ್ತಿ ಎದ್ದು ನಿಲ್ಲದ ಕಾರಣಕ್ಕಾಗಿ ಅನಿವಾರ್ಯವಾಗಿ ಈ ಮೂರು ಪಕ್ಷಗಳ ಪೈಕಿ ಒಂದನ್ನು ಬೆಂಬಲಿಸುವ ಅನಿವಾರ್ಯ ಪರಿಸ್ಥಿತಿಗೆ ಜನರು ಸಿಲುಕಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಅಮ್ ಆದ್ಮಿ ಪಕ್ಷ ತಲೆ ಎತ್ತಿದರೆ ನಿಸ್ಸಂಶಯವಾಗಿ ಕರ್ನಾಟಕದ ಮತ ಬ್ಯಾಂಕ್​ನಲ್ಲಿ ಕನಿಷ್ಠ ಹತ್ತು ಪರ್ಸೆಂಟ್​ಗಳಷ್ಟು ಮತಗಳನ್ನು ಸೆಳೆಯಬಹುದು ಎಂದು ಅರವಿಂದ ಕೇಜ್ರಿವಾಲ್ ಈ ನಾಯಕರಿಗೆ ಹುರಿದುಂಬಿಸಿದ್ದಾರೆ.

ನಿಮ್ಮ ಪೈಕಿ ಹಲವರು ಜನರ ಮಧ್ಯೆ ಸ್ವಂತ ಬಲ ಹೊಂದಿದ್ದು ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಮೂರು ಅಥವಾ ನಾಲ್ಕು ಮಂದಿ ಗೆಲ್ಲುವ ಸಾಧ್ಯತೆ ಇದೆ. ಒಂದು ಸಲ ಕರ್ನಾಟಕದಲ್ಲಿ ಖಾತೆ ತೆರೆದರೆ ಅನುಮಾನವೇ ಬೇಡ. 2028 ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ನಾವು ಅಧಿಕಾರದಲ್ಲಿ ಪಾಲು ಪಡೆಯುವ ಸ್ಥಿತಿಗೆ ತಲುಪಿರುತ್ತೇವೆ. ಆ ಮೂಲಕ ಕರ್ನಾಟಕದಲ್ಲಿ ನೆಲೆಯೂರಲು ಕೇಜ್ರಿವಾಲ್ ಸಂಪೂರ್ಣ ಆಸಕ್ತರಾಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಬಂದಿದೆ.

ಇದನ್ನೂ ಓದಿ: ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಕಾರ್ಯಾದೇಶ: ಹೈಕೋರ್ಟ್​​ಗೆ ಬಿಬಿಎಂಪಿ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.