ಬೆಂಗಳೂರು: ಆನ್ ಲೈನ್ ಮೂಲಕ 500 ರೂಪಾಯಿಗೆ ವೈನ್ ಆರ್ಡರ್ ಮಾಡಿದ್ದ ಯುವತಿಯೋರ್ವಳಿಗೆ ವಂಚಕ ಮಕ್ಮಲ್ ಟೋಪಿ ಹಾಕಿದ್ದಾನೆ. ಯುವತಿಯು 50 ಸಾವಿರ ರೂಪಾಯಿ ಕಳೆದುಕೊಂಡ ಘಟನೆ ಲಾಲ್ ಬಾಗ್ ನಲ್ಲಿ ನಡೆದಿದೆ. ಇಲ್ಲಿನ ನಿವಾಸಿಯಾಗಿರುವ ಯುವತಿಯು ಕಳೆದ ಎರಡು ದಿನಗಳ ಹಿಂದೆ ಆನ್ಲೈನ್ ನಲ್ಲಿ ವೈನ್ ಆರ್ಡರ್ ಮಾಡಿದ್ದಳು. ಅದಕ್ಕೆ 540 ರೂಪಾಯಿ ಪಾವತಿಸಿದ್ದಳು. ಇದರಂತೆ ಸಿಬ್ಬಂದಿಯು ವೈನ್ ತಂದು ಯುವತಿಗೆ ನೀಡಿದ್ದಾನೆ.
ಈ ವೇಳೆ ಡಿಲಿವರಿ ಚಾರ್ಜ್ 10 ರೂಪಾಯಿ ನೀಡುವಂತೆ ಕೇಳಿದ್ದು, ಯುವತಿಯು ಆನ್ಲೈನ್ ಮೂಲಕ ಪಾವತಿಸಲು ಮುಂದಾಗಿದ್ದಾಳೆ. ಆಗ, ಯುವತಿಯಿಂದ ಓಟಿಪಿ ಪಡೆದ ಖದೀಮ ಆಕೆಯ ಬ್ಯಾಂಕ್ ಅಕೌಂಟ್ ನಲ್ಲಿದ್ದ 49 ಸಾವಿರಕ್ಕಿಂತ ಹೆಚ್ಚು ಹಣಕ್ಕೆ ಕನ್ನ ಹಾಕಿದ್ದಾನೆ. ಮೋಸಹೋದ ಯುವತಿಯು ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸದ್ಯ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.
ಓದಿ : ಸಂಘರ್ಷದ ವಾತಾವರಣದಲ್ಲಿಯೂ ಶಾಂತಿ - ಸುವ್ಯವಸ್ಥೆ ಕಾಪಾಡಿದ್ದೇವೆ: ಸಿಎಂ ಬೊಮ್ಮಾಯಿ