ಚಿಕ್ಕಬಳ್ಳಾಪುರ : ಅಧಿಕ ಮಳೆಯಿಂದ ಪ್ರವಾಸಿಗರ ನೆಚ್ಚಿನ ತಾಣವಾದ ಶ್ರೀನಿವಾಸ ಸಾಗರ ಜಲಾಶಯದ ಬಳಿ ಯುವಕನೋರ್ವ ಹುಚ್ಚಾಟದಿಂದ ಕೆಳಗೆ ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆ ತಾಲೂಕಿನಲ್ಲಿ ನಡೆದಿದೆ.
ಜಿಲ್ಲೆಯಾದ್ಯಂತ ಕಳೆದ 10 ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಕೆರೆ ಕುಂಟೆಗಳು ತುಂಬಿ ಹರಿಯುತ್ತಿವೆ. ತಾಲೂಕಿನ ಶ್ರೀನಿವಾಸ ಸಾಗರ ಕೆರೆ ತುಂಬಿ ಹರಿಯುತ್ತಿದ್ದು, ಆಕರ್ಷಣಿಯವಾಗಿದೆ. ಜಲಾಶಯ ನೋಡಲು ನೂರಾರು ಸಂಖ್ಯೆಯಲ್ಲಿ ನೋಡುಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಜಲಾಶಯದ ಬಳಿ ಗೌರಿಬಿದನೂರು ಮೂಲದ ಯುವಕ ಹುಚ್ಚಾಟ ನಡೆಸಿದ್ದು, ನೋಡುತ್ತಿದಂತೆಯೇ ಜಲಾಶಯದಿಂದ ಜಾರಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಯುವಕ ಜಾರಿ ಬೀಳುವ ಭಯಾನಕ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಲಾತಾಣಗಳಲ್ಲಿಯೂ ವೈರಲ್ ಆಗುತ್ತಿದೆ.
ಕಳೆದ ದಿನ ವೀಕೆಂಡ್ ರಜೆ ಹಿನ್ನೆಲೆ ಸ್ಥಳಕ್ಕೆ ಪ್ರವಾಸಿಗರು ಭೇಟಿ ಕೊಟ್ಟಿದ್ದರು. ಕಳೆದ ಸಂಜೆ ಯುವಕ ಮೇಲೆ ಹತ್ತಲು ಹೋಗಿ ಕೆಳಗೆ ಬಿದ್ದಿರುವ ಘಟನೆ ನಡೆದಿದೆ. ಘಟನೆಗೆ ಸಂಬಂದಿಸಿದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಎಲೆಕ್ಟ್ರಿಕ್ ಬೈಕ್ ಚಾರ್ಜ್ ಮಾಡುವಾಗ ವಿದ್ಯುತ್ ಸ್ಪರ್ಶ: ಯುವತಿ ಸಾವು