ETV Bharat / city

ಬೆಂಗಳೂರು: ತಂದೆಗೆ ಬೆಡ್ ಸಿಗ್ತಿಲ್ಲವೆಂದು ಸಚಿವ ಅಶೋಕ್​​ರನ್ನು ತಡೆದು ನಿಲ್ಲಿಸಿದ ಮಹಿಳೆ - ತಂದೆಗೆ ಬೆಡ್​​ಗಾಗಿ ಮಹಿಳೆಯ ಹೋರಾಟ

ಬೆಂಗಳೂರಲ್ಲಿ ಬೆಡ್ ಸಮಸ್ಯೆ ಕಡಿಮೆಯಾಗುತ್ತಿಲ್ಲ. ಮಹಿಳೆಯೊಬ್ಬರು ತಮ್ಮ ತಂದೆಗೆ ಬೆಡ್ ಕೊಡಿ ಎಂದು ಸಚಿವರಿಗೆ ಪಟ್ಟು ಹಿಡಿದ ಘಟನೆ ಬುಧವಾರ ನಡಯಿತು.

ashok
ashok
author img

By

Published : May 6, 2021, 2:43 AM IST

Updated : May 6, 2021, 6:28 AM IST

ಬೆಂಗಳೂರು: ತಮ್ಮ ತಂದೆಗೆ ಬೆಡ್ ಸಿಕ್ಕಿಲ್ಲ ಎಂದು ಮಹಿಳೆಯೊಬ್ಬರು ಸಚಿವ ಆರ್. ಅಶೋಕ್​ ಅವರನ್ನು ತಡೆದು ನಿಲ್ಲಿಸಿದ ಘಟನೆ ಬುಧವಾರ ನಡೆದಿದೆ.

ಬಳಿಕ ಸಚಿವ ಆರ್.ಅಶೋಕ್, ಆಯುಕ್ತರಾದ ಗೌರವ ಗುಪ್ತಾ ನೆರವಿನಿಂದ ಮಹಿಳೆಯ ತಂದೆಗೆ ನಗರದ ಸಪ್ತಗಿರಿ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿದೆ.

ಏನಿದು ಘಟನೆ?
ಬೆಡ್ ಕೊಡಿಸುವಂತೆ ಬಿಬಿಎಂಪಿ ವಾರ್ ರೂಮ್​ಗೆ ಮಹಿಳೆಯೊಬ್ಬರು ನುಗ್ಗಿ ಬಳಿಕ ಅಲೇ ಇದ್ದ ಸಚಿವ ಆರ್. ಅಶೋಕ್ ಬಳಿ ಅಳಲು ತೋಡಿಕೊಂಡಿದ್ದಳು. ಅಷ್ಟೇ ಅಲ್ಲ ಬೆಡ್ ನೀಡಲ್ಲ ಅಂದರೆ ದಾರಿಯಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದಿದ್ದಳು.

ತಂದೆಗೆ ಬೆಡ್ ಸಿಗ್ತಿಲ್ಲವೆಂದು ಸಚಿವ ಅಶೋರ್​ರನ್ನು ತಡೆದು ನಿಲ್ಲಿಸಿದ ಮಹಿಳೆ
ಮಹಿಳೆಯ ತಂದೆ ರೈಲ್ವೇ ‌ಇಲಾಖೆಯಲ್ಲಿ‌ ಕೆಲಸ ಮಾಡುತ್ತಿದ್ದು, ಕೊರೊನಾ ದೃಢಪಟ್ಟ ಬಳಿಕ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಒಂದು ವಾರದಿಂದ ರೈಲ್ವೇ ಆಸ್ಪತ್ರೆ ಯಲಹಂಕದಲ್ಲಿದ್ದು ನಂತರ ಆಕ್ಸಿಜನ್, ವೆಂಟಿಲೇಟರ್ ಇಲ್ಲ ಅಂತಾ ಆಸ್ಪತ್ರೆಯವರು ಕಳಿಸಿದ್ದರು. ಬಳಿಕ ವಿಕ್ರಂ ಆಸ್ಪತ್ರೆಗೆ ಹೋದರೆ ಬೆಡ್ ಇಲ್ಲ ಎಂದು ಅಲ್ಲಿನ ಸಿಬ್ಬಂದಿ ಹೇಳಿದ್ದರು.

ಇದರಿಂದ ದಿಕ್ಕು ತೋಚದೇ ಕಂಗಾಲಾಗಿದ್ದ ಮಹಿಳೆ, ಸಚಿವರು ನನ್ನ ಸಮಸ್ಯೆ ಪರಿಹರಿಸಿಯೇ ಹೋಗಬೇಕು ಅಂತ ಪಟ್ಟು ಹಿಡಿದಿದ್ದಳು. ಬಳಿಕ ಸಚಿವರು ಸಮಸ್ಯೆ ಅರಿತು ಬೆಡ್ ವ್ಯವಸ್ಥೆ ಮಾಡಿಸಿದ್ದಾರೆ.

ಆ ಬಳಿಕ ಪ್ರತಿಕ್ರಿಯೆ ನೀಡಿದ ಮಹಿಳೆ, ಬೆಡ್ ಕೊಡಿಸಿರುವುದಕ್ಕೆ ಸಚಿವರಿಗೆ ಧನ್ಯವಾದ ತಿಳಿಸಿದ್ದಾರೆ.

Last Updated : May 6, 2021, 6:28 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.