ಬೆಂಗಳೂರು: ಕಳ್ಳನೊಬ್ಬ ಟೀ ಕುಡಿಯುವ ನೆಪದಲ್ಲಿ ಬಂದು ಮೊಬೈಲ್ ದೋಚಿರುವ ಘಟನೆ ಬೆಂಗಳೂರಿನ ಯಶವಂತಪುರದ ಕಾಫಿ ಸಂತೆ ಹೋಟೆಲ್ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಯಶವಂತಪುರದ ಕಾಫಿ ಸಂತೆ ಹೋಟೆಲ್ಗೆ ಗ್ರಾಹಕರ ಸೋಗಿನಲ್ಲಿ ಬಂದ ಖದೀಮ ಕೆಲ ಸಮಯ ಅಂಗಡಿಯಲ್ಲಿ ನಿಂತು ಅಂಗಡಿ ಸಿಬ್ಬಂದಿ ಮತ್ತು ಜನರ ಚಲನವಲನವನ್ನು ವೀಕ್ಷಿಸಿದ್ದಾನೆ. ಅಂಗಡಿಯ ಟೇಬಲ್ ಮೇಲಿಟ್ಟಿದ್ದ ಮೊಬೈಲ್ ಅನ್ನು ನೋಡಿದ್ದಾನೆ. ಈ ವೇಳೆ ವ್ಯಾಪಾರದಲ್ಲಿ ನಿರತರಾಗಿದ್ದ ಸಿಬ್ಬಂದಿಯ ಕಣ್ಣು ತಪ್ಪಿಸಿ ಸೆಲ್ಫೋನ್ ಅನ್ನು ಕದ್ದು ಪರಾರಿಯಾಗಿದ್ದಾನೆ.
ಕಳ್ಳನ ಕೈಚಳಕದ ದೃಶ್ಯ ಅಂಗಡಿಯಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೊಬೈಲ್ ಕಳ್ಳ ನೀಲಿ ಬಣ್ಣದ ಶರ್ಟ್, ಮುಖಕ್ಕೆ ಮಾಸ್ಕ್ ಧರಿಸಿದ್ದಾನೆ. ಈ ಬಗ್ಗೆ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಂದು ಪೊಲೀಸರು ತಿಳಿಸಿದ್ದಾರೆ.