ಬೆಂಗಳೂರು : ಜೈಲಿನಿಂದ ಹೊರಬಂದ ಬಳಿಕವೂ ಜಾಲಿ ರೈಡ್ ಶೋಕಿಗಾಗಿ ದ್ವಿಚಕ್ರ ವಾಹನ ಕಳವು ಪ್ರಕರಣಗಳಲ್ಲಿ ಸಕ್ರಿಯನಾಗಿದ್ದ ಕುಖ್ಯಾತ ಆರೋಪಿಯನ್ನು ರಾಜಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸಾಗರ್ (21) ಬಂಧಿತ ಆರೋಪಿ.
ಎರಡು ವರ್ಷಗಳ ಹಿಂದೆ ಶಿಡ್ಲಘಟ್ಟ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನದಲ್ಲಿ ಭಾಗಿಯಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಆರೋಪಿ, ಜಾಮೀನಿನ ಮೇಲೆ ಹೊರಬಂದ ಬಳಿಕ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಸೂಪರ್ ವೈಸರ್ ಕೆಲಸ ಮಾಡಿಕೊಂಡಿದ್ದ. ಕೆಲಸ ನಿರ್ವಹಿಸುತ್ತಲೇ ಹಗಲಿನಲ್ಲಿ ಬೇರೆ ಬೇರೆ ಏರಿಯಾಗಳಲ್ಲಿ ಸುತ್ತಾಡಿ ಮನೆ, ಪಿ.ಜಿ.ಗಳ ಮುಂದೆ ನಿಲ್ಲಿಸಿರುವ ದ್ವಿಚಕ್ರ ವಾಹನಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದನು.
ಬಳಿಕ ಪೆಟ್ರೋಲ್ ಖಾಲಿಯಾಗುವವರೆಗೂ ಜಾಲಿ ರೈಡ್ ಮಾಡಿ ಬಳಿಕ ತನ್ನ ಮನೆಯ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ತಂದು ನಿಲ್ಲಿಸುತ್ತಿದ್ದನು. ಸದ್ಯ ಈ ಶೋಕಿಲಾಲನನ್ನು ಬಂಧಿಸಿರುವ ರಾಜಾಜಿನಗರ ಠಾಣಾ ಪೊಲೀಸರು ವಿದ್ಯಾರಣ್ಯಪುರ, ರಾಜಾಜಿನಗರ, ಕೊಡಿಗೆಹಳ್ಳಿ ಸೇರಿದಂತೆ ಹಲವು ಠಾಣಾ ವ್ಯಾಪ್ತಿಗಳಲ್ಲಿ ಕಳವು ಮಾಡಿದ್ದ 11.6 ಲಕ್ಷ ರೂ. ಮೌಲ್ಯದ 8 ವಿವಿಧ ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಸಿನಿಮಾದಿಂದ ಸ್ಫೂರ್ತಿ ಪಡೆದು ಮಗಳಿಗೋಸ್ಕರ 107 ದ್ವಿಚಕ್ರ ವಾಹನ ಕದ್ದ ಅಪ್ಪ!