ETV Bharat / city

ಪುಟ್ಟೇನಹಳ್ಳಿ ಪೇದೆ ಮೇಲೆ ಹಲ್ಲೆ ನಡೆಸಿ, ಧಮ್ಕಿ ಹಾಕಿದ ಪುಡಿ ರೌಡಿ - ಬೆಂಗಳೂರು ಸುದ್ದಿ

ಪುಡಿ ರೌಡಿವೋರ್ವ ಪೊಲೀಸ್ ಪೇದೆಯೊಬ್ಬರಿಗೆ ಕಪಾಳಮೋಕ್ಷ ಮಾಡಿದ್ದಲ್ಲದೇ, ಈ ಬಗ್ಗೆ ಪೊಲೀಸ್ ಕಂಪ್ಲೇಂಟ್ ಕೊಟ್ಟರೆ ಕೊಲ್ಲುವುದಾಗಿ ಧಮ್ಕಿ ಹಾಕಿರುವ ಪ್ರಕರಣ ಬೆಂಗಳೂರಲ್ಲಿ ನಡೆದಿದೆ.

ಪುಟ್ಟೇನಹಳ್ಳಿ ಠಾಣೆಯ ಪೊಲೀಸ್ ಕಾನ್ ಸ್ಟೇಬಲ್ ಭರಮಗೌಡ ಸಿದ್ದೇಶ್
author img

By

Published : Oct 25, 2019, 12:03 PM IST

ಬೆಂಗಳೂರು: ಪುಡಿ ರೌಡಿಯೊಬ್ಬ ಪೊಲೀಸ್ ಪೇದೆಗೆ ಕಪಾಳಮೋಕ್ಷ ಮಾಡಿದ್ದಾನೆ. ಅಲ್ಲದೆ ಈ ಬಗ್ಗೆ ಪೊಲೀಸ್ ಕಂಪ್ಲೇಂಟ್ ಕೊಟ್ಟರೆ ಕೊಲೆ ಮಾಡುವುದಾಗಿ ಧಮ್ಕಿ ಹಾಕಿರುವ ಪ್ರಕರಣ ಪುಟ್ಟೇನಹಳ್ಳಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಪುಟ್ಟೇನಹಳ್ಳಿ ಕಾನ್​ಸ್ಟೇಬಲ್ ಮೇಲೆ ಹಲ್ಲೆ ನಡೆಸಿ, ಧಮ್ಕಿ ಹಾಕಿದ ಪುಡಿ ರೌಡಿ

ಪುಟ್ಟೇನಹಳ್ಳಿ ಠಾಣೆಯ ಪೊಲೀಸ್ ಕಾನ್​ಸ್ಟೇಬಲ್ ಭರಮಗೌಡ ಸಿದ್ದೇಶ್ ಹಲ್ಲೆಗೆ ಒಳಗಾದವರು. ಭರಮಗೌಡ ಸಿದ್ದೇಶ್ ಅವರು ಕರ್ತವ್ಯದಲ್ಲಿರದ ವೇಳೆ ಸಾರಕ್ಕಿ ಗಾರ್ಡನ್ ಸಮೀಪದ ತ್ರಿಶೂಲ್ ಸ್ಕೂಲ್ ಬಳಿ ಇರುವ ತಮ್ಮ ಸಂಬಂಧಿಕರೊಬ್ಬರ ಅಂಗಡಿ ಮುಂದೆ ನಿಂತು ರಸ್ತೆಗೆ ಉಗುಳಿದ್ದರಂತೆ. ಅದು ಅಲ್ಲಿಯೇ ಬರ್ತಿದ್ದ ಪುಡಿ ರೌಡಿ ರಿಷಿ ಎಂಬುವನಿಗೆ ಅಚಾನಕ್ಕಾಗಿ ಸಿಡಿದಿತ್ತು. ಇಷ್ಟಕ್ಕೆ ಕಿಡಿಕಾರಿದ ರಿಷಿ, ಏಕಾಏಕಿ ಪೇದೆ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಪೇದೆ ಭರಮಗೌಡ, ನಾನು ಪೊಲೀಸ್ ನನ್ನ ಮೇಲೆ ಹೀಗೆ ಪೌರುಷ ತೋರಿಸ್ತಿಯಾ, ಸ್ಥಳೀಯರ ಕಥೆ ಏನು? ಎಂದು ಪ್ರಶ್ನಿಸಿದ್ದಾರೆ. ಆಗ ರೊಚ್ಚಿಗೆದ್ದ ರೌಡಿ ರಿಷಿ, ಪೇದೆ ಮೇಲೆ ಮತ್ತೆ ಹಲ್ಲೆ ನಡೆಸಿ ಪರಾರಿ ಆಗಿದ್ದಾನೆ.

ಘಟನೆ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ವಿಚಾರಣೆ ವೇಳೆ ಪೇದೆ ಭರಮಗೌಡನ ಮೇಲೆ ಹಲ್ಲೆ ನಡೆಸಿರುವ ರಿಷಿ, ಕಾರ್ಪೊರೇಟರೊಬ್ಬರ ಸಂಬಂಧಿ ಎಂಬುವುದು ಗೊತ್ತಾಗಿದೆ. ಸದ್ಯ, ತಲೆಮರೆಸಿಕೊಂಡಿರುವ ರಿಷಿ ಪತ್ತೆಗೆ ಕಾರ್ಯಾಚರಣೆ ನಡೆದಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್​ ತಿಳಿಸಿದ್ದಾರೆ.

Intro:Body:ಕಾನ್ ಸ್ಟೇಬಲ್ ಕಪಾಳಮೋಕ್ಷ ಮಾಡಿ ಪೊಲೀಸ್ ಕಂಪ್ಲೇಟ್ ಕೊಟ್ಟರೆ ಬಕೊಂದು ಬಿಡ್ತೀನಿ ಎಂದು ಆವಾಜ್ ಹಾಕಿದ ಸ್ಟ್ರೀಟ್ ರೌಡಿ

ಬೆಂಗಳೂರು: ಇದು ಖಾಕಿದಾರಿ ಹಾಗೂ ಪುಡಿ ರೌಡಿ ನಡುವಿನ ಕಿತ್ತಾಟದ ಕಥೆ‌.. ಪೊಲೀಸರೆಂದರೆ ರೌಡಿಗಳು ಬೆಚ್ಚಿಬೀಳುತ್ತಾರೆ. ಅಂತಹದರಲ್ಕಿ ಇಲ್ಲೊಬ್ಬ ಪುಡಿ ರೌಡಿ ಪೊಲೀಸ್ ಪೇದೆಯೊಬ್ಬನಿಗೆ ಕಪಾಳಮೋಕ್ಷ ಮಾಡಿದ್ದಲ್ಲದೇ ಪೊಲೀಸ್ ಕಂಪ್ಲೇಂಟ್ ಕೊಟ್ಟರೆ ಕೊಂದು ಬಿಡುತ್ತೇನೆ ಅಂತ ಧಮಕಿ‌ ಹಾಕಿದ್ದಾನೆ..
ಪುಟ್ಟೇನಹಳ್ಳಿ ಠಾಣೆಯ ಪೊಲೀಸ್ ಕಾನ್ ಸ್ಟೇಬಲ್
ಭರಮಗೌಡ ಸಿದ್ದೇಶ್ ಹಲ್ಲೆಗೆ ಒಳಗಾದವರು. ಇತ್ತೀಚೆಗೆ ಕರ್ತವ್ಯದಲ್ಲಿರದಿದ್ದಾಗ ಸಾರಕ್ಕಿ ಗಾರ್ಡನ್ ಸಮೀಪದ ತ್ರಿಶೂಲ್ ಸ್ಕೂಲ್ ಬಳಿ ಇರುವ ತಮ್ಮ ಸಂಬಂಧಿಕರೊಬ್ಬರ ಅಂಗಡಿ ಮುಂದೆ ನಿಂತಿದ್ದ ಪೇದೆ ಭರಮೆಗೌಡ ರಸ್ತೆಯಲ್ಲಿ ಉಗುಳಿದ್ದನಂತೆ.. ಅದು ಅಲ್ಲಿಯೇ ಬರ್ತಿದ್ದ ಪುಡಿ ರೌಡಿ ರಿಷಿ ಎಂಬುವನಿಗೆ ಅಚಾನಕ್ಕಾಗಿ ತಾಕಿತ್ತು. ಇಷ್ಟಕ್ಕೆ ಕೆಂಡಕಾರಿದ ರಿಷಿ ಏಕಾಏಕಿ ಪೇದೆ ಭರಮೇಗೌಡ ಮೇಲೆ ಹಲ್ಲೆ ನಡೆಸಿದ್ದಾನೆ..ಈ ವೇಳೆ ಪೇದೆ ಭರಮೆಗೌಡ, ನಾನು ಪೊಲೀಸ್ ನನ್ನ ಮೇಲೆ ಹೀಗೆ ಪೌರುಷ ತೋರಿಸ್ತಿಯಾ..ಸ್ಥಳೀಯರ ಕಥೆ ಏನು. ಎಂದು ಹೇಳಿದ್ದಾರೆ. ಆಗ ರೊಚ್ಚಿಗೆದ್ದ ರೌಡಿ ಋಷಿ, ಪೇದೆ ಮೇಲೆ ಮತ್ತೆ ಹಲ್ಲೆ ನಡೆಸಿ, ಎಸ್ಕೇಪ್ ಆಗಿದ್ದಾನೆ.
ಘಟನೆ ಸಂಬಂಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ವಿಚಾರಣೆ ವೇಳೆ ಪೇದೆ ಭರಮಗೌಡನ ಮೇಲೆ ಹಲ್ಲೆ ನಡೆಸಿರುವ ರಿಷಿ, ಕಾರ್ಪೋರೇಟರೊಬ್ಬರ ಸಂಬಂಧಿ ಎಂಬುವುದು ಗೊತ್ತಾಗಿದೆ..ಸದ್ಯ ತಲೆಮರೆಸಿಕೊಂಡಿರುವ ರಿಷಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.