ಬೆಂಗಳೂರು : ರಾಜ್ಯದಲ್ಲಿ ಇಂದು ದಾಖಲೆ ಮೀರಿ 9894 ಮಂದಿಗೆ ಕೊರೊನಾ ಸೋಂಕು ತಗುಲಿದೆ.
ಸೆಪ್ಟೆಂಬರ್ 2 ರಂದು 9860 ಅತೀ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿತ್ತು. ಇಂದು ತನ್ನದೆ ದಾಖಲೆ ಮುರಿದು ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 4,59,445ಕ್ಕೆ ಏರಿಕೆ ಆಗಿದೆ. ಇತ್ತ 8,402 ಮಂದಿ ಗುಣಮುಖರಾಗಿದ್ದು, ಒಟ್ಟು 3,52,958 ಡಿಸ್ಜಾರ್ಜ್ ಆದಂತಾಗಿದೆ.
ಇಂದು 104 ಮಂದಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದು, ಸಾವಿನ ಸಂಖ್ಯೆ 7265ಕ್ಕೆ ಏರಿದೆ. ಕಳೆದ 24 ಗಂಟೆಯಲ್ಲಿ 67,955 ಕೊರೊನಾ ಪರೀಕ್ಷೆ ಮಾಡಿಸಿದ್ದು, ರಾಜ್ಯದಲ್ಲಿ 99,203 ಸಕ್ರಿಯ ಪ್ರಕರಣಗಳಿವೆ. ಬರೋಬ್ಬರಿ 807 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5,13,883 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಹಾವಳಿ ನಿಂತಿಲ್ಲ : ಇಂದು 3479 ಜನರಿಗೆ ಸೋಂಕು ತಗುಲಿದೆ. 1,70,662ಕ್ಕೆ ಸೋಂಕಿತರ ಸಂಖ್ಯೆ ಏರಿದೆ. 3,270 ಜನ ಬಿಡುಗಡೆಯಾಗಿದ್ದು 1,27,132 ಡಿಸ್ಜಾರ್ಜ್ ಆಗಿದ್ದಾರೆ. ಸದ್ಯ 41,093 ಸಕ್ರಿಯ ಪ್ರಕರಣಗಳಿವೆ. ಇಂದು 45 ಮಂದಿ ಸೋಂಕಿತರು ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 2436 ಏರಿಕೆ ಆಗಿದೆ.
ಕೊರೊನಾ@9000+
27-8-2020- 9386
01-9-2020- 9058
02-9-2020- 9860
04-9-2020- 9280
05-9-2020- 9746
06-9-2020- 9319
09-9-2020- 9540
10-9-2020- 9217
11-9-2020- 9464
12-9-2020- 9140
13-9-2020- 9894