ETV Bharat / city

ರಾಜ್ಯದಲ್ಲಿಂದು 815 ಕೊರೊನಾ ಕೇಸ್​ ಪತ್ತೆ: 8 ಮಂದಿ ಬಲಿ - ಕೊರೊನಾ ವೈರಸ್

ಇಂದು 815 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,23,353ಕ್ಕೆ ಏರಿಕೆಯಾಗಿದೆ.

corona
ಕೊರೊನಾ
author img

By

Published : Jan 5, 2021, 10:56 PM IST

ಬೆಂಗಳೂರು: ರಾಜ್ಯದಲ್ಲಿಂದು 815 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,23,353ಕ್ಕೆ ಏರಿಕೆಯಾಗಿದೆ. 8 ಮಂದಿ ಸೋಂಕಿತರು ಮೃತಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸಾವಿನ ಸಂಖ್ಯೆ 12,118ಕ್ಕೆ ತಲುಪಿದೆ.

ಇದನ್ನೂ ಓದಿ...ಕೊರೊನಾ ಲಸಿಕೆ ವಿತರಣೆಗೆ ರಾಜ್ಯ ಸಂಪೂರ್ಣ ಸಿದ್ಧ: ಸಚಿವ ಸುಧಾಕರ್

19 ಸೋಂಕಿತರು ಅನ್ಯ ಕಾರಣಕ್ಕೆ ಮೃತರಾಗಿದ್ದಾರೆ. 1,377 ಸೋಂಕಿತರು ಇಂದು ಗುಣಮುಖರಾಗಿದ್ದು, ಈವರೆಗೂ 9,01,579 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ 194 ಜನರು ಚಿಕಿತ್ಸೆ ಪಡೆಯುತ್ತಿದ್ದು, 9,637 ಸಕ್ರಿಯ ಪ್ರಕರಣಗಳು ಬಾಕಿ ಇವೆ.

ಕಳೆದ 7 ದಿನಗಳಲ್ಲಿ 23,202 ಮಂದಿ ಹೋಂ ಕ್ವಾರಂಟೈನ್​​ಗೆ ಒಳಗಾಗಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 60,793 ಮಂದಿ ಇದ್ದರೆ, ದ್ವಿತೀಯ ಸಂಪರ್ಕದಲ್ಲಿ 69,759 ಜನರಿದ್ದಾರೆ.‌ ಇನ್ನು ಯುಕೆಯಿಂದ ಬಂದವರಲ್ಲಿ 10 ಜನಕ್ಕೆ ಕೋವಿಡ್​​ ದೃಢಪಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.