ETV Bharat / city

ನೌಕರರ ಸಂಘದ ಉಪಾಧ್ಯಕ್ಷನ ಸೋಗಿನಲ್ಲಿ ಅಸಿಸ್ಟೆಂಟ್​ ರಿಜಿಸ್ಟ್ರಾರ್​​​​​ಗೆ 70 ಲಕ್ಷ ದೋಖಾ! - 70 lakh fraud for rajiv gandhi vivis autistent register

ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಂದು ಬಿಂಬಿಸಿ ರಾಜೀವ್ ಗಾಂಧಿ ಆರೋಗ್ಯ ವಿವಿಯ ಅಸಿಸ್ಟೆಂಟ್​ ರಿಜಿಸ್ಟ್ರಾರ್​​ರಿಂದ 70 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿ ಹಾಗೂ ಆತನ ಪತ್ನಿ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

70-lakh-fraud-for-rajiv-gandhi-vivis-autistent-register
ನೌಕರರ ಸಂಘದ ಉಪಾಧ್ಯಕ್ಷನ ಸೋಗಿನಲ್ಲಿ ಅಸ್ಟಿಡೆಂಟ್ ರಿಜಿಸ್ಟರ್​​ಗೆ 70 ಲಕ್ಷ ದೋಖಾ!
author img

By

Published : Feb 4, 2021, 2:00 PM IST

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಎಂದು ಬಿಂಬಿಸಿಕೊಂಡು ಪರಿಚಯವಿರುವ ಸಚಿವರಿಂದ ಕೆಲಸ‌ ಮಾಡಿಸಿಕೊಡುವುದಾಗಿ ನಂಬಿಸಿ, ರಾಜೀವ್ ಗಾಂಧಿ ಆರೋಗ್ಯ ವಿವಿಯ ಅಸಿಸ್ಟೆಂಟ್​​​ ರಿಜಿಸ್ಟ್ರಾರ್​ನಿಂದ 70 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ವಂಚನೆಗೊಳಗಾದ ಅಸಿಸ್ಟೆಂಟ್​ ಮ್ಯಾನೇಜರ್ ಡಾ.ಪ್ರಭಾ ಎಂಬುವವರು ನೀಡಿದ ದೂರಿನ ಮೇರೆಗೆ ಆರೋಪಿ ಮಂಜುನಾಥ್, ಆತನ ಪತ್ನಿ ಲಕ್ಷ್ಮೀಪ್ರಿಯಾ ವಿರುದ್ಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೆಬ್ಬಾಳದಲ್ಲಿರುವ ಪಶುಪಾಲನಾ ಇಲಾಖೆಯಲ್ಲಿ ಎಫ್​ಡಿಎ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಜುನಾಥ್, ಪ್ರಭಾ ಅವರಿಗೆ ದೂರದ ಸಂಬಂಧಿ. ಪ್ರಭಾ ಅವರು ಕೋಲಾರದಲ್ಲಿರುವ‌ ತಂದೆ ಮನೆಗೆ ಹೋಗಿದ್ದಾಗ ಮಂಜುನಾಥ್ ಭೇಟಿಯಾಗಿದ್ದಾನೆ. ಈ ವೇಳೆ, ನಾನು ರಾಜ್ಯ ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷನಾಗಿದ್ದೇನೆ. ನನಗೆ ಎಲ್ಲಾ ಸಚಿವರ ಪರಿಚಯವಿದೆ. ನಿಮ್ಮ ಕೆಲಸಗಳೇನಾದರೂ ಇದ್ದರೆ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದ.

ಓದಿ: ವಿರೋಧದ ನಡುವೆಯೂ ಪ್ರೇಮ ವಿವಾಹ: ರೊಚ್ಚಿಗೆದ್ದ ಪೋಷಕರಿಂದ 250 ಅಡಿಕೆ ಮರಗಳಿಗೆ ಕೊಡಲಿ ಪೆಟ್ಟು

2019ರಲ್ಲಿ ಪ್ರಭಾ ಅವರನ್ನು ಹೆಬ್ಬಾಳ ಖಾಸಗಿ ಹೋಟೆಲ್​​​​​ಗೆ ಕರೆಯಿಸಿಕೊಂಡು ಸರ್ಕಾರಿ ನೌಕರ ಉಪಾಧ್ಯಕ್ಷ ಚುನಾವಣೆ ನಡೆಯುತ್ತಿದ್ದು, ಒಂದು‌ ಲಕ್ಷ ಹಣ ನೀಡುವಂತೆ ಮನವಿ ಮಾಡಿಕೊಂಡಿದ್ದ‌.‌‌ ಅದರಂತೆ‌ ಪ್ರಭಾ ಹಣ‌ ನೀಡಿದ್ದರು. ಕೆಲ ದಿನಗಳ ಬಳಿಕ ಆರೋಪಿನ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ. ಹಣ ಇಲ್ಲ ಹೇಳಿದಕ್ಕೆ ಬಜಾಜ್ ಫೈನಾನ್ಸ್​ನಿಂದ‌ ಲೋನ್ ಮಾಡಿಸಿಕೊಟ್ಟು ಹಣ ಪಡೆದಿದ್ದ. ಹೀಗೆ, ಹಂತ-ಹಂತವಾಗಿ 70.35 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿ ನೀಡಿರುವ ದೂರಿನ ಮೇರೆಗೆ ಹೆಬ್ಬಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.