ಬೆಂಗಳೂರು : ಅಕ್ಕಪಕ್ಕದ ಮನೆಗಳಲ್ಲಿದ್ದ ಮಹಿಳೆಯರು, ಯುವತಿಯರಿಗೆ ತಿಳಿಯದಂತೆ ಫೋಟೋ/ವಿಡಿಯೋಗಳನ್ನ ಚಿತ್ರೀಕರಿಸುತ್ತಿದ್ದ 60 ವರ್ಷದ ವೃದ್ಧನನ್ನ ಪೀಣ್ಯ ಪೊಲೀಸರು ಬಂಧಿಸಿದ್ದಾರೆ.
ನಾರಾಯಣಗೌಡ ಬಂಧಿತ ಆರೋಪಿ. ಈತ ಪೀಣ್ಯದಲ್ಲಿ ಪತ್ನಿಯೊಂದಿಗೆ ವಾಸವಿದ್ದು, ಬಟ್ಟೆ ಒಗೆಯುವಾಗ, ಪಾತ್ರೆ ತೊಳೆಯುವಾಗ ಅಕ್ಕಪಕ್ಕದ ಹೆಂಗಸರ ಫೋಟೋ, ವಿಡಿಯೋಗಳನ್ನ ಗೊತ್ತಾಗದಂತೆ ಚಿತ್ರೀಕರಿಸುತ್ತಿದ್ದ. ಇತ್ತೀಚಿಗೆ ಇದೇ ರೀತಿ ಕೃತ್ಯದಲ್ಲಿ ತೊಡಗಿದ್ದಾಗ ಪಕ್ಕದ ಮನೆಯ ಮಹಿಳೆಯೊಬ್ಬರು ಇದನ್ನು ಗಮನಿಸಿ, ಪ್ರಶ್ನಿಸಿದಾಗ ಮೊಬೈಲ್ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದ.
ಇದನ್ನೂ ಓದಿ: ರಷ್ಯಾ ಮೇಲೆ ಉಕ್ರೇನ್ ಪ್ರತಿದಾಳಿ ನಡೆಸದಂತೆ ಪುಟಿನ್ ಸೇನೆ ಮಾಸ್ಟರ್ ಪ್ಲಾನ್...!
ಆರೋಪಿಯ ಮೊಬೈಲ್ ಪರಿಶೀಲಿಸಿದಾಗ ಅಕ್ಕಪಕ್ಕದ ಬಹುತೇಕ ಹೆಂಗಸರು, ಯುವತಿಯರ ನೂರಕ್ಕೂ ಅಧಿಕ ಫೋಟೋ, ವಿಡಿಯೋಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.