ಬೆಂಗಳೂರು : ರಾಜ್ಯದಲ್ಲಿಂದು 10,423 ಮಂದಿಗೆ ಕೊರೊನಾ ಪರೀಕ್ಷೆ ನಡೆಸಿದ್ದು, 55 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 39,46,176ಕ್ಕೆ ಏರಿಕೆ ಆಗಿದೆ. ಕೊರೊನಾ ಕಾರಣ ಯಾರೂ ಕೂಡ ಮೃತಪಟ್ಟಿಲ್ಲ. ಕೊರೊನಾ ಪಾಸಿಟಿವ್ ದರ ಶೇ.0.52 ರಷ್ಟಿದೆ. ಇಂದು 62 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ 39,04,639 ಮಂದಿ ಚೇತರಿಸಿಕೊಂಡಿದ್ದಾರೆ. ಸಕ್ರಿಯ ಪ್ರಕರಣಗಳು 1,438 ರಷ್ಟಿದೆ. ಈವರೆಗೆ ಮೃತಪಟ್ಟವರ ಸಂಖ್ಯೆ 40,057.
ಇದನ್ನೂ ಓದಿ: ಈಶ್ವರಪ್ಪ ರಾಕ್ಷಸ ಪ್ರವೃತ್ತಿ ಮನುಷ್ಯ.. 40% ಕಮೀಷನ್ ಪಡೆಯೋ ಬಿಜೆಪಿಯವ್ರು ರಾಕ್ಷಸ್ರೋ, ಮನುಷ್ಯರೋ.. ಸಿದ್ದರಾಮಯ್ಯ
ವಿಮಾನ ನಿಲ್ದಾಣದಿಂದ 1,890 ಪ್ರಯಾಣಿಕರು ತಪಾಸಣೆಗೊಳ್ಳಪಟ್ಟು ಬಂದಿದ್ದಾರೆ. ಇನ್ನು ಬೆಂಗಳೂರಿನಲ್ಲಿ 46 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಸಂಖ್ಯೆ 17,82,229ಕ್ಕೆ ಏರಿಕೆ ಆಗಿದೆ. 56 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. ಸಾವಿನ ಸಂಖ್ಯೆ 16,962ರಷ್ಟಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,355ರಷ್ಟಿದೆ.
ಈವರೆಗಿನ ರೂಪಾಂತರಿ ವೈರಸ್ ಅಪಡೇಟ್ಸ್ :
- ಅಲ್ಫಾ- 156.
- ಬೇಟಾ-08.
- ಡೆಲ್ಟಾ ಸಬ್ ಲೈನ್ ಏಜ್- 4620.
- ಒಮಿಕ್ರಾನ್- 3775.
- BAI.1.529- 947.
- BA1- 99.
- BA2- 2729.
- ಇತರೆ- 311.