ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಅಭ್ಯರ್ಥಿಯೊಬ್ಬರು ಮತದಾರರ ಓಲೈಕೆಗೆ ಮುಂದಾಗಿದ್ದು, ಮತದಾರರಿಗೆ ವಿತರಿಸಲೆಂದು ತಂದಿದ್ದ 53 ಕುಕ್ಕರ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊಸಕೋಟೆ ಕ್ಷೇತ್ರದ ಅಭ್ಯರ್ಥಿಯೊಬ್ಬರ ಪರವಾಗಿ ನಂದಗುಡಿ ಹೋಬಳಿ ಇಟ್ಟಸಂದ್ರ ಗ್ರಾಮ ಪಂಚಾಯಿತಿಯ ತೀರ್ಥಹಳ್ಳಿ ಗ್ರಾಮದಲ್ಲಿ ಮತದಾರರಿಗೆ ಮನೆ ಮನೆಗೆ ಹೋಗಿ ಕುಕ್ಕರ್ ವಿತರಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ಫ್ಲೈಯಿಂಗ್ ಸ್ಕ್ವಾಡ್ ಶ್ರೀನಿವಾಸಯ್ಯ ಮತ್ತು ನಂದಗುಡಿ ಪಿಎಸ್ಐ ಲಕ್ಷ್ಮಿನಾರಾಯಣ್ ಅವರ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ.
ಗ್ರಾಮದ ಅಲೀಂ ಪಾಷಾ ಎಂಬುವರ ಮನೆಯಲ್ಲಿದ್ದ 53 ಕುಕ್ಕರ್ಗಳನ್ನು ವಶಪಡಿಸಿಕೊಂಡ ಪೊಲೀಸರು, ನಂದಗುಡಿ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.