ಬೆಂಗಳೂರು: ಯುಕೆಯಿಂದ ಬೆಂಗಳೂರಿಗೆ ಬಂದ 28 ಹಾಗೂ ಅವರ ಸಂಪರ್ಕದಲ್ಲಿದ್ದ 16 ಮಂದಿ ಸೇರಿ ಒಟ್ಟು 44 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 160 ಮಂದಿ ನಾಪತ್ತೆಯಾಗಿದ್ದಾರೆ.
ಈವೆರಗೂ ನಗರಕ್ಕೆ ಒಟ್ಟು 4,844 ಪ್ರಯಾಣಿಕರು ಬ್ರಿಟನ್‌ನಿಂದ ಬಂದಿದ್ದು, ಅವರಲ್ಲಿ 2,062 ಮಂದಿ ಬೆಂಗಳೂರಿಗೆ ಸೇರಿದವರಾಗಿದ್ದಾರೆ. ಅದರಲ್ಲಿ 1897 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆರು ಮಂದಿಯನ್ನು ಸೋಂಕು ಪರೀಕ್ಷೆಗೆ ಒಳಪಡಿಸಬೇಕಿದೆ.
ಬ್ರಿಟನ್‌ನಿಂದ ಬಂದು ಸೋಂಕು ದೃಢಪಟ್ಟವರ ಪ್ರಾಥಮಿಕ ಸಂಪರ್ಕದಲ್ಲಿ 90 ಮಂದಿ ಹಾಗೂ 110 ಮಂದಿ ದ್ವಿತೀಯ ಸಂಪರ್ಕಿತರಿದ್ದಾರೆ ಎಂದು ಪಾಲಿಕೆ ಆರೋಗ್ಯಾಧಿಕಾರಿ ತಿಳಿಸಿದ್ದಾರೆ. ನಾಪತ್ತೆಯಾಗಿರುವ 160 ಮಂದಿಯನ್ನು ಹುಡುಕಿಕೊಡುವಂತೆ ಪಾಲಿಕೆಯು ಪೊಲೀಸ್ ಇಲಾಖೆ ಮೊರೆ ಹೋಗಿದೆ.