ETV Bharat / city

ಕೆಲಸ ನೀಡಿದ ಕಂಪನಿ ಒಡತಿಗೆ ಮದ್ಯ ಕುಡಿಸಿ ಯುವಕನಿಂದ ಅತ್ಯಾಚಾರ - ಲೈಂಗಿಕ ಕಿರುಕುಳ

ತನಗೆ ಕಂಪನಿಯೊಂದರಲ್ಲಿ ಕೆಲಸ ನೀಡಿದ್ದ ಒಡತಿಗೆ ಒತ್ತಾಯ ಪೂರ್ವಕವಾಗಿ ಮದ್ಯ ಕುಡಿಸಿ, ಅತ್ಯಾಚಾರ ಎಸಗಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

sexual harassment
ಲೈಂಗಿಕ ಕಿರುಕುಳ
author img

By

Published : May 5, 2020, 8:03 PM IST

Updated : May 5, 2020, 8:20 PM IST

ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಕಂಪನಿಯೊಂದರ 42 ವರ್ಷದ ಒಡತಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ, ಅತ್ಯಾಚಾರ ಎಸಗಿ 22 ವರ್ಷದ ಪುಂಡನೊಬ್ಬ ಜೈಲು ಪಾಲಾಗಿದ್ದಾನೆ.

ರಾಜರಾಜೇಶ್ವರಿ ನಗರದ 22 ವರ್ಷ ವಯಸ್ಸಿನ ರಾಕೇಶ್ ಬಂಧಿತ ಆರೋಪಿಯಾಗಿದ್ದಾನೆ. ಸಂತ್ರಸ್ತ ಮಹಿಳೆ ಜೆ.ಪಿ.ನಗರದ 6ನೇ ಹಂತದಲ್ಲಿ ಮಾನವ ಸಂಪನ್ಮೂಲ ಕಂಪನಿಯೊಂದನ್ನು‌ ನಡೆಸುತ್ತಿದ್ದರು. 2016ರಲ್ಲಿ ಮಹಿಳೆ ಪತಿಯಿಂದ ವಿಚ್ಛೇದನ ಪಡೆದು ಪ್ರತ್ಯೇಕವಾಗಿದ್ದರು. ಸಂಬಂಧಿಯೊಬ್ಬರ ಮೂಲಕ ರಾಕೇಶ್​ನ ತಂದೆ ಮಹಿಳೆಗೆ ಪರಿಚಯವಾಗಿದ್ದರು. ಈ ವೇಳೆ, ರಾಕೇಶ್ ತಂದೆ ''ನನ್ನ ಪುತ್ರ ಬಿ.ಕಾಂ ಅನುತ್ತೀರ್ಣನಾಗಿದ್ದು, ಕೆಲಸ ಇಲ್ಲದೇ ಮನೆಯಲ್ಲಿಯೇ ಇದ್ದಾನೆ. ಆತನಿಗೆ ತಮ್ಮ ಕಚೇರಿಯಲ್ಲಿ ಕೆಲಸ ಕೊಡುವಂತೆ ಕೇಳಿದ್ದರು.

ಅದರಂತೆ ರಾಕೇಶ್‌ಗೆ ಕಂಪನಿಯಲ್ಲಿ ಸಂತ್ರಸ್ತೆ 2017ರಲ್ಲಿ ಕಚೇರಿ ಸಹಾಯಕನಾಗಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಬಳಿಕ ರಾಕೇಶ್ ಕಚೇರಿಯ ಉಸ್ತುವಾರಿ ನೋಡಿಕೊಳ್ಳಲಾರಂಭಿಸಿದ್ದು, ಮಹಿಳೆ ಜೊತೆ ಸಲುಗೆ ಬೆಳೆಸಿಕೊಂಡಿದ್ದನು. ''ನೀವು ವಿಚ್ಛೇದನ ಪಡೆದಿದ್ದು, ನನ್ನನ್ನು ವಿವಾಹ ಮಾಡಿಕೊಳ್ಳಿ ಎಂದು ಪುಸಲಾಯಿಸಿ ಹಣ ಪಡೆದುಕೊಳ್ಳುತ್ತಿದ್ದು ಮಾತ್ರವಲ್ಲದೇ ದೈಹಿಕ ಸಂಪರ್ಕಕ್ಕೆ ಒತ್ತಾಯ ಮಾಡುತ್ತಿದ್ದನು. ಜೊತೆಗೆ ಏಪ್ರಿಲ್ 22ರಂದು ಭೇಟಿಯಾಗುವಂತೆ ಒತ್ತಾಯ ಮಾಡಿದ್ದನು'' ಎಂದು ಮಹಿಳೆ ತಿಳಿಸಿದ್ದಾರೆ.

'''ಹೀಗಾಗಿ ನಾನು ಆರ್.ಆರ್.ನಗರದ ಇಂದ್ರಪ್ರಸ್ಥ ಹೋಟೆಲ್ ಹತ್ತಿರ ಬಂದಾಗ ರಾಕೇಶ್ ಬಂದಿದ್ದು, ನನ್ನ ಕಾರಿನಲ್ಲಿ ಕುಳಿತುಕೊಂಡು ಕಾರಿನಲ್ಲಿ ಮದ್ಯಪಾನ ಮಾಡುತ್ತಾ ನಾನೂ ಕೂಡಾ ಕಚೇರಿಗೆ ಬರುತ್ತೇನೆ ಎಂದು ಜೆ.ಪಿ.ನಗರದ ಕಚೇರಿಗೆ ಬಂದ. ಕಚೇರಿಗೆ ಒಳಗಡೆ ಪ್ರವೇಶಿಸುತ್ತಿದ್ದಂತೆ ರಾಕೇಶ್ ಬಾಗಿಲು ಮುಚ್ಚಿ ನನಗೆ ರಾತ್ರಿ 11 ಗಂಟೆ ಸುಮಾರಿಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ ಅತ್ಯಾಚಾರ ನಡೆಸಿದ. ಬೆಳಗ್ಗೆ ಎದ್ದು, ಇಬ್ಬರು ಮನೆಗೆ ತೆರಳಿದ್ದೆವು.‌ ಆದರೆ, ಆರೋಪಿ ನನ್ನ ನಗ್ನ ಫೋಟೋವನ್ನು ವಾಟ್ಸ್ಆ್ಯಪ್​​ ಮಾಡಿದ್ದ. ಈ ಬಗ್ಗೆ ಕೇಳಿದಾಗ ಸಾಯಲು ಸಿದ್ಧ ಇದ್ದರೆ, ಪೊಲೀಸರ ಬಳಿ ಹೋಗು ಎಂದು ಬೆದರಿಕೆ ಹಾಕಿದ'' ಎಂದು ಮಹಿಳೆ ದೂರಿನಲ್ಲಿ ವಿವರಿಸಿದ್ದಾರೆ. ಮಹಿಳೆ ಕೊಟ್ಟ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿದ ಪೊಲೀಸರು ‌ತನಿಖೆ ಮುಂದುವರೆಸಿದ್ದಾರೆ.

Last Updated : May 5, 2020, 8:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.