ETV Bharat / city

₹150 ಬಿದಿದ್ದೆ ಎಂದು ಹೇಳಿ 3 ಲಕ್ಷ ರೂ. ಎಗರಿಸಿದ ಖದೀಮರು!: ಸಿಸಿಟಿವಿಯಲ್ಲಿ ಕೃತ್ಯ ಸೆರೆ

author img

By

Published : Nov 27, 2020, 2:02 PM IST

₹150 ರೂಪಾಯಿ ಕೆಳಗೆ ಬಿದ್ದಿದೆ ಎಂದು ಹೇಳಿ ಬೈಕ್​ ಮೇಲಿದ್ದ 3 ಲಕ್ಷ ರೂ. ಇರುವ ಬ್ಯಾಗ್​​​​ ಎತ್ತಿಕೊಂಡು ಕಳ್ಳರು ಪರಾರಿಯಾಗಿದ್ದಾರೆ.

3 lakhs theft in bangalore city
ಸಿಸಿಟಿವಿಯಲ್ಲಿ ಕೃತ್ಯ ಸೆರೆ

ಬೆಂಗಳೂರು: ಗಮನ ಬೇರೆಡೆ ಸೆಳೆದು ₹3 ಲಕ್ಷ ರೂ. ದೋಚಿರುವ ಘಟನೆ ಬೆಳಕಿಗೆ ಬಂದಿದ್ದು, ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ‌‌. ಮಹಾಲಕ್ಷ್ಮಿ ಲೇಔಟ್ ಪೊಲೀಸ್​​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಗೆಳೆಯರ ಬಳಗದ ಜನತಾ ಕೋ ಆಪರೇಟಿವ್ ಬ್ಯಾಂಕ್​​​ನಲ್ಲಿ ಭಾಸ್ಕರ್ ಎಂಬಾತ ₹3 ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ಬಂದಿದ್ದರು.​ ಬ್ಯಾಂಕ್​ ಮುಂದೆ ಭಾಸ್ಕರ್ ಬರುತ್ತಿದ್ದಂತೆ ಅಲ್ಲಿಗೆ ಬಂದ ಖದೀಮನೊಬ್ಬ, ನಿಮ್ಮ ಹಣ ₹150 ಬಿದಿದ್ದೆ ಎಂದು ಹೇಳಿ ಗಮನ ಬೇರೆಡೆ ಸೆಳೆದಿದ್ದಾರೆ.

ಸಿಸಿಟಿವಿಯಲ್ಲಿ ಕೃತ್ಯ ಸೆರೆ

ಆಗ ಮೈಮರೆತ ಭಾಸ್ಕರ್, ಕೆಳಗೆ ಬಿದ್ದ ಹಣ ತೆಗೆದುಕೊಳ್ಳಲು ಮುಂದಾದರು. ಆಗ ಮತ್ತೊಬ್ಬ ಕಳ್ಳ ಬೈಕ್ ಮೇಲಿದ್ದ ಹಣದ ಬ್ಯಾಗ್ ತೆಗೆದುಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.