ಆನೇಕಲ್: ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ಸೇರಿದಂತೆ ಮೂವರು ಮೃತಪಟ್ಟ ಹೃದಯವಿದ್ರಾವಕ ಘಟನೆ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ನಡೆದಿದೆ. ಅಮಿತ ಕುಮಾರ್ (31), ರಿಷಿಕೇಶ್ (9), ಧೀಮಂತ (13) ಮೃತಪಟ್ಟವರೆಂದು ಗುರುತಿಸಲಾಗಿದೆ.
ಮೃತರು ಇಗ್ಗಲೂರು ಚಂದ್ರಕಾಂತ ಲೇಔಟ್ನಲ್ಲಿ ವಾಸವಾಗಿದ್ದರು. ರಿಷಿಕೇಶ್ ಮತ್ತು ಧೀಮಂತ ಕ್ರಿಕೆಟ್ ಆಡುವಾಗ ಬಾಲ್ ಹೊಂಡಕ್ಕೆ ಹೋಗಿತ್ತು. ಬಾಲ್ ತೆಗೆಯಲು ಹೋದ ಬಾಲಕ ಕೃಷಿಹೊಂಡಕ್ಕೆ ಬಿದ್ದಿದ್ದಾನೆ. ಆಗ ಮತ್ತೊಬ್ಬ ಆತನನ್ನು ರಕ್ಷಿಸಲು ತೆರಳಿ ಆತನೂ ಮುಳುಗಿದ್ದಾನೆ. ಬಳಿಕ ಇಬ್ಬರನ್ನೂ ರಕ್ಷಿಸಲು ಹೋದ ಅಮಿತ್ ಕುಮಾರ್ ಕೂಡ ಮೃತಪಟ್ಟಿದ್ದಾನೆ.
ಅಗ್ನಿಶಾಮಕ ದಳದ ಸಿಬ್ಬಂದಿ ಮೃತ ದೇಹಗಳನ್ನು ಹೊರತೆಗೆದಿದೆ. ಸೂರ್ಯಸಿಟಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.