ETV Bharat / city

ಕೆಜಿ ಹಳ್ಳಿ ಕೊಲೆ ಪ್ರಕರಣ: ಮೂವರು ಅಂದರ್​

author img

By

Published : Sep 14, 2021, 10:24 AM IST

ಕೆಜಿ ಹಳ್ಳಿ ಕೊಲೆ ಪ್ರಕರಣ ಸಂಬಂಧ ಮೂವರನ್ನು ಕೆಜೆ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

DCP sharanappa
ಡಿಸಿಪಿ ಶರಣಪ್ಪ

ಬೆಂಗಳೂರು: ಇತ್ತೀಚೆಗೆ ಕಾಡುಗೊಂಡನಹಳ್ಳಿಯ ಸಂಡೇ ಮಾರುಕಟ್ಟೆ ರಸ್ತೆಯಲ್ಲಿ ಪ್ರಾಣಿಗಳ ಸಂತಾನ್ಪೋತ್ಪತ್ತಿ ಕೇಂದ್ರಗಳನ್ನು ನಡೆಸುತ್ತಿದ್ದ ವ್ಯಕ್ತಿಯ ಕೊಲೆ ಮಾಡಿದ್ದ ಪ್ರಕರಣದ ಸಂಬಂಧ ಮೂವರನ್ನು ಕೆಜೆ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಡಿಸಿಪಿ ಶರಣಪ್ಪ

ಕಾಡುಗೊಂಡನಹಳ್ಳಿಯ ಸಹೋದರರಾದ ಜಾರ್ಜ್ ಅಲಿಯಾಸ್ ಪಪ್ಪಿ ಮತ್ತು ಜೆರಾಲ್ಡ್, ಸ್ನೇಹಿತ ಡ್ಯಾನಿಯಲ್ ಬಂಧಿತರು. ಆರೋಪಿಗಳು ಆಗಸ್ಟ್ 31ರಂದು ರವಿನಾಯ್ಡು ಎಂಬ ವ್ಯಕ್ತಿಯನ್ನು ಕೆ.ಜೆ. ಹಳ್ಳಿಯ ಸಂಡೇ ಮಾರುಕಟ್ಟೆ ರಸ್ತೆಯಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದರು.

ಕೊಲೆಗೆ ಕಾರಣವೇನು?

ಮೂವರು ಆರೋಪಿಗಳು ವೃತ್ತಿಯಲ್ಲಿ ಚಾಲಕರಾಗಿದ್ದರು. ಕೊಲೆಯಾದ ರವಿನಾಯ್ಡು ಪ್ರಾಣಿಗಳ ಸಂತಾನ್ಪೋತ್ಪತ್ತಿ ಕೇಂದ್ರಗಳನ್ನು ನಡೆಸುತ್ತಿದ್ದು, ಈತ ಕೂಡ ಇದೇ ಕೆಜೆ ಹಳ್ಳಿ ನಿವಾಸಿಯಾಗಿದ್ದು, ಈ ನಾಲ್ವರು ಆತ್ಮೀಯರಾಗಿದ್ದರು. ಈ ಹಿಂದೆ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಮ್ಮನಹಳ್ಳಿಯಲ್ಲಿ 2017ರಲ್ಲಿ ಲೈಂಗಿಕ ದೌರ್ಜನ್ಯ (354 ಕಾಯ್ದೆ) ಪ್ರಕರಣವೊಂದರಲ್ಲಿ ಜಾರ್ಜ್ ಆರೋಪಿಯಾಗಿದ್ದು, ಜೈಲಿಗೆ ಹೋಗಿ ಹೊರ ಬಂದಿದ್ದ. ಸ್ನೇಹಿತರ ಮುಂದೆಲ್ಲ ಜಾರ್ಜ್‍ನನ್ನು ರೇಪಿಸ್ಟ್ ಎಂದು ರವಿನಾಯ್ಡು ರೇಗಿಸುತ್ತಿದ್ದ.

ಇದರಿಂದ ಬೇಸತ್ತ ಜಾರ್ಜ್ ರವಿನಾಯ್ಡು ಕೊಲೆ ಮಾಡಲು ಸಂಚು ರೂಪಿಸಿದ್ದ. ಅದರಂತೆ ಆರು ತಿಂಗಳ ಕಾಲ ರವಿಯ ಚಲನವಲನಗಳನ್ನು ಗಮನಿಸಿದ್ದ ಡ್ಯಾನಿಯಲ್, ಆತನ ಬಗ್ಗೆ ಎಲ್ಲ ಮಾಹಿತಿಯನ್ನು ಜಾರ್ಜ್‍ಗೆ ತಿಳಿಸಿದ್ದ.

ಇದನ್ನೂ ಓದಿ: ಲಾರಿಗಳ ಮುಖಾಮುಖಿ ಡಿಕ್ಕಿ.. ನಾಲ್ವರಿಗೆ ಗಂಭೀರ ಗಾಯ, ಓರ್ವನ ಸ್ಥಿತಿ ಚಿಂತಾಜನಕ!

ಆಗಸ್ಟ್ 31ರಂದು ಮಧ್ಯಾಹ್ನ ರವಿನಾಯ್ಡುವನ್ನು ಮೂವರು ಆರೋಪಿಗಳು ಸಂಡೇ ಮಾರುಕಟ್ಟೆ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದರು. ಈ ಸಂಬಂಧ ಕೆ.ಜಿ. ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿಗಳು ಪತ್ತೆಯಾಗಿದ್ದು ಹೇಗೆ?

ಕೊಲೆ ಮಾಡಿದ ಬಳಿಕ ಆರೋಪಿಗಳು ಬೈಕ್‍ನಲ್ಲಿ ಪರಾರಿಯಾಗುವುದನ್ನು ಸ್ಥಳೀಯರೊಬ್ಬರು ನೋಡಿದ್ದರು. ಈ ಮಾಹಿತಿ ಪಡೆದ ಪೊಲೀಸ್ ಪಡೆ ಸಿಸಿ ಟಿವಿ ಪರಿಶೀಲಿಸಿ ಬೈಕ್ ನಂಬರ್ ಪತ್ತೆಹಚ್ಚಿದ್ದರು. ಬಳಿಕ ಬೈಕ್ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳ ಮಾಹಿತಿ ದೊರೆಯಿತು ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.