ಬೆಂಗಳೂರು: ರಾಜ್ಯದಲ್ಲಿ ಇಂದು 2960 ಜನರಿಗೆ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,41,889ಕ್ಕೆ ಏರಿಕೆ ಆಗಿದೆ.
ರಾಜ್ಯದಲ್ಲಿ ಗುಣಮುಖರಾದ ಸೋಂಕಿತರ ಸಂಖ್ಯೆ ಸಂಖ್ಯೆ ಇಳಿಕೆ ಆಗಿದೆ. ಇಂದು 2701 ಮಂದಿ ಗುಣಮುಖರಾಗಿದ್ದು, ಈವರೆಗೆ 7,97,204 ಜನರು ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 33,319 ಇದ್ದು, 901 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿಗೆ 35 ಮಂದಿ ಬಲಿಯಾಗಿದ್ದು, 11,347 ಜನರು ಸಾವನ್ನಪ್ಪಿದ್ದಾರೆ. ಅನ್ಯ ಕಾರಣಕ್ಕೆ 19 ಜನರು ಮೃತರಾಗಿದ್ದಾರೆ.
ಕಳೆದ 24 ಗಂಟೆಯಲ್ಲಿ ಸೋಂಕಿನ ಖಚಿತ ಪ್ರಕರಣಗಳು 2.68ರಷ್ಟು ಇದ್ದರೆ, ಸೋಂಕಿನಿಂದ ಮೃತಪಟ್ಟವರ ಪ್ರಮಾಣ 1.18ರಷ್ಟಿದೆ. ವಿಮಾನ ನಿಲ್ದಾಣದಲ್ಲಿ 586 ಪ್ರಯಾಣಿಕರು ಆಗಮಿಸಿದ್ದು, ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.
ಕಳೆದ 14 ದಿನಗಳಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರಲ್ಲಿ 2,43,825 ಮಂದಿ ಇದ್ದರೆ, ದ್ವಿತೀಯ ಸಂಪರ್ಕಿತರು 2,49,267 ಮಂದಿ ಇದ್ದಾರೆ. ಕಳೆದ 7 ದಿನಗಳಲ್ಲಿ 49,673 ಜನರು ಹೋಂ ಕ್ವಾರಂಟೈನ್ನಲ್ಲಿ ಇದ್ದಾರೆ.