ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ ಇದೆ. ಇಂದು ಒಂದೇ ದಿನ 28 ಸೋಂಕಿತರು ಪತ್ತೆಯಾಗಿದ್ದಾರೆ. ಇಂದು ಪತ್ತೆಯಾದ ಒಟ್ಟು ಸೋಂಕಿತರ ಪೈಕಿ 21 ಸೋಂಕಿತರು ದಾವಣಗೆರೆ ಮೂಲದವರು ಎಂಬುದು ಆತಂಕಕಾರಿ ವಿಚಾರವಾಗಿದೆ.
ಪಿ-533 ಆಗಿರುವ 35 ವರ್ಷದ ಸೋಂಕಿತ ಮಹಿಳೆಯಿಂದಲೇ 18 ಮಂದಿಗೆ ಸೋಂಕು ತಗುಲಿದೆ. ಆದರೆ ಈ ಮಹಿಳೆಗೆ ಯಾರ ಸಂಪರ್ಕ ಇಲ್ಲದೇ ಇದ್ದರೂ ಕೂಡಾ ಸೋಂಕು ಹರಡಿದೆ ಎನ್ನಲಾಗಿದ್ದು, ದಾವಣಗೆರೆಯ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
-
Mid day Bulletin 04/05/2020@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @Tejasvi_Surya @BBMP_MAYOR @BBMPCOMM @CCBBangalore @BlrCityPolice @KarnatakaVarthe @PIBBengaluru @KarFireDept @BMTC_BENGALURU @NammaBESCOM pic.twitter.com/BfDRBtHTmV
— K'taka Health Dept (@DHFWKA) May 4, 2020 " class="align-text-top noRightClick twitterSection" data="
">Mid day Bulletin 04/05/2020@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @Tejasvi_Surya @BBMP_MAYOR @BBMPCOMM @CCBBangalore @BlrCityPolice @KarnatakaVarthe @PIBBengaluru @KarFireDept @BMTC_BENGALURU @NammaBESCOM pic.twitter.com/BfDRBtHTmV
— K'taka Health Dept (@DHFWKA) May 4, 2020Mid day Bulletin 04/05/2020@CMofKarnataka @BSYBJP @DVSadanandGowda @SureshAngadi_ @sriramulubjp @drashwathcn @BSBommai @mla_sudhakar @Tejasvi_Surya @BBMP_MAYOR @BBMPCOMM @CCBBangalore @BlrCityPolice @KarnatakaVarthe @PIBBengaluru @KarFireDept @BMTC_BENGALURU @NammaBESCOM pic.twitter.com/BfDRBtHTmV
— K'taka Health Dept (@DHFWKA) May 4, 2020
ಇದರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 642ಕ್ಕೆ ಏರಿಕೆಯಾಗಿದೆ. 304 ಮಂದಿ ಸೋಂಕಿತರು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇದರೊಂದಿಗೆ ಕೊರೊನಾಗೆ ರಾಜ್ಯದಲ್ಲಿ ಮತ್ತೊಂದು ಬಲಿಯಾಗಿದೆ. ಕಲಬುರಗಿಯಲ್ಲಿ ಕೊರೊನಾ ಸೋಂಕಿತ ಸಾವನ್ನಪ್ಪಿದ್ದಾರೆ. ಪಿ-587 ಆಗಿದ್ದ ಈ ವ್ಯಕ್ತಿ ಏಪ್ರಿಲ್ 29ರಂದು ಕೆಮ್ಮು ಮತ್ತು ಜ್ವರದ ತೊಂದರೆಯಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ಮರಣ ಹೊಂದಿದ್ದಾರೆ.