ನವದೆಹಲಿ: ಕನೌಜ್ನ ಆಗ್ರಾ-ಲಕ್ನೋ ಎಕ್ಸ್ಪ್ರೆಸ್ವೇನಲ್ಲಿ ಇಂದು ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ವೈದ್ಯರು ಸಾವನ್ನಪ್ಪಿದ್ದಾರೆ. ಅನಿರುದ್ಧ್ ವರ್ಮಾ, ಸಂತೋಷ್ ಕುಮಾರ್ ಮೌರ್ಯ, ಜಯವೀರ್ ಸಿಂಗ್, ಅರುಣ್ ಕುಮಾರ್ ಮತ್ತು ನರದೇವ್ ಸಾವನ್ನಪ್ಪಿದ ವೈದ್ಯರೆಂದು ಗುರುತಿಸಲಾಗಿದೆ. ಮತ್ತೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರು ವೈದ್ಯಕೀಯ ಪಿಜಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಲಕ್ನೋಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೆಹಲಿ ಸುತ್ತಮುತ್ತ ಆವರಿಸಿರುವ ದಟ್ಟ ಮಂಜು ಕೂಡ ಘಟನೆಗೆ ಕಾರಣ ಎಂದು ಹೇಳಲಾಗಿದೆ.
ಚಳಿಗಾಲದ ಆರಂಭದಲ್ಲಿ ಮಂಜಿನಿಂದಾಗಿ ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಅಪಘಾತಗಳು ಸಂಭವಿಸುತ್ತವೆ.
ಇದನ್ನೂ ಓದಿ: ಸ್ಪೂರ್ತಿದಾಯಕ ಕಥೆ: ಬಿದಿರಿನಿಂದ ಅಲಂಕಾರಿಕ ವಸ್ತುಗಳನ್ನ ತಯಾರಿಸಿ ಬದುಕು ಕಟ್ಟಿಕೊಂಡ ಕುಗ್ರಾಮದ ಮಹಿಳೆಯರು