ETV Bharat / city

ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಗಾಂಜಾ ಮಾರಾಟ; ಇಬ್ಬರು ಬಿಎಂಟಿಸಿ ನೌಕರರ ಬಂಧನ - bangalore latest news

ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಬಿಎಂಟಿಸಿ ನೌಕರರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ.

Marijuana selling case accused
ಗಾಂಜಾ ಮಾರಾಟ ಪ್ರಕರಣದ ಆರೋಪಿಗಳು
author img

By

Published : Aug 13, 2021, 7:29 AM IST

ಬೆಂಗಳೂರು: ಗಾಂಜಾ ತಂದು ಸರ್ಕಾರಿ ಬಸ್​ಗಳಲ್ಲಿ ಮಾರಾಟ ಮಾಡುತ್ತಿದ್ದ ಇಬ್ಬರು ಬಿಎಂಟಿಸಿ ನೌಕರರನ್ನು ಕೆಂಗೇರಿ ಪೊಲೀಸರು ಬಂಧಿಸಿದ್ದಾರೆ. ವಿಠ್ಠಲ್ ಭಜಂತ್ರಿ ಮತ್ತು ಶರಣಬಸಪ್ಪ ಬಂಧಿತರು. ಆರೋಪಿಗಳಿಂದ 9.8 ಕೆ.ಜಿ. ಗಾಂಜಾ ವಶಕ್ಕೆ ಪಡೆಯಲಾಗಿದೆ.

ಬಿಎಂಟಿಸಿಯಲ್ಲಿ ಚಾಲಕ ಮತ್ತು ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದ ಆರೋಪಿಗಳು ಗಾಂಜಾ ಮಾರಾಟ ಮಾಡುತ್ತಿದ್ದರು. ಸರ್ಕಾರಿ ಬಸ್​ಗಳಲ್ಲಿ ಸಾರಿಗೆ ನೌಕರರಿಗೆ ಮುಕ್ತ ಓಡಾಟಕ್ಕೆ ಅವಕಾಶ ನೀಡಿರುವುದನ್ನು ದುರ್ಬಳಕೆ ಮಾಡಿ‌ ಕೃತ್ಯ ಎಸಗಿದ್ದಾರೆ.

Marijuana selling case
ವಶಕ್ಕೆ ಪಡೆದ ಗಾಂಜಾ

ನಗರದ ಕೆಂಗೇರಿ ಸಮೀಪದ ತುರಹಳ್ಳಿ ಅರಣ್ಯ ಪ್ರದೇಶವನ್ನು ಅಕ್ರಮಕ್ಕೆ ಅಡ್ಡ ಮಾಡಿಕೊಂಡಿದ್ದ ಗಾಂಜಾ ಪೆಡ್ಲರ್​ಗಳು ಕಳೆದ ಮೂರು ವರ್ಷಗಳಿಂದ ದಂಧೆಯಲ್ಲಿ ಭಾಗಿಯಾಗಿದ್ದರು. ವಿಜಯಪುರ ಮತ್ತು ಕಲಬುರಗಿಯಿಂದ ಗಾಂಜಾ ತಂದು ಕೆ.ಜಿ. ಗೆ 40-50 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು.

ಇದನ್ನೂ ಓದಿ: ಬೆಂಗಳೂರು ಹೊರವಲಯಗಳಲ್ಲಿ ಹೆಚ್ಚು ಕೋವಿಡ್​ ಕೇಸ್ ಪತ್ತೆ: ಪಾಲಿಕೆ ಯೋಜನೆ ಏನು?

ಆರೋಪಿಗಳ ವಿರುದ್ಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಕೇಸು ದಾಖಲಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.