ETV Bharat / city

ಹೋಂ ಕ್ವಾರಂಟೈನ್ ಉಲ್ಲಂಘಿಸಿದ್ರೆ ಕಠಿಣ ಶಿಕ್ಷೆ ಎಚ್ಚರಿಕೆ.. 120 ಮಂದಿ ಸಮೂಹ ಕ್ವಾರಂಟೈನ್​​ಗೆ ಶಿಫ್ಟ್‌..

ಕೊರೊನಾ ವೈರಸ್​ ಶಂಕಿತರನ್ನು ಮುಂಜಾಗ್ರತಾ ಕ್ರಮವಾಗಿ ಹೋಂ ಕ್ವಾರಂಟೈನ್​ ಇಡಲಾಗಿದೆ. ಆದರೆ, ಪದೇಪದೆ ಕ್ವಾರಂಟೈನ್​ ನಿಯಮ ಉಲ್ಲಂಘನೆ ಮಾಡಿ ಮನೆಯಿಂದ ಹೊರ ಬರುತ್ತಿರುವ ಸಂಗತಿಗಳೂ ಜರುಗಿದ ಹಿನ್ನೆಲೆ ಕಠಿಣ ಕ್ರಮಕೈಗೊಂಡಿರುವ ಆರೋಗ್ಯ ಇಲಾಖೆ ಹೋಂ ಕ್ವಾರಂಟೈನ್​ನಲ್ಲಿರುವವರನ್ನು ನಿಗದಿತ ಸ್ಥಳಕ್ಕೆ ಸ್ಥಳಾಂತರಿಸುತ್ತಿದೆ.

120-home-quarantine-patient-transform-to-hospital
ಆರೋಗ್ಯ ಇಲಾಖೆ
author img

By

Published : Mar 29, 2020, 8:55 PM IST

ಬೆಂಗಳೂರು : ಹೋಂ ಕ್ವಾರಂಟೈನ್ ನಿಯಮ‌ ಉಲ್ಲಂಘನೆ ಮಾಡಿ ಮನೆಯಿಂದ ಹೊರಬರುವುದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ, 120 ಜನರನ್ನು ಬೇರೆಡೆ ಸ್ಥಳಾಂತರ ಮಾಡಿದೆ.

ಜನರ ದೂರುಗಳನ್ನು ಆಧರಿಸಿ ಹೋಂ ಕ್ವಾರಂಟೈನ್ ಜಾರಿ ಪಡೆ ನಿಯಮ ಉಲ್ಲಂಘನೆ ಮಾಡಿದವರನ್ನು ನಿಗದಿತ ಸಂಸ್ಥೆಗಳಲ್ಲಿನ ಕ್ವಾರಂಟೈನ್​ಗೆ ಸ್ಥಳಾಂತರ ಮಾಡಿದೆ. ಈವರೆಗೆ 120 ಜನರನ್ನು ಸ್ಥಳಾಂತರ ಮಾಡಿದ್ದು, ಹೋಂ ಕ್ವಾರಂಟೈನ್ ಪಾಲನೆ ಮಾಡದವರಿಗೆ‌ ಕಠಿಣ ಸಂದೇಶ ರವಾನೆ ಮಾಡಿದೆ.

ಕೊರೊನಾ ಶಂಕೆ ಹಿನ್ನೆಲೆಯಲ್ಲಿಂದು ಹೊಸದಾಗಿ‌ 308 ಜನರನ್ನು ಅವಲೋಕನೆಗಾಗಿ ಪಟ್ಟಿ ಮಾಡಲಾಗಿದೆ. ಈವರೆಗೆ ಅವಲೋಕನೆಗೆ ಒಳಪಟ್ಟವರ ಸಂಖ್ಯೆ 14,115 ತಲುಪಿದೆ. ಆಸ್ಪತ್ರೆಗಳಲ್ಲಿ ಐಸೋಲೇಷನ್​ಗಾಗಿ ಇಂದು‌ 80 ಜನರೂ ಸೇರಿ ಒಟ್ಟು 228 ಮಂದಿಯನ್ನು ಇರಿಸಿದಂತಾಗಿದೆ. ಇಂದು 179 ಜನರ ಮಾದರಿ ಸಂಗ್ರಹ ಮಾಡಲಾಗಿದೆ. ಈವರೆಗೆ 3170 ಮಾದರಿ ಸಂಗ್ರಹ ಮಾಡಿದಂತಾಗಿದೆ. ಇವತ್ತು 229 ಸೇರಿ ಈವರೆಗೂ ಒಟ್ಟು 2874 ಪರೀಕ್ಷಾ ವರದಿ ನೆಗಟಿವ್ ಬಂದಿದೆ. 7 ವರದಿ ಕೊರೊನಾ ಪಾಸಿಟಿವ್ ಬಂದಿವೆ. ಸೋಂಕಿತರ ಸಂಖ್ಯೆ ಈಗ 83ಕ್ಕೆ ತಲುಪಿದೆ.

120-home-quarantine-patient-transform-to-hospital
ಆರೋಗ್ಯ ಇಲಾಖೆಯ ಕೊರೊನಾ ಸೋಂಕಿತ ಮತ್ತು ಶಂಕೀತರ ವರದಿ

ಯಾವ ಆಸ್ಪತ್ರೆಯಲ್ಲಿ ಎಷ್ಟು ಸೋಂಕಿತರು : ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ 5, ಬೆಂಗಳೂರಿನ ಇತರೆ ಆಸ್ಪತ್ರೆಯಲ್ಲಿ 27, ದಕ್ಷಿಣ ಕನ್ನಡದಲ್ಲಿ 31, ಬಳ್ಳಾರಿ 10, ಕಲಬುರ್ಗಿ 29, ಕೊಡಗು1, ಉಡುಪಿಯಲ್ಲಿ 13, ಬೀದರ್‌ 10, ಗದಗ 6, ಉತ್ತರಕನ್ನಡ 15, ಧಾರವಾಡ 4, ಹಾಸನ 3, ಚಾಮರಾಜನಗರ 0, ಚಿತ್ರದುರ್ಗ 10, ದಾವಣಗೆರೆ 2, ಮೈಸೂರು 14,ರಾಯಚೂರು 0, ಶಿವಮೊಗ್ಗ 6, ಮಂಡ್ಯ 0, ತುಮಕೂರು 28, ಚಿಕ್ಕಮಗಳೂರು 1, ಚಿಕ್ಕಬಳ್ಳಾಪುರ 7, ವಿಜಯಪುರ 4, ಯಾದಗಿರಿ 1, ಬಾಗಲಕೋಟೆ1.

ಒಟ್ಟು 228 ಜನರನ್ನ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು 41 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. 80 ಜನರನ್ನು ಹೊಸದಾಗಿ ದಾಖಲಿಸಿಕೊಳ್ಳಲಾಗಿದೆ ಎನ್ನುವ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದೆ. ಈವರೆಗೆ ಬೆಂಗಳೂರು, ಮಂಗಳೂರು ವಿಮಾನ ನಿಲ್ದಾಣ, ಬಂದರುಗಳಲ್ಲಿ ಒಟ್ಟು‌ 1,28,226 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ. ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ. ಹಾಗಾಗಿ ಯಾವುದೇ ಆತಂಕಕ್ಕೊಳಗಾಗದೇ ಮುನ್ನೆಚ್ಚರಿಕೆ ವಹಿಸಿ ಆರೋಗ್ಯ ಇಲಾಖೆಗೆ ಸಹಕಾರ ನೀಡಿ ಎಂದು ಮನವಿ ಮಾಡಿದೆ.

ಸೇವೆಗೆ ಹಾಜರಾಗಲು ಅವಕಾಶ : ಕೊವಿಡ್ -19 ಸಂಪರ್ಕಗಳು ಮತ್ತು 14 ದಿನಗಳ ಸಂಪರ್ಕ ತಡೆ ಪೂರ್ಣಗೊಳಿಸಿದವರು ಮತ್ತು ಕರ್ತವ್ಯಕ್ಕೆ ಮರು ವರದಿ ಮಾಡಿಕೊಳ್ಳಲು ಸರ್ಕಾರಿ ಅಥವಾ ಖಾಸಗಿ/ಆಯುರ್ವೇದ/ಅಲೋಪತಿ ವೈದ್ಯರಿಂದ ವೈದ್ಯಕೀಯ ಪ್ರಮಾಣ ಪತ್ರವನ್ನು ಪಡೆಯಬಹುದಾಗಿದೆ ಎಂದು‌ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ತುರ್ತು ಸೇವೆಯಿಂದ ದೂರ ಇರುವವರು ಕರ್ತವ್ಯಕ್ಕೆ ಮರಳಲು ಅವಕಾಶ ಕಲ್ಪಿಸಿದೆ.

ಕೊರೊನಾ ಶಂಕಿತರಿಗೆ ಮಾನಸಿಕ ಆಪ್ತ ಸಮಾಲೋಚನೆ : ಕ್ವಾರಂಟೈನ್‌ನಂತಹ ಪ್ರತ್ಯೇಕ ವ್ಯವಸ್ಥೆಯಲ್ಲಿ ಸುದೀರ್ಘ ಕಾಲ ಸಂಯಮದಿಂದ ಇರಲು ಮಾನಸಿಕ ಸ್ಥೈರ್ಯದ ಅಗತ್ಯವಿದೆ. ಅಂತಹ ರೋಗಿಗಳಿಗೆ ಮತ್ತು ಸಂಪರ್ಕಿತರಿಗೆ ಮಾನಸಿಕ ಆರೋಗ್ಯದ ಆಪ್ತ ಸಮಾಲೋಚನೆಗೆ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಕಲ್ಪಿಸಿದೆ. ಈವರೆಗೆ ಒಟ್ಟು 12,658 ಜನರಿಗೆ ಕೌನ್ಸೆಲಿಂಗ್ ನಡೆಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.