ಬೆಂಗಳೂರು : ರಾಜ್ಯದಲ್ಲಿಂದು 36 ಕೊರೊನಾ ಸೋಂಕಿತರು ಹೊಸದಾಗಿ ಪತ್ತೆಯಾಗಿದ್ದಾರೆ. ಈ ಪೈಕಿ 12 ಮಂದಿ ಸೋಂಕಿತರು ಬೆಂಗಳೂರಿನಲ್ಲಿ ಕಂಡು ಬಂದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆಯಾಗಿದೆ.
ಉತ್ತರಕನ್ನಡದ ಭಟ್ಕಳದಲ್ಲಿ 2 ವರ್ಷ 6 ತಿಂಗಳ ಹೆಣ್ಣು ಮಗುವಿಗೆ ಹಾಗೂ 1 ವರ್ಷ 5 ತಿಂಗಳ ಗಂಡು ಮಗುವಿನಲ್ಲೂ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಇಬ್ಬರೂ ಮಕ್ಕಳಿಗೆ ರೋಗಿ ಸಂಖ್ಯೆ 659ರಿಂದ ಸೋಂಕು ಹರಡಿದೆ.
ಉತ್ತರ ಕನ್ನಡ 7, ಚಿತ್ರದುರ್ಗ 3, ದಕ್ಷಿಣ ಕನ್ನಡ, ಬೀದರ್ನಲ್ಲಿ ತಲಾ ಮೂರು, ದಾವಣಗೆರೆಯಲ್ಲಿ 6 ಹಾಗೂ ತುಮಕೂರು, ವಿಜಯಪುರದಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಒಟ್ಟು ಸೋಂಕಿತರ ಸಂಖ್ಯೆ 379ಕ್ಕೆ ಏರಿಕೆಯಾಗಿದೆ. ಜತೆಗೆ ಈವರೆಗೆ ಅಷ್ಟೇ ಸಂಖ್ಯೆಯ ಅಂದ್ರೆ 379 ಮಂದಿ ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.