ಬೆಂಗಳೂರು : ಸಿಎಂ ಬೊಮ್ಮಾಯಿ ಸರ್ಕಾರ ಆಡಳಿತಕ್ಕೆ ಮೇಜರ್ ಸರ್ಜರಿ ಮಾಡಿದೆ. 10 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಅಧಿವೇಶನ ನಡೆಯುತ್ತಿರುವಾಗಲೇ ಆಡಳಿತದಲ್ಲಿ ಈ ದಿಢೀರ್ ಬದಲಾವಣೆ ನಡೆದಿದೆ. ಬೊಮ್ಮಾಯಿ ಸಿಎಂ ಆದ ಬಳಿಕ ಇಷ್ಟು ದೊಡ್ಡ ಪ್ರಮಾಣದಲ್ಲಿ ಇದೇ ಮೊದಲ ಬಾರಿಗೆ ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆಯಾದ ಐಎಎಸ್ ಅಧಿಕಾರಿಗಳು :
- ಅನಿಲ್ ಕುಮಾರ್ - ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ
- ರಶ್ಮಿ ಮಹೇಶ್- ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ
- ಡಾ.ಸೆಲ್ವಕುಮಾರ್ - ಸಹಕಾರ ಇಲಾಖೆ ಕಾರ್ಯದರ್ಶಿ
- ಡಾ.ರವಿಶಂಕರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ) ಕಾರ್ಯದರ್ಶಿ
- ಡಾ.ವಿಶಾಲ್ ಆರ್-ಸಾರ್ವಜನಿಕ ಮಾಹಿತಿ ಇಲಾಖೆ ಆಯುಕ್ತ
- ಅಂಬುಕುಮಾರ್ - ಬಿಎಂಟಿಸಿ ಎಂಡಿ
- ಡಾ.ರೇಜು ಎಂಟಿ - ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ಎಂಡಿ
- ಡಾ.ರಾಂ ಪ್ರಸಾತ್ ಮನೋಹರ್-ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ)
- ಪಿ ಎನ್ ರವೀಂದ್ರ - ಇನ್ಸ್ ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ ಮತ್ತು ಮುದ್ರಾಂಕ ಇಲಾಖೆ ಆಯುಕ್ತ
- ಕೆ ಪಿ ಮೋಹನ್ ರಾಜ್ - ಹುದ್ದೆ ನಿಯೋಜಿಸದೇ ವರ್ಗಾವಣೆ