ETV Bharat / city

ಮೂರು ದಿನಗಳಿಂದ ಕಾಣದ ಯುವಕ ಶವವಾಗಿ ಪತ್ತೆ... - undefined

ಮದುವೆಗೆಂದು ಹೋದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಕೂಡ್ಲಿಗಿಯಲ್ಲಿ ನಡೆದಿದೆ. ಸದ್ಯ ಯುವಕನ ಸಾವಿನ ಸುತ್ತ ಅನುಮಾನದವೆದ್ದಿದ್ದು , ಯುವಕನ ತಾಯಿ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ.

ಯುವಕ ಶವವಾಗಿ ಪತ್ತೆ
author img

By

Published : Apr 13, 2019, 12:35 PM IST

ಬಳ್ಳಾರಿ‌ : ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಯುವಕನ ಶವವು ಮನೆ ಮುಂದಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಕೂಡ್ಲಿಗಿಯಲ್ಲಿ ನಡೆದಿದೆ.

ಜಿಲ್ಲೆಯ ಕೂಡ್ಲಿಗಿಯ ಒಂದನೇ ವಾರ್ಡ್​ನ ಬಿಎಸ್ಎನ್ಎಲ್ ಕಚೇರಿಯ ನಿವಾಸಿ ಅಂಬರಿ (25) ಮೃತ ಯುವಕ. ಮೂರು ದಿನಗಳ ಹಿಂದೆ ಮದುವೆಗೆಂದು ಹೋದವನು, ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಇಂದು ಮುಂಜಾನೆ ಬೆಳಗಿನ ಜಾವ ಮನೆಯ ಮುಂದೆ ದೊಡ್ಡ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಈತನ ಶವ ಪತ್ತೆಯಾಗಿದೆ.

ಯುವಕ ಶವವಾಗಿ ಪತ್ತೆ

ಇನ್ನು ಮಗ ನೇಣು ಹಾಕಿಕೊಂಡಿಲ್ಲ. ಯಾರೋ ಕೊಲೆ ಮಾಡಿದ್ದಾರೆ ಎಂದು ಮೃತ ಯುವಕನ ತಾಯಿ ಚಂದ್ರಮ್ಮ ದೂರಿದ್ದಾರೆ. ವಾಣಿ ಎಂಬ ವಿವಾಹಿತ ಮಹಿಳೆಯೊಂದಿಗೆ ಈತ ಅನೈತಿಕ ಸಂಬಂಧ ಹೊಂದಿದ್ದು, ಆಕೆಯ ಕಡೆಯವರು ಕೊಲೆ ಮಾಡಿ ಈ ರೀತಿ ಮರಕ್ಕೆ ನೇಣು ಹಾಕಿ ಹೋಗಿದ್ದಾರೆ ಎಂದು ತಾಯಿ ಚಂದ್ರಮ್ಮ ಆರೋಪಿಸಿದ್ದಾರೆ.

ಸದ್ಯ ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಬಳ್ಳಾರಿಗೆ ರವಾನಿಸಲಾಗಿದ್ದು, ಪೊಲೀಸರ ತನಿಖೆಯ ಬಳಿಕವಷ್ಟೇ ಸತ್ಯ ಹೊರಬೀಳಲಿದೆ.

Intro:

ಮೂರು ದಿನಗಳು ಕಾಣದ ಮಗ ಕೊನೆಗೆ ನೇಣಿಗೆ ಶರಣು.

ಅಂಬರಿ ( 25 ) ವರ್ಷದ ಯುವಕ ಇಂದು ಬೆಳಿಗ್ಗೆ ಮರಕ್ಕೆ ನೇಣು ಹಾಕಿಕೊಂಡಿರುವ ದೃಶ್ಯ
ಕಂಡು ಬಂತು.

Body:ಬಳ್ಳಾರಿ‌ ಜಿಲ್ಲೆಯ ಕೂಡ್ಲಿಗಿಯ ಒಂದನೇ ವಾರ್ಡ್ ನ ಬಿ.ಎಸ್.ಎನ್.ಎಲ್ ಕಚೇರಿಯ ನಿವಾಸಿಯಾಗಿದ್ದಾನೆ.

ಈತನು ಮೂರು ದಿನಗಳಿಂದ ಮದುವೆಗೆಂದು ಹೋಗಿ ಯಾರಿಗೂ ಕಾಣದೆ ತನ್ನ ಫೋನ್ ಕೂಡ ಸ್ವಿಚ್ ಆಫ್ ಆಗಿದ್ದು ಇಂದು ಮುಂಜಾನೆ ಶನಿವಾರ ಬೆಳಗಿನ ಜಾವ ಮನೆಯ ಮುಂದೆ ದೊಡ್ಡ ಮರಕ್ಕೆ ನೇಣು ಬಿಗಿದುಕೊಂಡ ದೃಶ್ಯ ಕಂಡು ಬಂದಿದೆ. ಮಗ ನೇಣು ಹಾಕಿಕೊಂಡಿಲ್ಲ ಯಾರೋ ಕೊಲೆ ಮಾಡಿದ್ದಾರೆ ಎಂದು ದೂರಿದ ತಾಯಿ ಚಂದ್ರಮ್ಮ ದೂರಿದರು.

ವಾಣಿ ವಿವಾಹಿತ ಮಹಿಳೆಯಾಗಿದ್ದು ಇವಳ ಜೊತೆ ಅನೈತಿಕ ಸಂಬಂಧ ಹೊಂದಿದ್ದು. ಇವರ ಕಡೆಯವರು ಕೊಲೆ ಮಾಡಿ ಈ ರೀತಿ ಮರಕ್ಕೆ ನೇಣು ಹಾಕಿ ಹೋಗಿದ್ದಾರೆ ಎಂದು ತಾಯಿ ಚಂದ್ರಮ್ಮ ತಿಳಿಸಿದರು.

Conclusion:ಆದರೆ ಪೊಲೀಸರು ತನಿಖೆ ಕೈಗೊಂಡು ನಂತರ ವೇ ಮರಣೋತ್ತರ ಪರೀಕ್ಷೆಗಾಗಿ ಬಳ್ಳಾರಿಗೆ ಕಳಿಸಿದ್ದು ಮುಂದಿನ ತನಿಖೆ ಪೊಲೀಸರ ತನಿಖೆಯಿಂದ ಸತ್ಯ ಹೊರಬೀಳಲಿದೆ.

ಮೃತ ಯುವಕನಿಗೆ ತಾಯಿ ಚಂದ್ರಮ್ಮ, ಒಬ್ಬನೇ ಮಗ, ಒಬ್ಬ ಅಕ್ಕ, ಒಬ್ಬ ತಂಗಿ ಇದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.