ETV Bharat / city

ತಡವಾಗಿ ಆಗಮಿಸಿದ ಎಕ್ಸ್‌ಪ್ರೆಸ್​​ ರೈಲುಗಳು: ಬಳ್ಳಾರಿಯಲ್ಲಿ ಪರದಾಡಿದ ಪ್ರಯಾಣಿಕರು - ವಿಜಯವಾಡ-ಹುಬ್ಬಳ್ಳಿ-ಅಮರಾವತಿ ಎಕ್ಸ್‌ಪ್ರೆಸ್

ಎರಡು ಎಕ್ಸ್‌ಪ್ರೆಸ್‌ ರೈಲುಗಳು ತಡವಾಗಿ ಆಗಮಿಸುವ ಮೂಲಕ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

kn_bly_01_300120_trianproblemnews_10007
ತಡವಾಗಿ ಆಗಮಿಸಿದ ಎಕ್ಸ್‌ಪ್ರೆಸ್‌ ರೈಲುಗಳು: ಗಣಿನಾಡಿನಲ್ಲಿ ಪ್ರಯಾಣಿಕರ ಪರದಾಟ
author img

By

Published : Jan 30, 2020, 12:51 PM IST

ಬಳ್ಳಾರಿ: ಎರಡು ಎಕ್ಸ್‌ಪ್ರೆಸ್‌ ರೈಲುಗಳು ತಡವಾಗಿ ಆಗಮಿಸುವ ಮೂಲಕ ಬಳ್ಳಾರಿ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ತಡವಾಗಿ ಆಗಮಿಸಿದ ಎಕ್ಸ್‌ಪ್ರೆಸ್‌ ರೈಲುಗಳು: ಪರದಾಡಿದ ಪ್ರಯಾಣಿಕರು
ಗಣಿನಾಡು ಬಳ್ಳಾರಿ ನಗರದ ರೈಲ್ವೆ ನಿಲ್ದಾಣಕ್ಕೆ 'ಹರಿಪ್ರಿಯ ಎಕ್ಸ್‌ಪ್ರೆಸ್‌' ಬೆಳಿಗ್ಗೆ 4 ಗಂಟೆ 20 ನಿಮಿಷಕ್ಕೆ ಆಗಮಿಸಿ 4 ಗಂಟೆ 25 ನಿಮಿಷಕ್ಕೆ ಹೊರಡಬೇಕಾಗಿತ್ತು. ಆದರೆ 6-43ಕ್ಕೆ ಆಗಮಿಸಿ 2 ತಾಸು 20 ನಿಮಿಷ ತಡವಾಗಿ ಬಂದಿದೆ‌. ಅದೇ ರೀತಿ ವಿಜಯವಾಡ-ಹುಬ್ಬಳ್ಳಿ-ಅಮರಾವತಿ ಎಕ್ಸ್‌ಪ್ರೆಸ್ ಬೆಳಿಗ್ಗೆ 6-50ಕ್ಕೆ ಬಂದು 6-52ಕ್ಕೆ ಹೊರಡಬೇಕಾಗಿತ್ತು. ಆದರೆ ಬೆಳಿಗ್ಗೆ 8 ಗಂಟೆ 28 ನಿಮಿಷಕ್ಕೆ ಆಗಮಿಸಿದ್ದು, ಒಂದೂವರೆ ತಾಸು ತಡವಾಗಿ ಬಂದಿದೆ. ಇದರಿಂದ ಬಳ್ಳಾರಿಯಿಂದ ತೋರಣಗಲ್ಲು, ದರೋಜಿ, ಹೊಸಪೇಟೆ, ಮುನಿರಾಬಾದ್, ಕೊಪ್ಪಳ, ಗದಗ, ಅಣ್ಣಿಗೇರೆ ಮತ್ತು ಹುಬ್ಬಳ್ಳಿಗೆ ಪ್ರತಿನಿತ್ಯ ಪ್ರಯಾಣ ಮಾಡುವ ನೂರಾರು ಸರ್ಕಾರಿ ಮತ್ತು ಖಾಸಗಿ ನೌಕರರು ಕಚೇರಿ ಕೆಲಸಗಳಿಗೆ ಹೋಗುವುದಕ್ಕೆ ಸಮಸ್ಯೆ ಉಂಟಾಯಿತು. ಈಟಿವಿ ಭಾರತದ ಪ್ರತಿನಿಧಿಯೊಂದಿಗೆ ಬಳ್ಳಾರಿ ರೈಲ್ವೆ ನಿಲ್ದಾಣ ವ್ಯವಸ್ಥಾಪಕ ಶೇಷಾದ್ರಿ ದೂರವಾಣಿ ಮೂಲಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ರು. ಸಿಂಗಲ್ ಇರುವ ಟ್ರ್ಯಾಕ್​​ಗಳನ್ನು ಡಬಲ್ ಟ್ರ್ಯಾಕ್​​​ಗಳನ್ನಾಗಿ ಮಾಡುತ್ತಿರುವುದರಿಂದ ಈ ರೀತಿಯಾಗಿ ಕೆಲವು ಎಕ್ಸ್‌ಪ್ರೆಸ್‌ ಮತ್ತು ಪ್ಯಾಸೆಂಜರ್ ರೈಲುಗಳು ತಡವಾಗಲಿಕ್ಕೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.