ಹೊಸಪೇಟೆ (ವಿಜಯನಗರ): ಮನೆಯೊಂದರ ಬೀಗ ಮುರಿದು ಬೆಳ್ಳಿ ಆಭರಣಗಳನ್ನು ದೋಚಿದ್ದ ಖದೀಮರು ಮಾರಲು ತೆರಳಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾರೆ.
ಹೊಸಪೇಟೆ ನಗರದ ಆನಂದ (28), ಬಿ.ಗೋವಿಂದ (33) ಬಂಧಿತರು. ನಗರದ ಕೌಲ್ ಪೇಟೆಯ ಮಟನ್ ಮಾರುಕಟ್ಟೆ ಓಣಿಯ ದಾದಾ ಖಲಂದರ್ ಎಂಬುವವರ ಮನೆಯಲ್ಲಿದ್ದ 28 ಸಾವಿರ ಮೌಲ್ಯದ ಬೆಳ್ಳಿಯ ಆಭರಣಗಳು ಕಳುವಾಗಿದ್ದವು. ಈ ಕುರಿತು ಜುಲೈ 17ರಂದು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಪತ್ತೆಗಾಗಿ ಪಟ್ಟಣ ಠಾಣೆಯ ಪಿಐ ಎಂ.ಶ್ರೀನಿವಾಸ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು.
ಪ್ರಕರಣದ ಬೆನ್ನತ್ತಿದ್ದ ಈ ತಂಡ, ನಗರದ ರಾಮ ಟಾಕೀಸ್ ವೃತ್ತದ ಬಳಿ ಬೆಳ್ಳಿ ಆಭರಣಗಳನ್ನು ಮಾರಲು ಯತ್ನಿಸುತ್ತಿದ್ದ ಇಬ್ಬರು ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಕಬ್ಬಿಣದ ರಾಡ್ಗಳು ಹಾಗೂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Viral ಆಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ : ನಳಿನ್ ಕುಮಾರ್ ಕಟೀಲ್