ETV Bharat / city

ಯಾವುದೇ ಕಾರಣಕ್ಕೂ ಹಂಪಿ ಉತ್ಸವ ನಿಲ್ಲಬಾರದು: ಉಗ್ರಪ್ಪ - Hampi festival issue

ಯಾವುದೇ ಕಾರಣಕ್ಕೂ ಹಂಪಿ ಉತ್ಸವ ನಿಲ್ಲಬಾರದು. ಹಂಪಿ ಭಾಗದ ಸೊಗಡು,‌ ಸಂಸ್ಕೃತಿ, ಕಲೆ, ಪ್ರತಿಭೆ ಗುರುತಿಸಲು ಪ್ರತಿ ಬಾರಿ 10 ಕೋಟಿ ಮೀಸಲಿಡಬೇಕೆಂದು ನಾವು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ ಎಂದು ಮಾಜಿ ಸಂಸದ ವಿ.ಎಸ್​.ಉಗ್ರಪ್ಪ ಹೇಳಿದರು.

ಯಾವುದೇ ಕಾರಣಕ್ಕೂ ಹಂಪಿ ಉತ್ಸವ ನಿಲ್ಲಬಾರದು..ವಿ.ಎಸ್​.ಉಗ್ರಪ್ಪ
author img

By

Published : Oct 20, 2019, 2:49 PM IST

ಬಳ್ಳಾರಿ: ಯಾವುದೇ ಕಾರಣಕ್ಕೂ ಹಂಪಿ ಉತ್ಸವ ನಿಲ್ಲಬಾರದು. ಹಂಪಿ ಭಾಗದ ಸೊಗಡು,‌ ಸಂಸ್ಕೃತಿ, ಕಲೆ, ಪ್ರತಿಭೆ ಗುರುತಿಸಲು ಪ್ರತಿ ಬಾರಿ 10 ಕೋಟಿ ಮೀಸಲಿಡಬೇಕೆಂದು ನಾವು ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದ್ದೇವೆ ಎಂದು ಮಾಜಿ ಸಂಸದ ವಿ.ಎಸ್​.ಉಗ್ರಪ್ಪ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಂಪಿ ಉತ್ಸವ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದ ಜನರ ಸ್ವಾಭಿಮಾನದ ಪ್ರತೀಕವಾದ ಹಂಪಿ ಉತ್ಸವ ಯಾಕೆ ಮಾಡಲಿಲ್ಲ. ನಾನು ಈ ವಿಚಾರದಲ್ಲಿ ರಾಜಕೀಯ ಮಾಡಲ್ಲ. ಇದು ನಮ್ಮ ಪಕ್ಷದ ಒತ್ತಾಯವೂ ಕೂಡ ಆಗಿದೆ. ನಾನು ಜಿಲ್ಲಾಡಳಿತದ ಜತೆ ಮಾತನಾಡಿದ್ದೇನೆ.‌ ತಕ್ಷಣ 10 ಕೋಟಿ ಹಣ ಬಿಡುಗಡೆ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ಒಂದು ವೇಳೆ ರಾಜ್ಯ ಸರ್ಕಾರ ಹಂಪಿ ಉತ್ಸವ ಮಾಡದೇ ಇದ್ದಲ್ಲಿ ಈ ಭಾಗದ ಜನಪ್ರತಿನಿಧಿಗಳು ಹಾಗೂ ಕಲಾವಿದರ ನಿಯೋಗ ಕೊಂಡೊಯ್ಯುತ್ತೇವೆ ಎಂದರು.

Intro:ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಸುದ್ದಿಗೋಷ್ಟಿ.

ವಿಶ್ವ ವಿಖ್ಯಾತ ಹಂಪಿ ಉತ್ಸವ ಮಾಡಬೇಕು. ನಾನು ಸಂಸದನಾಗಿದ್ದಾಗ ರಾಜ್ಯ ಸರಕಾರದ ಒತ್ತಡ ಮೇಲೆ ಒತ್ತಡ ತಂದು ಮಾಡಿಸಿದ್ದೆ. ಹಾಗೇ ದಸರಾ ಹಬ್ಬಕ್ಕೆ ಪ್ರೇರಣೆ ಹಂಪಿ, ಇದು ಪ್ರತಿ ವರ್ಷ ಜನರ ಉತ್ಸವ ಆಗಬೇಕು ಎಂದು ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಹೇಳಿದರು. Body:.

ನಗರದ ಜಿಲ್ಲಾ ಕಾಂಗ್ರೇಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಹಂಪಿ ಉತ್ಸವ ನಿಲ್ಲಬಾರದು. ಹಂಪಿಯ ಭಾಗದ ಸೋಗಡು,‌ ಸಂಸ್ಕೃತಿ, ಕಲೆ, ಪ್ರತಿಭೆಯನ್ನು ಗುರುತಿಸಲು ಪ್ರತಿಬಾರಿ ೧೦ ಕೋಟಿ ಮೀಸಲು ಇಡಬೇಕೆಂದು ನಾವು ಒತ್ತಾಯ ಮಾಡಿದ್ವಿ ಎಂದರು. ಪ್ರತಿ ವರ್ಷವೂ ನವೆಂಬರ್ ನಲ್ಲಿ ನಡೆಯುತ್ತದೆ, ಆದರೆ ಇನ್ನೂ ಎರಡು ವಾರಗಳಿವೆ. ಯಾವುದೇ ಸಿದ್ಧತೆ ಇಲ್ಲ ಇದು ನೋವಿನ ವಿಚಾರ ಎ.ದು ವು.ಎಸ್ ಉಗ್ರಪ್ಪ ಖಂಡಿಸಿದರು.

ಜಿಲ್ಲಾ ಉಸ್ತುವಾರಿ ಮಂತ್ರಿ ಎಲ್ಲಿದಿಯಪ್ಪಾ ಮಿಸ್ಟರ್ ಲಕ್ಷ್ಮಣ್ ಸೌದಿ, ಎಲ್ಲಿದಿಯಾ ನೀನು ಎಂದು ಪ್ರಶ್ನೆ ಮಾಡಿದ ಉಗ್ರಪ್ಪ :-

ಮಾತೇತ್ತಿದರೇ, ಸ್ವಾಭಿಮಾನಿ ಎನ್ನುವ ಜನ ನಾಯಕ ಸ್ವಾಭಿಮಾನಿ, ಢ್ಯಾಶ್, ಢ್ಯಾಶ್ ಎಂದು ಶ್ರೀ ರಾಮುಲು ಮೇಲೆ ವಾಗ್ದಾಳಿ ಮಾಡಿದರು.

ಈ ಭಾಗದ ಜನರ ಸ್ವಾಭಿಮಾನದ ಪ್ರತೀಕ ಹಂಪಿ ಉತ್ಸವ ಯಾಕೆ ಮಾಡಲಿಲ್ಲ. ನಾನು ಈ ವಿಚಾರದಲ್ಲಿ ರಾಜಕೀಯ ಮಾಡೋಲ್ಲ- ಇದು ನಮ್ಮ ಪಕ್ಷದ ಒತ್ತಾಯವೂ ಕೂಡ ಆಗಿದೆ. ನಾನು ಜಿಲ್ಲಾಡಳಿತದ ಜತೆ ಮಾತನಾಡಿದ್ದೇನೆ.‌
ತಕ್ಷಣ ೧೦ ಕೋಟಿ ಹಣ ಬಿಡುಗಡೆ ಮಾಡಿ, ಹಂಪಿ ಉತ್ಸವ ಮಾಡಲು ಒತ್ತಾಯಿಸಿದ ವಿಎಸ್.ಉಗ್ರಪ್ಪ.

ಹಂಪಿ ಉತ್ಸವ ಮಾಡಲು ಕಳೆದ ಬಾರಿ ಜೋಳಿಗೆ ಹಾಕಿ ಭಿಕ್ಷೆ ಬೇಡುತ್ತೇವೆ ಎಂದಿದ್ದ ಶಾಸಕರು ಈಗ ಎಲ್ಲಿದ್ದಾರೆ ಎಂದು ಕೇಳಿದ ವಿಎಸ್.ಉಗ್ರಪ್ಪ. ಈ ಬಾರಿ ಯಾಕೆ ಬೀದಿಗೆ ಹೋಗಿಲ್ಲ ಎಂದು ಶಾಸಕ ಸೋಮಶೇಖರ್ ರೆಡ್ಡಿಗೆ ಪ್ರಶ್ನೆ ಮಾಡಿದ ವಿಎಸ್. ಉಗ್ರಪ್ಪ.

ಒಂದು ವೇಳೆ ರಾಜ್ಯ ಸರಕಾರ ಹಂಪಿ ಉತ್ಸವ ಮಾಡದೇ ಇದ್ದಲ್ಲಿ ಈ ಭಾಗದ ಜನಪ್ರತಿನಿಧಿಗಳು, ಕಲಾವಿದರ ನಿಯೋಗ ಕೊಂಡೋಯ್ಯುತ್ತೇವೆ. ನವೆಂಬರ್ ತಿಂಗಳಲ್ಲಿ ಆಗಬೇಕೆಂಬುದಿದೆ, ಈ ಚುನಾವಣಾ ಆಯೋಗ ಒಂದು ಅಡ್ಡಿ ಇದೆ- ಚುನಾವಣೆ ಆಯೋಗ ಕೇಂದ್ರ ಸರಕಾರದ ಕೈಗೊಂಬೆಯಾಗಿದೆ. ತ್ರಿಪುರ ದಲ್ಲಿ ಶಿಕ್ಷೆಯಾದ ವ್ಯಕ್ತಿಯ ಶಿಕ್ಷೆ ಪ್ರಮಾಣ ಕಡಿಮೆ ಮಾಡಿದ ನಂತರ ಅವರಿಗೆ ಚುನಾವಣೆ ಸ್ಪರ್ಧೆಗೆ ಅವಕಾಶ ಮಾಡಿಕೊಡುತ್ತಾರೆ.

ಹೊಸಪೇಟೆ ಬೈ ಎಲೆಕ್ಷನ್ ಟಿಕೇಟ್ ವಿಚಾರ :-

ಒಂದು ಡಜನ್ ಗೂ ಹೆಚ್ಚು ಜನರು ಆಕಾಂಕ್ಷಿಗಳಿದ್ದಾರೆ ಹಾಗೇ ಹೊಸಪೇಟೆಯಂತಹ ಪ್ರದೇಶದಲ್ಲಿ ಗೂಡೂಸಾಬ್, ಗುಜ್ಜಲ ಜಯಲಕ್ಷ್ಮಿ ಜನ ಸಾಮಾನ್ಯರ ನಡುವೆ ಇದ್ದು ಗೆದ್ದು ಬಂದಿದ್ದಾರೆ. ಪಕ್ಷಕ್ಕೆ ದ್ರೋಹ ಮಾಡೋರು ಇದ್ದಾರೆ- ೨೨ ರಂದು ಸುಪ್ರೀಂಕೋರ್ಟ್ ನ ತೀರ್ಪು ಅನರ್ಹರ ಸಂಬಂಧ ಬರುತ್ತದೆ. ಆ ತೀರ್ಪಿನ ಮೇಲೆ ಮತ್ತೆ ಚುನಾವಣೆ ನಿರ್ಣಯ ಆಗುತ್ತದೆ. ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ‌ ಎಂದು ದೂರಿದರು.

Conclusion:ಲಿಂಗಾಯುತರನ್ನು ಕಚೇರಿಯಿಂದ ಹೊರ ಹಾಕಿದ್ದಾರೆ.
ಬಿಜೆಪಿ ಸರ್ಕಾರದ ರಾಜಕೀಯದಲ್ಲಿ ಮೂರ್ನಾಲ್ಕು ಗುಂಪುಗಳಿವೆ. ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯ್ತು ಅಂದಂಗೆ ಆಯ್ತು ಸದ್ಯದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಸರಕಾರ ನಿರ್ಜಿವವಾಗಿದೆ. ಭಾರತ ಹಸಿವಿನ ಸ್ಥಾನದಲ್ಲಿ 103 ನೇ ಸ್ಥಾನದಲ್ಲಿ ಇದೆ ಎಂದರು. ಇದು ನಾಚಿಕೆಯ ಸಂಗತಿಯಾಗಿದೆ. ಕೇಂದ್ರ , ರಾಜ್ಯ ಸರಕಾರಗಳ ವಿರುದ್ಧ ವಾಗ್ದಾಳಿ ನಡೆಸಿ ಉಗ್ರಪ್ಪ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.