ಬಳ್ಳಾರಿ:ಮಕ್ಕಳಿಗೆ ಆಸಕ್ತಿದಾಯಕ ವಿಷಯಗಳನ್ನು ಕಲಿಸಿ ಬಹುಮುಖ ಪ್ರತಿಭೆಯನ್ನು ಹೊರತರುವುದು ಪೋಷಕರ ಜವಾಬ್ದಾರಿ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ಎಸ್ ಸುಭಾಷ್ ತಿಳಿಸಿದರು.
ನಗರದ ಶೆಟ್ರು ಗುರುಶಾಂತಪ್ಪ ಸಂಯುಕ್ತ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಮಕ್ಕಳು ಯಾವುದನ್ನು ಆಸಕ್ತಿದಾಯಕವಾಗಿ ಕಲಿಯುತ್ತಾರೆ ಅದನ್ನು ಕಲಿಸಬೇಕು ಎಂದರು.
ಕಾರ್ಯಕ್ರಮದಆರಂಭದಲ್ಲಿ ಪುಲ್ವಾಮ ಹುತಾತ್ಮರಾದ ಯೋಧರರಿಗೆ ಮೇಣದಬತ್ತಿ ಹಚ್ಚಿ, ದೇಶಭಕ್ತಿ ಗೀತೆಯನ್ನು ಹಾಡುವ ಮೂಲಕ ನಮನ ಸಲ್ಲಿಸಿದರು. ನಂತರ ಮಾತನಾಡಿದ ಸುಮಾ ವಿಜಯ್, ರಂಗಭೂಮಿ ತನ್ನದೇ ಆದ ಗುಣಲಕ್ಷಣಗಳನ್ನು ಹೊಂದಿದೆ. ಅದನ್ನು ಮುಂದುವರೆಸಿಕೊಂಡು ಮತ್ತು ವಿವಿ ಮಟ್ಟದಲ್ಲಿ ರಂಗಭೂಮಿ ವಿಷಯವನ್ನು ಆರಂಭಿಸಬೇಕೆಂದರು.
ದೇವಾಲಯಗಳಲ್ಲಿನ ವಾಸ್ತುಶಿಲ್ಪಗಳ ಕುರಿತು ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ವೀರಶೈವ ವಿದ್ಯಾವರ್ಧಕ ಸಂಘ ಪ್ರಾರಂಭ ಮಾಡುತ್ತದೆ ಎಂದು ವಿ.ವಿ ಸಂಘದ ಅಧ್ಯಕ್ಷ ಉಡೇದ್ ಬಸವರಾಜ್ ತಿಳಿಸಿದರು.