ETV Bharat / city

ಕ್ಯಾಮೆರಾ ಪ್ರೇಮಿಯಾದ ಗಣಿನಾಡಿನ ವೈದ್ಯ ಡಾ. ಎಸ್ ಕೆ ಅರುಣ್.. - ಎಸ್.ಕೆ. ಪಾಂಡುರಂಗ ಆಸ್ಪತ್ರೆ

ಬಳ್ಳಾರಿಯ ಸತ್ಯನಾರಾಯಣಪೇಟೆಯ ನಿವಾಸಿಯಾದ ಡಾ. ಎಸ್ ಕೆ ಅರುಣ್ ವೃತ್ತಿಯಲ್ಲಿ ವೈದ್ಯರಾದರೂ ಹವ್ಯಾಸಿ ಛಾಯಾಗ್ರಾಹಕರಾಗಿ ಗುರುತಿಸಿಕೊಂಡಿದ್ದಾರೆ. ವಿಶ್ವ ಛಾಯಾಗ್ರಹಣ ದಿನಾಚರಣೆ ದಿನವಾದ ಇಂದು ಈಟಿವಿ ಭಾರತದೊಂದಿಗೆ ಅವರು ಫೋಟೋಗ್ರಾಫಿ ಬಗೆಗಿನ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ವೈದ್ಯ ಡಾ. ಎಸ್.ಕೆ. ಅರುಣ್
author img

By

Published : Aug 19, 2019, 7:53 PM IST

ಬಳ್ಳಾರಿ: ವೃತ್ತಿಯಲ್ಲಿ ವೈದ್ಯ, ಪ್ರವೃತ್ತಿಯಲ್ಲಿ ಫೋಟೋಗ್ರಾಫರ್​ ಆಗಿ ಗಮನ ಸೆಳೆದಿದ್ದಾರೆ ಗಣಿನಾಡಿನ ವೈದ್ಯ ಡಾ. ಎಸ್ ಕೆ ಅರುಣ್.. ವೈಲ್ಡ್​ಲೈಫ್​ ಫೋಟೋಗ್ರಾಫಿಯಲ್ಲಿ ಆಸಕ್ತಿ ಹೊಂದಿರೋ ಇವರು ಪ್ರಾಣಿ, ಪಕ್ಷಿಗಳು ಹಾಗೂ ನಿಸರ್ಗದ ವೈಶಿಷ್ಟ್ಯತೆಯನ್ನು ತಮ್ಮ ಕ್ಯಾಮೆರಾ ಕಣ್ಣಿನೊಳಗೆ ಕ್ರಿಯೇಟಿವ್​ ಆಗಿ ಸೆರೆಹಿಡಿದಿದ್ದಾರೆ.

bly-dr. arun
ವೈದ್ಯ ಡಾ. ಎಸ್ ಕೆ ಅರುಣ್ ಕ್ಯಾಮೆರಾ ಕಣ್ಣಲ್ಲಿ ಸೆರೆಯಾದ ಚಿತ್ರಗಳು..

ಮೂಲತಃ ಗಣಿನಾಡು ಬಳ್ಳಾರಿಯ ಸತ್ಯನಾರಾಯಣಪೇಟೆಯ ನಿವಾಸಿಯಾದ ಡಾ. ಎಸ್ ಕೆ ಅರುಣ್, ಎಸ್ ಕೆ ಪಾಂಡುರಂಗ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ವೃತ್ತಿಯ ಜೊತೆಗೆ ಹತ್ತು ವರ್ಷಗಳಿಂದ ಹವ್ಯಾಸಿ ಛಾಯಾಗ್ರಾಹಕನಾಗಿಯೂ ಗಮನ ಸೆಳೆದಿದ್ದಾರೆ. ಡಾ. ಎಸ್ ಕೆ ಅರುಣ್ ಈಟಿವಿ ಭಾರತದೊಂದಿಗೆ ಫೋಟೋಗ್ರಾಫಿ ಬಗೆಗಿನ ತಮ್ಮ ಅನುಭವವನ್ನು ಹಂಚಿಕೊಂಡಿದ್ದು ಹೀಗೆ...

ಫೋಟೋಗ್ರಾಫಿ ಅನುಭವ ಹಂಚಿಕೊಂಡ ಡಾ. ಎಸ್ ಕೆ ಅರುಣ್..

ನನ್ನ ಕ್ಯಾಮರಾದಲ್ಲಿ (Nikon 'D'4 500mm) ಸೆರೆಯಾದ ಕೆಲ ಆಯ್ದ ಫೋಟೋಗಳು ಹಂಪಿ ಉತ್ಸವದಲ್ಲಿ ಪ್ರದರ್ಶನಗೊಂಡಿದೆ.‌ ಕೆಲವು ಫೋಟೋಗಳಿಗೆ ಪ್ರಶಸ್ತಿ ಕೂಡ ಬಂದಿದೆ ಅಂತಾರೆ ಡಾ. ಎಸ್‌ ಕೆ ಅರುಣ್‌.

bly-dr. arun
ಡಾ. ಅರುಣ್ ಅದ್ಭುತ ಫೋಟೋಗ್ರಾಫಿ..

ಸತ್ಯನಾರಾಯಣ ಪೇಟೆ ನಿವಾಸಿಗಳಾದ ಡಾ. ಎಸ್.ಕೆ. ಪಾಂಡುರಂಗರಾವ್​, ಮಾಯಾ ದಂಪತಿಯ ಪುತ್ರ ಡಾ. ಎಸ್‌ ಕೆ ಅರುಣ್, ಹತ್ತು ವರ್ಷಗಳಿಂದ ಹವ್ಯಾಸಿ ಫೋಟೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಹವ್ಯಾಸಿ ವೃತ್ತಿಯ ಆರಂಭಿಕ ದಿನಗಳಲ್ಲಿ‌ ಹೆಚ್ಚಾಗಿ ಪಕ್ಷಿಗಳ ಫೋಟೋ ಸೆರೆ ಹಿಡಿದಿರುವುದಾಗಿ ಅವರು ನೆನಪಿಸಿಕೊಂಡರು.

ಕುಟುಂಬ ಸದಸ್ಯರೊಂದಿಗೆ ಅರಣ್ಯ ಪ್ರದೇಶದಲ್ಲಿ ಟ್ರಿಪ್:

bly-dr. arun
ಕುಟುಂಬ ಸದಸ್ಯರೊಂದಿಗೆ ಡಾ. ಎಸ್ ಕೆ ಅರುಣ್ ಅರಣ್ಯ ಪ್ರದೇಶದಲ್ಲಿ ಟ್ರಿಪ್..

ಅರುಣ್ ತಿಂಗಳಿಗೊಮ್ಮೆ ಅರಣ್ಯ ಪ್ರದೇಶಕ್ಕೆ ಟ್ರಿಪ್ ಹೋಗುವ ಹವ್ಯಾಸವನ್ನು ಇಟ್ಟುಕೊಂಡಿದ್ದಾರಂತೆ. ನನ್ನೊಂದಿಗೆ ನನ್ನ ಪತ್ನಿಯಾದ ಡಾ.ಎಸ್.ಕೆ. ಚೇತನಾ ಅರುಣ್, ಪುತ್ರ ಅರ್ಚಿತ್ ಹಾಗೂ ಬಾಲ್ಯದ ಗೆಳೆಯರೊಂದಿಗೆ ಟ್ರಿಪ್ ಹೋಗುತ್ತೇನೆ. ವೈದ್ಯ ವೃತ್ತಿ ನನಗೆ ಜೀವನಾಂಶ ನೀಡೋ ವೃತ್ತಿಯಾದ್ರೆ, ಫೋಟೋಗ್ರಾಫಿ ನನ್ನಿಷ್ಟದ ಪ್ರವೃತ್ತಿಯಾಗಿದೆ. ಹಾಗಾಗಿ ಈ ಹವ್ಯಾಸಿ ವೃತ್ತಿಯನ್ನು ಮುಂದುವರಿಸಿರುವೆ ಎನ್ನುತ್ತಾರೆ ಡಾ. ಅರುಣ್​.

Intro:ವೈದ್ಯ ವೃತ್ತಿಯಿಂದ ಹವ್ಯಾಸಿ ಪೋಟೋಗ್ರಾಫರಾದಾಗ
ಪಕ್ಷಿ - ಪರಿಸರ ಪ್ರೇಮಿಯಾಗಲು ಹೊರಟ ಗಣಿನಾಡಿನ ಈ ವೈದ್ಯ
ಬಳ್ಳಾರಿ: ವೈದ್ಯ ವೃತ್ತಿಯ ಜೊತೆಜೊತೆಗೆ ಸತತ ಹತ್ತು ವರ್ಷಗಳ ಕಾಲ ಹವ್ಯಾಸಿ ಪೋಟೋಗ್ರಾಫರಾಗಿ ಗಣಿನಾಡಿನ ವೈದ್ಯರೊಬ್ಬರು ಹೊರಹೊಮ್ಮಿದ್ದಾರೆ.
ವಿಶ್ವದ ವಿಶೇಷತೆವುಳ್ಳ ಪಕ್ಷಿಗಳು, ಪ್ರಾಣಿಗಳು ಹಾಗೂ ಆ ದಟ್ಟ ಕಾಡಿನೊಳಗಣದ ಪರಿಸರ ಮತ್ತು ಪ್ರಕೃತಿಯ ಸೊಬಗನು ತನ್ನ ಕ್ಯಾಮರಾ ಕಣ್ಣಿನ ಸೆರೆಗೆ ಹಿಡಿಯೋದೆಂದ್ರೆ ಆ ವೈದ್ಯರಿಗೆ ಬಲು ಇಷ್ಟವಂತೆ.
ಹೌದು, ಗಣಿನಗರಿ ಬಳ್ಳಾರಿಯ ಸತ್ಯನಾರಾಯಣಪೇಟೆ ಮೂರನೇ ಅಡ್ಡರಸ್ತೆಯಲ್ಲಿರುವ ಎಸ್.ಕೆ.ಪಾಂಡುರಂಗ ಆಸ್ಪತ್ರೆಯ ವೈದ್ಯ ಡಾ. ಎಸ್.ಕೆ.ಅರುಣ್ ಅವರ ಹವ್ಯಾಸಿ ಪೋಟೋಗ್ರಾಫರ್ ವೃತ್ತಿಯ ಕುರಿತು ಅನುಭವವನ್ನು ಈ ಟಿವಿ ಭಾರತ್ ದೊಂದಿಗೆ ಹಂಚಿ ಕೊಂಡಿದ್ದು ಹೀಗೆ.
ವಿಶ್ವ ಫೋಟೋಗ್ರಾಫರ್ ದಿನಾಚರಣೆ ಶುಭಾಶಯ ಕೋರಿದ ಡಾ.ಎಸ್.ಕೆ.ಅರುಣ್ ಅವರು, ನನ್ನ (Nikon 'D'4 500mm) ಕ್ಯಾಮರಾದಲ್ಲಿ ಸೆರೆಯಾದ ಕೆಲ ಆಯ್ದ ಫೋಟೋಗಳು ಹಂಪಿ ಉತ್ಸವದಲ್ಲಿ ಪ್ರದರ್ಶನಗೊಂಡಿದೆ.‌ ಅತ್ಯಧ್ಬುತ ಫೋಟೋಗಳಿಗೂ ಕೂಡ ಪ್ರಶಸ್ತಿಯು ಬಂದಿದೆ ಎನ್ನುತ್ತಾರೆ ಅವರು.
ನಗರದ ಸತ್ಯನಾರಾಯಣ ಪೇಟೆ ನಿವಾಸಿಯಾದ ಡಾ.ಎಸ್.ಕೆ.ಪಾಂಡುರಂಗರಾವ್ ಹಾಗೂ ಧರ್ಮಪತ್ನಿ ಮಾಯ ಅವರ ಪುತ್ರರಾದ ಡಾ.ಎಸ್.ಕೆ‌.ಅರುಣ್ ಅವರು, ಸತತ ಹತ್ತು ವರ್ಷಗಳ ಹಿಂದೆಯಷ್ಟೇ ಈ ಹವ್ಯಾಸಿ ಪೋಟೋ ಗ್ರಾಫರ್ ವೃತ್ತಿಯನ್ನಾರಂಭಿಸಿದ್ದಾರೆ. ಈ ಹವ್ಯಾಸಿ ವೃತ್ತಿಯ ಆರಂಭಿಕ ದಿನಗಳಲ್ಲಿ‌ ಮೊದಲಿಗೆ ವಿಶ್ವದ ಪಕ್ಷಿಗಳನ್ನೇ ತನ್ನ ಕ್ಯಾಮರಾದಲ್ಲೇ ಸೆರೆ ಹಿಡಿದಿರುವುದಾಗಿ ಅವರ ನೆನಪಿಸಿ ಕೊಂಡಿದ್ದಾರೆ.
Body:ಕುಟುಂಬ ಸದಸ್ಯರೊಂದಿಗೆ ಅರಣ್ಯ ಪ್ರದೇಶದಲ್ಲಿ ಟ್ರಿಪ್: ವೈದ್ಯರಾದ ಡಾ.ಎಸ್.ಕೆ.ಅರುಣ್ ಅವರು ತಿಂಗಳಿಗೊಮ್ಮೆ
ಅಥವಾ ಎರಡು ತಿಂಗಳಿಗೊಮ್ಮೆಯಾದ್ರೂ ನಾನು ಅರಣ್ಯ ಪ್ರದೇಶಕ್ಕೆ ಟ್ರಿಪ್ ಹೋಗುವ ಹವ್ಯಾಸವನ್ನು ಇಟ್ಟುಕೊಂಡಿರುವೆ. ನನ್ನೊಂದಿಗೆ ನನ್ನ ಪತ್ನಿಯಾದ ಡಾ.ಎಸ್.ಕೆ.ಚೇತನಾ ಅರುಣ್, ಪುತ್ರ ಅರ್ಚಿತ್ ಅವರು ಸೇರಿ ನನ್ನ ಬಾಲ್ಯದ ಗೆಳೆಯರೊಂದಿಗೆ ಈ ಟ್ರಿಪ್ ನಲ್ಲಿರುತ್ತೇವೆ.
ಇಷ್ಟದ ಹವ್ಯಾಸಿ ವೃತ್ತಿ ಇದು: ವೈದ್ಯ ವೃತ್ತಿ ನನ್ನ ಜೀವನಾಂಶ ನೀಡೋ ವೃತ್ತಿಯಾದ್ರೆ, ಫೋಟೋಗ್ರಾಫಿ ವೃತ್ತಿಯು ಇಷ್ಟದ ವೃತ್ತಿಯಾಗಿದೆ. ಆಗಾಗಿ, ಈ ಹವ್ಯಾಸಿ ವೃತ್ತಿಯನ್ನು ಮುಂದು ವರಿಸಿರುವೆ ಎನ್ನುತ್ತಾರೆ ಡಾ.ಅರುಣ್.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವೈದ್ಯರ ಬೈಟ್ ಕಳಿಸಿರುವೆ. ಗಮನಿಸಿರಿ.
KN_BLY_1_WORLDfPHOTO_GRAPHER_DAY_DOCTOR_BYTE_7203310

WRAF APP ಮೂಲಕ ಈ ಪೋಟೋಗಳನ್ನು ಕಳಿಸಿರುವೆ. ಗಮನಿಸಿರಿ.
KN_BLY_1a_WORLD_PHOTO_GRAPHER_DAY_DOCTOR_PHOTOS_7203310

KN_BLY_1b_WORLD_PHOTO_GRAPHER_DAY_DOCTOR_PHOTOS_7203310

KN_BLY_1c_WORLD_PHOTO_GRAPHER_DAY_DOCTOR_PHOTOS_7203310

KN_BLY_1d_WORLD_PHOTO_GRAPHER_DAY_DOCTOR_PHOTOS_7203310

KN_BLY_1e_WORLD_PHOTO_GRAPHER_DAY_DOCTOR_PHOTOS_7203310

KN_BLY_1f_WORLD_PHOTO_GRAPHER_DAY_DOCTOR_PHOTOS_7203310

KN_BLY_1g_WORLD_PHOTO_GRAPHER_DAY_DOCTOR_PHOTOS_7203310

KN_BLY_1h_WORLD_PHOTO_GRAPHER_DAY_DOCTOR_PHOTOS_7203310

KN_BLY_1i_WORLD_PHOTO_GRAPHER_DAY_DOCTOR_PHOTOS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.