ETV Bharat / city

ಲಂಚಕ್ಕೆ ಬೇಡಿಕೆಯಿಟ್ಟ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಎಸಿಬಿ ಬಲೆಗೆ..

ವಿಶೇಷ ಭೂಸ್ವಾಧೀನ ಕಚೇರಿಯಲ್ಲಿ ಪರಿಹಾರ ಪಡೆಯಲು ಬರುವವರಿಂದ ಲಂಚಕ್ಕೆ ಬೇಡಿಕೆ ಇಡುತ್ತಿದ್ದ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ.

special-land-acquisition-officers-for-the-acb-trap
author img

By

Published : Oct 15, 2019, 6:16 PM IST

ಬಳ್ಳಾರಿ: ವಿಶೇಷ ಭೂಸ್ವಾಧೀನ ಕಚೇರಿಯಲ್ಲಿ ಪರಿಹಾರ ಪಡೆಯಲು ಬರುವವರಿಂದ ಲಂಚದ ಬೇಡಿಕೆ ಇಡುತ್ತಿದ್ದ ಇಬ್ಬರು ಅಧಿಕಾರಿಗಳು ಎಸಿಬಿ ಬಲೆಗೆ ಬಿದ್ದಿದ್ದಾರೆ. ಬಂಧಿತರನ್ನ ಸದ್ಯ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ರಾಷ್ಟ್ರೀಯ ಹೆದ್ಧಾರಿ ನಿರ್ಮಾಣಕ್ಕಾಗಿ ಭೂಮಿ ಕಳೆದುಕೊಂಡಿದ್ದ ರೈತ ಎ.ವೆಂಕಟರಮಣ ಅವರು ಪರಿಹಾರ ₹1,04,828 ಪಡೆಯಲು ಬಳ್ಳಾರಿ ವಿಶೇಷ ಭೂಸ್ವಾಧೀನ ಕಚೇರಿ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ ಕಚೇರಿಗೆ ಭೇಟಿ ನೀಡಿದ್ದರು. ಆರೋಪಿಗಳಾದ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಮತ್ತು ಕೆ.ಸಿದ್ದಪ್ಪ ₹8 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಅಲ್ಲದೆ, ದೂರವಾಣಿ ಮೂಲಕವೂ ಲಂಚ ಕೇಳಿದ್ದರು.

ಲಂಚ ನೀಡಲು ನಿರಾಕರಿಸಿದ ವೆಂಕಟರಮಣ ಇಂದು ಬೆಳಿಗ್ಗೆ 9 ಗಂಟೆಗೆ ಎಸಿಬಿಗೆ ದೂರು ನೀಡಿದ್ದರು. ದೂರವಾಣಿ ಮೂಲಕ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದನ್ನು ರೆಕಾರ್ಡ್​​ ಮಾಡಿಕೊಂಡು ಎಸಿಬಿಗೆ ನೀಡಿದ್ದಾರೆ. ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

Intro:ಬಳ್ಳಾರಿಯ ವಿಶೇಷ ಭೂಸ್ವಾದಿನ ಅಧಿಕಾರಿಗಳ ಕಚೇರಿಯಲ್ಲಿ ಪರಿಹಾರ ಪಡೆಯಲು ಬಂದ ಗ್ರಾಹಕರಿಂದ ಭೂಸ್ವಾಧಿನ ವಿಶೇಷ ಅಧಿಕಾರಿಗಳಿಂದ ಲಂಚದ ಬೇಡಿಕೆ, ಎಸಿಬಿ ಬಲಗೆ ಬಿದ್ದ ಇಬ್ಬರು ಅಧಿಕಾರಿಗಳುBody:.

ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಭೂಮಿಯನ್ನು ಕಳೆದುಕೊಂಡ ಎ.ವೆಂಕಟರಮಣ ಅವರಿಗೆ ಭೂಸ್ವಾದಿನಾಧಿಕಾರಿಗಳಿಂದ ಪರಿಹಾರ 1,04828 ರೂಪಾಯಿ ಪಡೆದುಕೊಳ್ಳಲು ಬಳ್ಳಾರಿಯ ವಿಶೇಷ ಭೂಸ್ವಾದಿನಗಳ‌ ಕಚೇರಿಗೆ , ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ ಎಲ್.ಎಲ್.ಸಿ ಕಾಲೋನಿಯಲ್ಲಿ ಬೇಟಿ ನೀಡಿದ್ದರು.

ಆದ್ರೇ ಭೂಸ್ವಾಶಿನ ಕಚೇರಿಯಲ್ಲಿ ಅಪಾದಿತ A1 ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ ಮತ್ತು ಅಪಾದಿತ A2 ಕೆ.ಸಿದ್ದಪ್ಪ ಇಬ್ಬರಿಗೆ ಸೇರಿ ಒಟ್ಟು 8000 ಸಾವಿರ ರೂಪಾಯಿ ಲಂಚದ ಬೇಡಿಕೆಯನ್ನು ಇಟ್ಟಿದ್ದಾರೆ ಆದ್ರೇ ಲಂವಮಚ ನೀಡಲು ನಿರಾಕರಿಸಿ ಎ.ವೆಂಕಟರಮಣ ಅವರು ಇಂದು ಬೆಳಿಗ್ಗೆ 9 ಗಂಟೆಗೆ ಎಸಿಬಿ ಕಚೇರಿಗೆ ದೂರು ನೀಡಿದ್ದಾರೆ.

ಆಪಾದಿತರಾದ ಇಸ್ಮಾಯಿಲ್ ಮತ್ತು ಸಿದ್ದಪ್ಪ ದೂರದಾರನೊಂದಿಗೆ ದೂರವಾಣಿ ಮೂಲಕ ಲಂಚದ ಬಗ್ಗೆ ಮಾತನಾಡಿದ್ದು ರೇರ್ಕಾಂಡಿ ಮಾಡಿಕೊಂಡು ಬಂದು ದೂರ ನೀಡಿದ್ದಾರೆ.

Conclusion:ಎಸಿಬಿ ಠಾಣೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಂದ ದಾಳಿ ಮಾಡಿ‌ ವಶಪಡಿಸಿಕೊಂಡಿದ್ದಾರೆ. ಇಬ್ಬರನ್ನು ನ್ಯಾಯಾಲಯಕ್ಕೆ ಕರದ್ಯೋದಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.