ETV Bharat / city

ಹಳೆ ದ್ವೇಷ, ಲವ್​ ವಿಚಾರ: ಬಳ್ಳಾರಿಯಲ್ಲಿ ರೌಡಿಶೀಟರ್​ ಹತ್ಯೆ - ರೌಡಿಶೀಟರ್​ ಮಹೇಂದ್ರ ಕೊಲೆ

ಹಳೆ ದ್ವೇಷ ಹಾಗೂ ಲವ್​ ಕೇಸ್​ ವಿಚಾರಕ್ಕೆ ಸಂಬಂಧಿಸಿದಂತೆ ರೌಡಿಶೀಟರ್​ವೋರ್ವನನ್ನು​ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬಳ್ಳಾರಿಯ ಹಾವಂಭಾವಿ ಬಳಿ ನಡೆದಿದೆ.

ರೌಡಿಶೀಟರ್
ರೌಡಿಶೀಟರ್
author img

By

Published : May 2, 2022, 9:55 AM IST

ಬಳ್ಳಾರಿ: ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ರೌಡಿಶೀಟರ್​ನೋರ್ವನನ್ನು​ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ಬಳ್ಳಾರಿಯ ಹಾವಂಭಾವಿ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ. ಮಹೇಂದ್ರ (34) ಕೊಲೆಯಾದವನು.

ಹತ್ಯೆಗೀಡಾದ ಮಹೇಂದ್ರ, ತಾಂಡಾ ರಮೇಶ ಎಂಬಾತನ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಇತ್ತಿಚೆಗಷ್ಟೇ ಜೈಲಿನಿಂದ ಹೊರ ಬಂದಿದ್ದ. ಈ ಹಿಂದೆಯೇ ಮೂರು ಬಾರಿ ಮಹೇಂದ್ರನ ಕೊಲೆಗೆ ಯತ್ನಿಸಲಾಗಿತ್ತು. ನಿನ್ನೆ ರಾತ್ರಿ ಮನೆಗೆ ತೆರಳುತ್ತಿದ್ದ ವೇಳೆ ಹಾವಂಭಾವಿ ಪ್ರದೇಶದಲ್ಲಿ ಅಡ್ಡಗಟ್ಟಿದ 20ಕ್ಕೂ ಹೆಚ್ಚು ದುಷ್ಕರ್ಮಿಗಳು, ಮಹೇಂದ್ರನ ಮೇಲೆ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಭೀಕರವಾಗಿ ಹತ್ಯೆ ಮಾಡಿದ್ದಾರೆ.

ಹಳೆ ದ್ವೇಷ, ಜೊತೆ ಹುಡುಗಿ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ಆಗಿದ್ದೇ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅದಾವತ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ನಡೆದಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಸ್ಪೈಸ್‌ ಜೆಟ್‌ ವಿಮಾನ ಇಳಿಕೆಯ ವೇಳೆ ಭಾರಿ ಟರ್ಬ್ಯುಲೆನ್ಸ್‌; ಪ್ರಯಾಣಿಕರಿಗೆ ಗಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.