ETV Bharat / city

ಪಾಲಿಕೆ ನೌಕರರ ವರ್ಗಾವಣೆಗೆ ಕಮಿಷನರ್​ ಶಿಫಾರಸು: ಠಿಕಾಣಿ ಹೂಡಿರುವ ಸಿಬ್ಬಂದಿಗೆ ತಳಮಳ - ಲೇಡಿ ಕಮಿಷನರ್ ಪ್ರೀತಿ ಗೆಹ್ಲೋಟ್

ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ 60ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬೇರೆಡೆ ವರ್ಗಾವಣೆ ಮಾಡಿ ಎಂದು ಸ್ವತಃ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

Lady Commissioner Preeti Gehlot
ಲೇಡಿ ಕಮಿಷನರ್ ಪ್ರೀತಿ ಗೆಹ್ಲೋಟ್
author img

By

Published : Jun 16, 2022, 12:21 PM IST

ಬಳ್ಳಾರಿ‌ : ಬಳ್ಳಾರಿ‌ ಮಾಹಾನಗರ ಪಾಲಿಕೆಗೆ ಮೇಜರ್​ ಸರ್ಜರಿ ಮಾಡಲು ಲೇಡಿ ಕಮಿಷನರ್ ಪ್ರೀತಿ ಗೆಹ್ಲೋಟ್​ ಮುಂದಾಗಿದ್ದಾರೆ. ಹತ್ತಾರು ವರ್ಷದಿಂದ ಪಾಲಿಕೆಯಲ್ಲಿಯೇ ಠಿಕಾಣಿ ಹೂಡಿರುವ 60ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ನೌಕರರನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ವರ್ಗಾವಣೆ ಮಾಡಿ ಎಂದು ನಗರಾಭಿವೃದ್ಧಿ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಶಿಫಾರಸು ಮಾಡಿದ್ದಾರೆ.

ಲೇಡಿ ಕಮಿಷನರ್ ಪ್ರೀತಿ ಗೆಹ್ಲೋಟ್ ಮಾಧ್ಯಮದೊಂದಿಗೆ ಮಾತನಾಡಿದರು.

ಒಂದೇ ಕಡೆ ಕರ್ತವ್ಯ ನಿರ್ವಹಿಸಿದರೆ ಭ್ರಷ್ಟಾಚಾರ, ಅಕ್ರಮ ವ್ಯವಹಾರ ಇನ್ನಿತರ ಕರ್ತವ್ಯ ಲೋಪ ಎಸಗುವ ಸಾಧ್ಯತೆ ಇರುವ ಕಾರಣಕ್ಕೆ ಪಾಲಿಕೆಯ ಲೇಡಿ ಕಮಿಷನರ್ ಪ್ರೀತಿ ಗೆಹ್ಲೋಟ್, ನೌಕರರ ವರ್ಗಾವಣೆಗೆ ನಗರಾಭಿವೃದ್ದಿ ಇಲಾಖೆ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ಜೇಷ್ಠತಾ ಆಧಾರದ ಮೇಲೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿ 3 ರಿಂದ 4 ವರ್ಷಕ್ಕೊಮ್ಮೆ ವರ್ಗಾವಣೆ ಮಾಡಬೇಕು. ಆದರೆ, ಈ ಪಾಲಿಕೆಯ ಅಧಿಕಾರಿಗಳು ಮಾತ್ರ ವರ್ಗಾವಣೆಗೊಂಡಿಲ್ಲ. ಹೀಗಾಗಿ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ 60ಕ್ಕೂ ಹೆಚ್ಚು ಸಿಬ್ಬಂದಿಯನ್ನು ಬೇರೆಡೆ ವರ್ಗಾವಣೆ ಮಾಡಿ ಎಂದು ಸ್ವತಃ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

5 ರಿಂದ 10 ವರ್ಷಗಳ ಅವಧಿಗೆ ಪಾಲಿಕೆಯ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎ,ಬಿ,ಸಿ ವೃಂದದ ಅಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಆಯುಕ್ತರು ಶಿಪಾರಸು ಮಾಡಿರುವುದು ವಿಶೇಷವಾಗಿದೆ. ಇದರಿಂದಾಗಿ ಹತ್ತಾರು ವರ್ಷದಿಂದ ಒಂದೇ ಸ್ಥಳದಲ್ಲಿ ಗೂಟ ಹೊಡೆದುಕೊಂಡು ಕುಳಿತಿರುವ ಪಾಲಿಕೆ ಅಧಿಕಾರಿಗಳಿಗೆ ತಳಮಳ ಶುರುವಾಗಿದೆ. ಯಾವ ಕಡೆ ತಮ್ಮನ್ನು ಎತ್ತಂಗಡಿ ಮಾಡುತ್ತಾರೆ ಎಂಬ ಆತಂಕ ಆರಂಭಗೊಂಡಿದೆ.

ಇವರಲ್ಲಿ ಕೆಲ ನೌಕರರನ್ನು ಈ ಹಿಂದೆ ಬೇರೆಡೆ ವರ್ಗಾವಣೆ ಮಾಡಿದರೂ ಪ್ರಭಾವ ಬಳಸಿ ಕೆಲ ತಿಂಗಳಲ್ಲಿ ಮತ್ತೆ ವಾಪಸ್​ ಆಗಿದ್ದಾರೆ. ಅಲ್ಲದೇ ಈ ಮನವಿ ಹಿಂದಕ್ಕೆ ಪಡೆಯುವಂತೆ ಈಗ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ಶಾಸಕರು ಹಾಗೂ ಸಚಿವರಿಂದ ಆಯುಕ್ತರ ಮೇಲೆ ಒತ್ತಡ ತರುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ರಾಜ್ಯ ಸರಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಹದಿನೈದು ದಿನ ವಿಸ್ತರಿಸಿ ಆದೇಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.