ಬಳ್ಳಾರಿ: ಬಳ್ಳಾರಿ ಜಿಲ್ಲೆ ವಿಭಜನೆ ಖಂಡಿಸಿ ರೈತರು ರಸ್ತಾ ರೋಖೋ ಚಳವಳಿ ನಡೆಸಿದರು.
ರೈತ ನಾಯಕ ಪ್ರೊ. ನಂಜುಂಡಸ್ವಾಮಿ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಳ್ಳಾರಿ ಹಾಗೂ ಚಾಗನೂರು ಸಿರಿವಾರ ನೀರಾವರಿ ಭೂ ರಕ್ಷಣೆ ಹೋರಾಟ ಸಮಿತಿಗಳ ವತಿಯಿಂದ ಬಳ್ಳಾರಿ ವಿಭಜನೆ ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ಕೆಲ ಕಾಲ ರೈತರು ಮಳೆಯಲ್ಲೇ ನಿಂತು ಪ್ರತಿಭಟಿಸಿದರು. ಮತ್ತು ಹಲಗೆ ಹೊಡೆಯುವ ಮೂಲಕ ದಾರಿ ಉದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ, ಗುತ್ತಿ ಚಂದ್ರಶೇಖರ ರೆಡ್ಡಿ, ಗಂಗಿರೆಡ್ಡಿ, ಟಿ.ಜಿ ವಿಠಲ್, ಅಸುಂಡಿ ಲೇಪಾಕ್ಷಿ ಮತ್ತು ಊರಿನ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.